ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೆನ್ನಬಸವಣ್ಣ ವಚನ ಧರ್ಮದ ಸಂವಿಧಾನಶಿಲ್ಪಿ: ಪಿನಾಕಪಾಣಿ

Published 18 ನವೆಂಬರ್ 2023, 14:19 IST
Last Updated 18 ನವೆಂಬರ್ 2023, 14:19 IST
ಅಕ್ಷರ ಗಾತ್ರ

ಬೆಂಗಳೂರು: ‘ಚೆನ್ನಬಸವಣ್ಣ ಎಂಬ ಚಿನ್ಮಯ ಜ್ಞಾನಿ, ವಚನ ಧರ್ಮದ ಸಂವಿಧಾನಶಿಲ್ಪಿ. ಆತನನ್ನು ಕನ್ನಡಿಗರು ಮರೆತಿದ್ದಾರೆ’ ಎಂದು ವಚನಜ್ಯೋತಿ ಬಳಗದ ಅಧ್ಯಕ್ಷ ಪಿನಾಕಪಾಣಿ ವಿಷಾದಿಸಿದರು.

ಕಲ್ಯಾಣ ಲೇಔಟಿನಲ್ಲಿ ಆಯೋಜಿಸಿದ್ದ ಚೆನ್ನಬಸವಣ್ಣ ಜಯಂತಿಯಲ್ಲಿ‌ ಅವರು ಉಪನ್ಯಾಸ ನೀಡಿದರು.

‘ಸಾವಿರಾರು ಮಠಗಳಿವೆ, ಲಕ್ಷಾಂತರ ಸಂಘ ಸಂಸ್ಥೆಗಳಿವೆ. ತಮ್ಮ ತಮ್ಮ ಮಠಗಳ ಸ್ವಾಮಿಗಳ ಜಯಂತಿ ಆಚರಿಸುವ, ತಮ್ಮ ಸಂಸ್ಥಾಪಕರ ದಿನಾಚರಣೆ ಆಚರಿಸುವ ನಮ್ಮ ಜನ ವಚನ ಧರ್ಮಕ್ಕೆ ಅಷ್ಟಾವರಣ, ಷಟಸ್ಥಲ, ಪಂಚಾಚಾರಗಳನ್ನು ಅಳವಡಿಸಿ ಸಂವಿಧಾನ ಬರೆದ ಚೆನ್ನಬಸವಣ್ಣನವರನ್ನು ನೆನಪಿಸಿಕೊಳ್ಳುವುದೇ ಇಲ್ಲ’ ಎಂದರು.

‘ಕನ್ನಡದ ವೀರರು- ಸಾಧಕರನ್ನು ನಿರ್ಲಕ್ಷ್ಯ ಮಾಡಿ ದಿಲ್ಲಿ ಗುಲಾಮರಾಗಿ, ಉತ್ತರ ಭಾರತೀಯರಿಗೆ ಜಯಕಾರ ಹಾಕುವ ಕೆಟ್ಟ ಪ್ರವೃತ್ತಿ ನಮ್ಮದಾಗಿದೆ’ ಎಂದು ಹೇಳಿದರು.

ಕಲ್ಯಾಣಕ್ರಾಂತಿಯ ನಂತರ ವಚನ ಸಾಹಿತ್ಯವನ್ನು ತನ್ನ ತಾಯಿ ಅಕ್ಕನಾಗಮ್ಮನವರೊಡಗೂಡಿ ಚೆನ್ನಬಸವಣ್ಣ ಸಂರಕ್ಷಿಸಿದರು. ಅವರು ರಕ್ಷಿಸಿರುವ 1,763 ವಚನಗಳಲ್ಲಿ ಅನುಭವ ಮಂಟಪದ ವಿಚಾರ ಮಂಥನದ ಸುವ್ಯವಸ್ಥಿತ ರೂಪ ಕಾಣಬಹುದು ಎಂದರು.

ವಚನ ಕಲಿಕಾ ತರಗತಿಯ ವಿದ್ಯಾರ್ಥಿಗಳು ಚೆನ್ನಬಸವಣ್ಣನವರ ವಚನಗಳನ್ನು ಹಾಡಿದರು. ಬಳಗದ ಮುಖ್ಯ ಕಾರ್ಯನಿರ್ವಾಹಕ ರಾಜಾಗುರುಪ್ರಸಾದ್, ಕಲ್ಯಾಣ ಲೇಔಟಿನ ಮುರುಗೇಶಯ್ಯ, ಕಲಿಕಾ ತರಗತಿಯ ಪ್ರಧಾನ ಸಂಚಾಲಕ ಎಚ್.ಬಿ. ದಿವಾಕರ್, ರಂಗ ಕಲಾವಿದ ಶಿವಲಿಂಗಮೂರ್ತಿ‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT