ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಾಚಾರ್ಯ ಸಂಘ ಪತ್ರಕ್ಕೆ ಆಕ್ಷೇಪ

Last Updated 7 ಜೂನ್ 2022, 20:17 IST
ಅಕ್ಷರ ಗಾತ್ರ

ಬೆಂಗಳೂರು: ‘ವಿಭೂತಿಪುರ ಮಠದ ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಮೂಲಕ ವೀರಶೈವ ಶಿವಾ ಚಾರ್ಯ ಸಂಘದವರು ಮುಖ್ಯಮಂತ್ರಿಗಳಿಗೆ ನೀಡಿದ ಪತ್ರದಲ್ಲಿನ ಸಂಗತಿಗಳು ಸತ್ಯಕ್ಕೆ ದೂರವಾಗಿದ್ದುಪ್ರಕ್ಷುಬ್ಧ ಸ್ಥಿತಿ ಯಲ್ಲಿ ಬೇಳೆ ಬೇಯಿಸಿಕೊಳ್ಳುವ ಪ್ರಯತ್ನ’ ಎಂದುಜಾಗತಿಕ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಸ್‌.ಎಂ.ಜಾಮದಾರ ಹೇಳಿದ್ದಾರೆ.

‘ನಾವು ಸುಮ್ಮನೆ ಕುಳಿತರೆ ಅದೇ ಸತ್ಯವೆಂದು ಅಥೈ೯ಸಲು ಅವಕಾಶ ಕೊಟ್ಟಂತಾಗುತ್ತದೆ.ಇದು ಯಾವುದೇ ರಾಜಕೀಯ ವೋಟ್‌ ಬ್ಯಾಂಕ್ ಪಾಲಿ ಟಿಕ್ಸ್ ಅಲ್ಲ. ಶಿವಾಚಾರ್ಯರು ಕೂಡಲೇ ಇದನ್ನು ನಿಲ್ಲಿಸಬೇಕು. ಎಲ್ಲರನ್ನೂ ಎಲ್ಲ ಕಾಲಕ್ಕೂ ಮೂಖ೯ರನ್ನಾಗಿಸುವುದು ಸಾಧ್ಯವಿಲ್ಲ. ಆದ್ದರಿಂದ, ಮಹಾಸಭಾದ ಪ್ರತಿ ಜಿಲ್ಲಾ ಮತ್ತು ತಾಲೂಕು ಘಟಕಗಳು ಮಾಧ್ಯಮ ಗೋಷ್ಠಿಗಳನ್ನು ನಡೆಸಿ ಶಿವಾಚಾರ್ಯರ ಗೊಂದಲಗಳನ್ನು ವಿರೋಧಿಸಿ ಸತ್ಯ ಏನೆಂದು ಜನರಿಗೆ ತಿಳಿಸಬೇಕು’ ಎಂದು ಹೇಳಿದ್ದಾರೆ.

ಶಿವಾಚಾರ್ಯರಿಗೆ ಕೇಳಬಹುದಾದ ಪ್ರಶ್ನೆಗಳನ್ನು ಪಟ್ಟಿ ಮಾಡಿರುವ ಅವರು, ‘ಬಸವಣ್ಣ ಯಾರಿಂದಲೂ ದೀಕ್ಷೆ ಪಡೆಯಲಿಲ್ಲ. ವೀರಶೈವದ ಪ್ರಚಾರ ಮಾಡಲಿಲ್ಲ. ಹೊಸ ಲಿಂಗಾಯತ ಧಮ೯ವನ್ನು ಸ್ಥಾಪಿಸಿದರು’ ಎಂಬುದನ್ನು ಮನದಟ್ಟು ಮಾಡಿ’ ಎಂದು ತಿಳಿಸಿದ್ದಾರೆ.

ಅಂಶಗಳ ಪಟ್ಟಿ

*ವೀರಶೈವರು ಬಹುಕಾಲದಿಂದ ಬಸವಣ್ಣ ಮತ್ತು ಬಸವ ತತ್ವಗಳನ್ನು ವಿರೋಧಿಸುತ್ತಲೇ ಬಂದಿದ್ದಾರೆ.

*ಇತ್ತೀಚಿನವರೆಗೂ ವೀರಶೈವ ಪಂಚಾಚಾರ್ಯರು ಬಸವಣ್ಣನವರ ಫೋಟೊ ಹಾಕಿದ ಕಾರ್ಯಕ್ರಮಕ್ಕೆ ಬರುತ್ತಿರಲಿಲ್ಲ.

*ತಾವೇ ಧಮ೯ ಸಂಸ್ಥಾಪಕರೆಂದೂ ಬಸವಣ್ಣ ತಮ್ಮ ಶಿಷ್ಯರೆಂದು ಸುಳ್ಳು ಗಳನ್ನು ಹೇಳುತ್ತಲೇ ಬಂದಿದ್ದಾರೆ. ಅದು ಅವರ ಕಟ್ಟುಕತೆ. ಅದಕ್ಕೆ ಯಾವುದೇ ಆಧಾರವಿಲ್ಲ.

*ಶರಣರ ಇಪ್ಪತ್ತೆರಡು ಸಾವಿರ ವಚನಗಳನ್ನು 17 ರಿಂದ 20ನೆಯ ಶತಮಾನದವರೆಗೆ 300 ವರ್ಷ ಮುಚ್ಚಿಟ್ಟದ್ದವರೇ ವೀರಶೈವರು.

*ಶರಣರ ವಚನಗಳನ್ನು ತಿದ್ದಿ ಕೆಲವು ಭ್ರಷ್ಟತೆಗಳನ್ನು ಅವುಗಳಲ್ಲಿ ತುರುಕಿದವರೇ ವೀರಶೈವರು. 648 ವಚನಗಳಲ್ಲಿ ಸಂಸ್ಕೃತ ಶ್ಲೋಕಗಳನ್ನು ಅನಗತ್ಯವಾಗಿ ಸೇರಿದ್ದಾರೆ. ಸುಮಾರು ಇನ್ನೂರು ವಚನಗಳಲ್ಲಿ 'ಲಿಂಗಾಯತ ' ಶಬ್ದವನ್ನು ತೆಗೆದು 'ವೀರಶೈವ ' ಶಬ್ದವನ್ನು ಸೇರಿಸಿದವರೇ ವೀರಶೈವರು.

*ಈಗ ಪಠ್ಯಪುಸ್ತಕ ವಿವಾದದಲ್ಲಿ ಅನಗತ್ಯವಾಗಿ ಮೂಗುತೂರಿಸಿ ತಮಗೆ ಅನುಕೂಲವಾಗುವಂತೆ ತಿದ್ದುಪಡಿ ಮಾಡಿಸಿಕೊಳ್ಳಲು ಮಹಾಂತಲಿಂಗ ಶಿವಾಚಾರ್ಯ ಮುಖಾಂತರ ಮುಖ್ಯಮಂತ್ರಿಗಳಿಗೆ ತಪ್ಪು ಮಾಹಿತಿ ನೀಡುವ ಪ್ರಯತ್ನಕ್ಕೆ ಕೈಹಾಕಿದ್ದಾರೆ. ಇದನ್ನು
ನಾವು ವಿರೋಧಿಸದಿದ್ದರೆ ಇದೇ ಸತ್ಯವೆಂದು ಭಾವಿಸಿ ತಿದ್ದುಪಡಿ ಮಾಡಲು ಅವಕಾಶ ನೀಡಿ ದಂತಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT