ಗುರುವಾರ , ಸೆಪ್ಟೆಂಬರ್ 23, 2021
20 °C

ಕೋಟಿ ವೃಕ್ಷ ಸೈನ್ಯದ ಕಾರ್ಯಕ್ಕೆ ಮುಖ್ಯಮಂತ್ರಿ ಮೆಚ್ಚುಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೋಟಿ ವೃಕ್ಷ ಸೈನ್ಯವು, 75ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಸಿಟಿಜನ್ಸ್‌ ಫಾರ್‌ ಸಿಟಿಜನ್ಸ್‌, ಕ್ಲಿಪ್‌ ಅಲ್ಯೂಮ್ನಿ ಅಸೋಸಿಯೇಷನ್‌, ಪಬ್ಲಿಕ್‌ ಇಶ್ಯೂಸ್‌ ಫೋರಂ, ನಮ್ಮ ಬೆಂಗಳೂರು ಫೌಂಡೇಷನ್‌, ಅನ್ವಯ, ಆದ್ಯತೆ, ಸ್ವರ್ಣ ಭಾರತ ಫೌಂಡೇಷನ್‌, ಚೇಂಜ್‌ ಮೇಕರ್ಸ್‌ ಮತ್ತು ಬಿಬಿಎಂಪಿ ಸಹಯೋಗದಲ್ಲಿ ನಗರದಲ್ಲಿ 75 ಸಾವಿರ ಸಸಿಗಳನ್ನು ನೆಡಲು ಮುಂದಾಗಿದೆ. ಈ ಕಾರ್ಯಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

‘ಕೋಟಿ ವೃಕ್ಷ ಸೈನ್ಯವು ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಕೈಗೊಂಡಿರುವ ಈ ಅಭಿಯಾನ ಮೆಚ್ಚುವಂತಹದ್ದು. ನೆಟ್ಟ ಸಸಿಗಳನ್ನು ಮುಂದಿನ ಎರಡು ವರ್ಷ ಪೋಷಿಸುವ ಜವಾಬ್ದಾರಿಯನ್ನೂ ಈ ಸಂಸ್ಥೆಗಳೇ ತೆಗೆದುಕೊಂಡಿರುವುದು ಸ್ವಾಗತಾರ್ಹ. ಬೆಂಗಳೂರಿನಲ್ಲಿ ವಾಸಿಸುತ್ತಿರುವ ಎಲ್ಲಾ ನಾಗರಿಕರೂ ಒಂದೊಂದು ಸಸಿ ನೆಟ್ಟು ಅದನ್ನು ಬೆಳೆಸುವ ಪಣ ತೊಟ್ಟರೆ ಮಹಾನಗರಿಯು ಹಸಿರಿನ ತೊಟ್ಟಿಲಾಗಿ ಕಂಗೊಳಿಸುವುದರಲ್ಲಿ ಅನುಮಾನವೇ ಇಲ್ಲ’ ಎಂದು ಮುಖ್ಯಮಂತ್ರಿಯವರು ತಿಳಿಸಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು