ಮಂಗಳವಾರ, ಮೇ 11, 2021
28 °C

ಗ್ರಾಮಸ್ಥರಿಂದ ಅಂಡರ್‌ಪಾಸ್ ಸ್ವಚ್ಛ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೆಸರಘಟ್ಟ: ದಾಸನಪುರ ಹೋಬಳಿಯ ಚಿಕ್ಕಬಿದರಕಲ್ಲು ಗ್ರಾಮದ ಅಂಡರ್‌ಪಾಸ್‌ನಲ್ಲಿ ಬಹುದಿನಗಳಿಂದ ರಾಶಿ ಬಿದ್ದಿದ್ದ ಕಸವನ್ನು ಗ್ರಾಮಸ್ಥರು ಸ್ವಯಂಪ್ರೇರಿತವಾಗಿ ಸೋಮವಾರ ಸ್ವಚ್ಛಗೊಳಿಸಿದರು.

‘ಈ ಅಂಡರ್‌ಪಾಸ್‌ನಲ್ಲಿ ಪ್ರತಿದಿನ ಎರಡು ಸಾವಿರಕ್ಕೂ ಹೆಚ್ಚು ಜನ ಸಂಚರಿಸುತ್ತಾರೆ. ಕಸದ ದುರ್ವಾಸನೆಯಿಂದಾಗಿ ಜನ ಮೂಗಿ ಮುಚ್ಚಿ ಸಾಗುತ್ತಿದ್ದರು. ಇಲ್ಲಿನ ಕಸ ತೆರವು ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದೆವು. ಆದರೂ, ಕ್ರಮ ಜರುಗಿಸಲಿಲ್ಲ. ಹಾಗಾಗಿ, ಗ್ರಾಮಸ್ಥರೇ ತಂಡ ಕಟ್ಟಿಕೊಂಡು ಕಸ ತೆರವು ಮಾಡಲು ಮುಂದಾದೆವು’ ಎಂದು ತಂಡದ ನೇತೃತ್ವ ವಹಿಸಿದ್ದ ಚಿಕ್ಕಬಿದರಕಲ್ಲು ಗ್ರಾಮದ ಜೆ.ಪಿ.ನಾರಾಯಣಪ್ಪ ತಿಳಿಸಿದರು.

‘ಪ್ರತಿ ಕೆಲಸವನ್ನು ಅವರು ಬಂದು ಮಾಡ್ತಾರೆ, ಇವರು ಬಂದು ಮಾಡ್ತಾರೆ ಎಂದು ಕಾಯುತ್ತಾ ಕುಳಿತರೆ, ಗ್ರಾಮದ ಸಮಸ್ಯೆಗಳು ಹಾಗೆಯೇ ಉಳಿಯುತ್ತವೆ. ಕಸದಿಂದ ಆರೋಗ್ಯ ಸಮಸ್ಯೆಗಳೂ  ಕಾಡುತ್ತವೆ. ಜನರೂ ಕೈಜೋಡಿಸಿ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು’ ಎಂದು ಗ್ರಾಮ ಪಂಚಾಯಿತಿ ಮಾಜಿ ಸದಸ್ಯೆ ವಿಜಯಲಕ್ಷ್ಮಿ ತಿಳಿಸಿದರು.

‘ಸ್ವಚ್ಛಗೊಂಡ ಅಂಡರ್‌ಪಾಸ್‌ ನಲ್ಲಿ ಚಿತ್ರಗಳನ್ನು ಬಿಡಿಸಲು ಸ್ನೇಹಿತರನ್ನು ಸೇರಿಸಿಕೊಂಡೆ. ಎಲ್ಲರೂ ಒಗ್ಗೂಡಿ  ಚಿತ್ತಾರಗಳನ್ನು ಬಿಡಿಸಿದ್ದೇವೆ. ಈಗ ಇಲ್ಲಿ ಯಾರೂ ಕಸ ಹಾಕುತ್ತಿಲ್ಲ’ ಎಂದು ಎಂಜಿನಿಯರಿಂಗ್ ವಿದ್ಯಾರ್ಥಿ ಚೇತನ್ ಸಂತಸ ವ್ಯಕ್ತಪಡಿಸಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು