ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೃಷಭಾವತಿ ಕಣಿವೆ ಪ್ರದೇಶ ಪರಿಶೀಲನೆ

ಸಂಪೂರ್ಣ ಮಲಿನ ನೀರು; ವ್ಯಾಪಕ ಮರಳು ದಂಧೆ
Last Updated 8 ಆಗಸ್ಟ್ 2018, 19:21 IST
ಅಕ್ಷರ ಗಾತ್ರ

ಬೆಂಗಳೂರು: ವೃಷಭಾವತಿ ಕಣಿವೆ ಪ್ರದೇಶಕ್ಕೆ ಬಿಬಿಎಂಪಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಯುನೈಟೆಡ್‌ ಬೆಂಗಳೂರು ಸಂಸ್ಥೆಯ ಪ್ರತಿನಿಧಿಗಳು ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದರು.

ಲೋಕಾಯುಕ್ತರ ಆದೇಶದಂತೆ ಸ್ಥಳ ಪರಿಶೀಲನೆ ನಡೆದಿದೆ.

ನದಿ ಪಾತ್ರದಲ್ಲೇನಿದೆ?: ಕಣಿವೆ ನೀರು ಪೂರ್ಣ ಮಲಿನಗೊಂಡಿದೆ. ಹಲವು ಬಗೆಯ ರಾಸಾಯನಿಕ ಮಿಶ್ರಣಗೊಂಡಿದೆ. ನೀರಿನ ಮೇಲ್ಪದರದಲ್ಲಿ ನೊರೆ ಹರಿಯುತ್ತಿದೆ. ನದಿ ಮಧ್ಯಭಾಗದಲ್ಲಿ ವ್ಯಾಪಕವಾಗಿ ಮರಳುದಂಧೆ ನಡೆಯುತ್ತಿದೆ. ಆಗಸ್ಟ್‌ 2ರಂದು ಲೋಕಾಯುಕ್ತರು ಪರಿಶೀಲನೆ ನಡೆಸಿದ ನಂತರವೂ ಇದು ಮುಂದುವರಿದಿದೆ.

ಇಂದು ನಡೆದದ್ದು...

ನೀರಿನ ಮಾದರಿ ಸಂಗ್ರಹ, ಮರಳುಗಾರಿಕೆಯ ಸ್ಥಳ ಪರಿಶೀಲನೆ ನಡೆಸಲಾಯಿತು. ಅಧಿಕಾರಿಗಳಿಂದ ಕ್ರಮ ಕೈಗೊಳ್ಳುವ ಭರವಸೆ ನೀಡಿದರು ಎಂದು ತಂಡದಲ್ಲಿದ್ದ ಯುನೈಟೆಡ್‌ ಬೆಂಗಳೂರು ಸಂಸ್ಥೆಯಪದಾಧಿಕಾರಿ ಎನ್‌.ಆರ್‌.ಸುರೇಶ್‌ ಹೇಳಿದರು.

ಪರಿಶೀಲನೆ ಏಕೆ?

ವೃಷಭಾವತಿ ಕಣಿವೆಯು ಯಾರ ಸರಹದ್ದಿಗೆ ಬರುತ್ತದೆ ಎಂಬ ಗೊಂದಲ ಇತ್ತು. ಬಿಬಿಎಂಪಿ, ಸಣ್ಣ ನೀರಾವರಿ, ಮಾಲಿನ್ಯ ನಿಯಂತ್ರಣ ಮಂಡಳಿ, ರಾಜಕಾಲುವೆ ನಿರ್ವಹಣೆ ವಿಭಾಗದ ಅಧಿಕಾರಿಗಳು ಒಟ್ಟಾಗಿ ಪರಿಶೀಲಿಸಿದರು. ಬಿಬಿಎಂಪಿಯ ಮುಖ್ಯ ಎಂಜಿನಿಯರ್‌ (ರಾಜಕಾಲುವೆ ವಿಭಾಗ) ಬೆಟ್ಟೇಗೌಡ ನೇತೃತ್ವದಲ್ಲಿ ಪರಿಶೀಲನೆ ನಡೆಯಿತು. ಆ. 10ರಂದು ಪರಿಶೀಲನಾ ವರದಿ ಲೋಕಾಯುಕ್ತರಿಗೆ ಸಲ್ಲಿಕೆಯಾಗಲಿದೆ. ಈ ನಡುವೆ ಈ ಕಣಿವೆಯ ಹೊಣೆಗಾರಿಕೆ ಯಾರಿಗೆ ಎಂಬ ಬಗ್ಗೆ ನಿರ್ಧಾರವಾಗಲಿದೆ ಎಂದು ಸುರೇಶ್‌ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT