ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಕರ್ನಾಟಕದ ಲೇಖಕರಿಂದ ಕೃತಿಗಳ ಆಹ್ವಾನ

Published 30 ನವೆಂಬರ್ 2023, 15:52 IST
Last Updated 30 ನವೆಂಬರ್ 2023, 15:52 IST
ಅಕ್ಷರ ಗಾತ್ರ

ಬೆಂಗಳೂರು: ವೀರಲೋಕ ಪ್ರಕಾಶನದಿಂದ ‘ಉತ್ತರ ಪರ್ವ–ಉತ್ತರ ಕರ್ನಾಟಕ ಸಾಹಿತ್ಯ ಸುಗ್ಗಿ’ ಎಂಬ ಕಾರ್ಯಕ್ರಮದ ಅಡಿಯಲ್ಲಿ ಉತ್ತರ ಕರ್ನಾಟಕದ ಜಿಲ್ಲೆಗಳ ಲೇಖಕರಿಂದ ಕೃತಿಗಳನ್ನು ಆಹ್ವಾನಿಸಲಾಗಿದೆ.

‘ಕಥೆ, ಕಾದಂಬರಿ ಅಥವಾ ಇನ್ನಿತರ ಸೃಜನಶೀಲ ಕೃತಿಗಳು ಸ್ವಂತ ರಚನೆಯಾಗಿರಬೇಕು. ಕೃತಿಗಳು ಕನಿಷ್ಠ 120 ಪುಟಗಳು, ಗರಿಷ್ಠ 200 ಪುಟಗಳನ್ನು ಹೊಂದಿರಬೇಕು. ಕೃತಿಯ ಸಾರಾಂಶ ಅಥವಾ ಒಂದು ಭಾಗವನ್ನು (10 ಪುಟಗಳನ್ನು ಮೀರದಂತೆ) 2023ರ ಡಿ. 31ರೊಳಗೆ uttaraparva@gmail.com ಇ–ಮೇಲ್‌ ವಿಳಾಸಕ್ಕೆ ಕಳಿಸಬೇಕು. ಮೊದಲ ಸುತ್ತಿನಲ್ಲಿ ಆಯ್ಕೆಯಾಗುವ ಕೃತಿಯ ಬೆರಳಚ್ಚು ಪ್ರತಿಯನ್ನು 2024ರ ಫೆಬ್ರವರಿ 28ರೊಳಗೆ ಕಳಿಸಬೇಕು’ ಎಂದು ವೀರಲೋಕ ಪ್ರಕಾಶನದ ವೀರಕಪುತ್ರ ಶ್ರೀನಿವಾಸ್, ರಾಜಶೇಖರ ಮಠಪತಿ (ರಾಗಂ) ತಿಳಿಸಿದ್ದಾರೆ. 

‘ಕೃತಿಗಳು ಮುಖ್ಯವಾಗಿ ಪ್ರಾದೇಶಿಕತೆ, ಭಾಷೆ, ಸಂಸ್ಕೃತಿಯನ್ನು ಪ್ರತಿನಿಧಿಸಬೇಕು. ಕೃತಿಗಳ ಆಯ್ಕೆಯಲ್ಲಿ ವೀರಲೋಕ ಸಂಪಾದಕ ಹಾಗೂ ಸದಸ್ಯ ಮಂಡಳಿಯ ತೀರ್ಮಾನವೇ ಅಂತಿಮವಾಗಿರುತ್ತದೆ. 2024ರಲ್ಲಿ ಏಪ್ರಿಲ್‌ ತಿಂಗಳಲ್ಲಿ ವೀರಲೋಕ ಆಯೋಜಿಸುವ ‘ಉತ್ತರ ಪರ್ವ ಸಾಹಿತ್ಯ ಸುಗ್ಗಿ’ ಕಾರ್ಯಕ್ರಮದಲ್ಲಿ ಆಯ್ಕೆಯಾದ ಕೃತಿಗಳನ್ನು ಬಿಡುಗಡೆ ಮಾಡಲಾಗುವುದು’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಾಹಿತಿಗೆ: 70221 22121, 88612 12172 ಸಂಪರ್ಕಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT