ವಿ.ವಿ. ಪುರ ತಿಂಡಿಯಲ್ಲಿ ವಿದೇಶಿ ಪ್ರವಾಸಿಗರು ಪಾನಿಪೂರಿ ಸವಿದರು
ಪ್ರಜಾವಾಣಿ ಚಿತ್ರ: ಕಿಶೋರ್ ಕುಮಾರ್ ಬೋಳಾರ್
ವಿ.ವಿ. ಪುರ ತಿಂಡಿ ಬೀದಿಯ ಮಳಿಗೆಗಳು
ಪ್ರಜಾವಾಣಿ ಚಿತ್ರ: ಕಿಶೋರ್ ಕುಮಾರ್ ಬೋಳಾರ್
ಬೀದಿ ದೀಪಗಳನ್ನು ಅಳವಡಿಸಲಾಗಿದೆ. ಇದರಿಂದ ತಿಂಡಿ ಬೀದಿಗೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಾಗಿದೆ. ವಾಹನ ನಿಲುಗಡೆ ಮಾಡಲು ಅವಕಾಶ ಕಲ್ಪಿಸಬೇಕು.
ನಾಗರಾಜ್ ಅಂಗಡಿ ಮಾಲೀಕ
ನಾನು ತಿಂಡಿ ಬೀದಿಗೆ ಹಲವಾರು ಬಾರಿ ಭೇಟಿ ನೀಡಿದ್ದೇನೆ. ಈಗ ಈ ಬೀದಿಯ ಸ್ವರೂಪ ಬದಲಾಗಿದೆ. ಕಡಿಲೆಕಾಯಿ ಪರಿಷೆ ಹಾಗೂ ಅವರೇಕಾಯಿ ಮೇಳದ ಸಂದರ್ಭದಲ್ಲಿ ಇಲ್ಲಿಗೆ ಸಾವಿರಾರು ಜನ ಭೇಟಿ ನೀಡುತ್ತಾರೆ. ಇಲ್ಲಿ ತಿಂಡಿಗಳು ಗುಣಮಟ್ಟದಿಂದ ಕೂಡಿದ್ದು ಕಡಿಮೆ ಬೆಲೆಗೆ ಸಿಗುತ್ತವೆ.
ಸತ್ಯಾ ಗ್ರಾಹಕಿ
ನಾವು ಕಲಬುರಗಿಯವರು. ವಿ.ವಿ. ಪುರ ತಿಂಡಿ ಬೀದಿಯಲ್ಲಿ ಉತ್ತರ ಕರ್ನಾಟಕ ಸೇರಿದಂತೆ ನಾಡಿನ ಎಲ್ಲ ಭಾಗದಲ್ಲಿ ದೊರೆಯುವ ತಿಂಡಿಗಳು ಸಿಗುತ್ತವೆ. ಇಲ್ಲಿನ ತಿಂಡಿಯ ಗುಣಮಟ್ಟ ಹಾಗೂ ಬೆಲೆಯೂ ಕಡಿಮೆ ಇದೆ. ಇಲ್ಲಿನ ತಿಂಡಿ ಮಳಿಗೆಗಳು ರುಚಿ ಮತ್ತು ಶುಚಿತ್ವಕ್ಕೆ ಆದ್ಯತೆ ನೀಡುತ್ತವೆ.
ಶೈಲಜಾ ಶ್ರೀರಾಂಪುರ
ತಿಂಡಿ ಸವಿಯುವುದಕ್ಕೆ ನಾವು ವಿ.ವಿ. ಪುರ ತಿಂಡಿ ಬೀದಿಗೆ ಬರುತ್ತಿದ್ದೇವೆ. ಈ ಹಿಂದೆ ಇಲ್ಲಿನ ಪಾದಚಾರಿ ಮಾರ್ಗ ಚಿಕ್ಕದಾಗಿತ್ತು. ಈಗ ವಿಸ್ತಾರ ಮಾಡಿರುವುದರಿಂದ ಕಲ್ಲಿನ ಬೆಂಚ್‌ಗಳನ್ನು ನಿರ್ಮಿಸಿರುವುದರಿಂದ ಇಲ್ಲಿಗೆ ಬರುವ ಸಾರ್ವಜನಿಕರು ಆರಾಮದಿಂದ ತಿಂಡಿ ಸವಿಯಲು ಅನುಕೂಲವಾಗಿದೆ.