ಬೆಂಗಳೂರು: ‘ವಿಶ್ವ ತಂಬಾಕು ರಹಿತ ದಿನ’ದ ಅಂಗವಾಗಿ ನಗರ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ಕೋಟ್ಪಾ ಕಾಯ್ದೆ(ಸಿಗರೇಟ್ ಮತ್ತಿತರ ತಂಬಾಕು ಉತ್ಪನ್ನಗಳ ಕಾಯ್ದೆ) ಉಲ್ಲಂಘಿಸಿದವರ ವಿರುದ್ಧ 11,507 ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ನಗರ ಪೊಲೀಸ್ ಕಮಿಷನರ್ ಬಿ.ದಯಾನಂದ ತಿಳಿಸಿದರು.

ನಗರದಾದ್ಯಂತ ವೈನ್ಶಾಪ್, ಬಾರ್ ಆ್ಯಂಡ್ ರೆಸ್ಟೋರೆಂಟ್, ಲಾಡ್ಜ್ಗಳು, ಪಿ.ಜಿಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಮೇ 31ರಿಂದ ಜೂನ್ 2ರವರೆಗೆ ವಿಶೇಷ ಕಾರ್ಯಾಚರಣೆ ನಡೆಸಲಾಯಿತು ಎಂದು ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾಹಿತಿ ನೀಡಿದರು.

ಕೋಟ್ಪಾ ಕಾಯ್ದೆಯ ಕಲಂ 4ರ ಅಡಿಯಲ್ಲಿ 11,324 ಪ್ರಕರಣ ದಾಖಲಿಸಿಕೊಂಡು ₹20.91 ಲಕ್ಷ ದಂಡ ವಸೂಲಿ ಮಾಡಲಾಗಿದೆ. ಕಲಂ 6ಎ ಅಡಿ 135 ಪ್ರಕರಣ ದಾಖಲು ಮಾಡಿಕೊಂಡು ₹22 ಸಾವಿರ ದಂಡ ಸಂಗ್ರಹ ಮಾಡಲಾಗಿದೆ. ಕಲಂ 6ಬಿ ಅಡಿ 48 ಪ್ರಕರಣ ದಾಖಲಿಸಿಕೊಂಡು, ₹5 ಸಾವಿರ ದಂಡ ವಸೂಲಿ ಮಾಡಲಾಗಿದೆ. ಒಟ್ಟು ₹21.19 ಲಕ್ಷ ದಂಡ ವಸೂಲಿ ಮಾಡಲಾಗಿದೆ ಎಂದು ಹೇಳಿದರು.

ಕಾಯ್ದೆಯ ಕಲಂ 4ರ (ತಿದ್ದುಪಡಿ) ಪ್ರಕಾರ ಸಾರ್ವಜನಿಕ ಪ್ರದೇಶಗಳಲ್ಲಿ ಸಿಗರೇಟು ಸೇವನೆ ಮಾಡುವಂತಿಲ್ಲ ಹಾಗೂ ತಂಬಾಕು ಜಗಿದು ಉಗಿಯುವಂತಿಲ್ಲ. ಉಲ್ಲಂಘಿಸಿದರೆ ₹1 ಸಾವಿರ ದಂಡ ವಿಧಿಸಲಾಗುವುದು ಎಂದು ಎಚ್ಚರಿಸಿದರು.

ಕಲಂ 4ಎ ಅನ್ವಯ ರೆಸ್ಟೋರೆಂಟ್ ಅಥವಾ ಹೋಟೆಲ್ಗಳಲ್ಲಿ ಹುಕ್ಕಾ ಬಾರ್ ಸ್ಥಾಪಿಸುವಂತಿಲ್ಲ. ಸಿಗರೇಟ್ಗಳು ಹಾಗೂ ಇತರೆ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡಲು ಪರವಾನಗಿ ಪಡೆದುಕೊಳ್ಳಬೇಕು. ಸಿಗರೇಟ್ ಹಾಗೂ ಇತರೆ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡಲು ಬಿಬಿಎಂಪಿ ಕಮಿಷನರ್ರಿಂದ ಪರವಾನಗಿ ಪಡೆದುಕೊಳ್ಳಬೇಕು. ಪರವಾನಗಿ ಪಡೆದುಕೊಳ್ಳದೇ ಮಾರಾಟ ಮಾಡಿದ್ದು ಕಂಡುಬಂದರೆ ದಂಡ ವಿಧಿಸಲಾಗುವುದು ಎಂದು ಮಾಹಿತಿ ನೀಡಿದರು.

ಕಲಂ 5ರ ಅಡಿ ತಂಬಾಕು ಉತ್ಪನ್ನಗಳ ಜಾಹೀರಾತು ಮತ್ತು ಪ್ರಚಾರದ ಮೇಲೆ ನೇರ/ ಪರೋಕ್ಷ ನಿಷೇಧ ಹೇರಲಾಗಿದೆ. ಮೊದಲ ಅಪರಾಧಕ್ಕೆ ಎರಡು ವರ್ಷ ಕಾರಾಗೃಹ ಶಿಕ್ಷೆ ಅಥವಾ ₹1 ಸಾವಿರ ದಂಡ, ಪುನರಾವರ್ತಿತ ಅಪರಾಧಕ್ಕೆ ಐದು ವರ್ಷ ಕಾರಾಗೃಹ ಶಿಕ್ಷೆ ಅಥವಾ ₹5 ಸಾವಿರ ದಂಡವಿದೆ ಎಂದು ಮಾಹಿತಿ ನೀಡಿದರು.

ಯಾವುದೇ ಹೋಟೆಲ್, ಬಾರ್ ಮತ್ತು ರೆಸ್ಟೋರೆಂಟ್ಗಳು 30ಕ್ಕಿಂತ ಹೆಚ್ಚು ಆಸನಗಳು ಅಥವಾ 30ಕ್ಕಿಂತ ಹೆಚ್ಚು ಕೊಠಡಿಗಳನ್ನು ಹೊಂದಿದ್ದರೆ ಧೂಮಪಾನ ಪ್ರದೇಶವನ್ನು ನಿಗದಿ ಪಡಿಸಬೇಕು ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.