ಬೆಂಗಳೂರು: ಬೆಂಗಳೂರಿನಲ್ಲಿ ತಾಪಮಾನ ಏರಿಕೆಯಾಗಿದ್ದು, ಈ ವಾರ ಪೂರ್ತಿ ಬಿಸಿಲು ಹೆಚ್ಚಿರುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ವಿಜ್ಞಾನಿಗಳು ಹೇಳಿದ್ದಾರೆ.

ಕಳೆದ ವಾರಾಂತ್ಯ ನಗರದಲ್ಲಿ ಎರಡು ಡಿಗ್ರಿ ಸೆಲ್ಸಿಯಸ್ ತಾಪಮಾನ ಏರಿಕೆಯಾಗಿದ್ದು, ಬೆಚ್ಚಗಿನ ವಾತಾವರಣವಿದೆ.

ಸೋಮವಾರ ಮಧ್ಯಾಹ್ನದ ವೇಳೆ ಪ್ರಖರ ಬಿಸಿಲು ಇರುವುದರಿಂದ ಗರಿಷ್ಠ ತಾಪಮಾನ 31.9 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಸಾಮಾನ್ಯ ತಾಪಮಾನ 29.5 ಡಿಗ್ರಿ ಸೆಲ್ಸಿಯಸ್ಗಿಂತ 2.4 ಡಿಗ್ರಿ ಸೆಲ್ಸಿಯಸ್ ಏರಿಕೆಯಾಗಿದೆ.

ಇದೇ ರೀತಿ ಕಳೆದ ಶನಿವಾರ 32.2 ಡಿಗ್ರಿ ಸೆಲ್ಸಿಯಸ್ ಹಾಗೂ ಭಾನುವಾರ ನಗರದಲ್ಲಿ ಗರಿಷ್ಠ 32.5 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.

ತಮಿಳುನಾಡಿನಿಂದ ಪೂರ್ವ ಮಾರುತಗಳು ಬೀಸುತ್ತಿರುವ ಪರಿಣಾಮ ಬೆಂಗಳೂರು ಸೇರಿ ರಾಜ್ಯದ ದಕ್ಷಿಣ ಭಾಗದ ಜಿಲ್ಲೆಗಳಲ್ಲಿ ಸೆಕೆ ಕಾಣಿಸಿಕೊಂಡಿದೆ ಎಂದು ಇಲಾಖೆ ಹೇಳಿದೆ.

ಮುಂದಿನ ವಾರದ ಹೊತ್ತಿಗೆ ಈಶಾನ್ಯ ಮಾರುತಗಳು ಬೀಸುವ ಸಾಧ್ಯತೆಯಿದ್ದು, ತಂಪಾದ ಗಾಳಿಯನ್ನು ಹೊತ್ತು ತರಲಿದೆ. ಇದರಿಂದ ತಾಪಮಾನವು ಕೆಲವು ಡಿಗ್ರಿಗಳಷ್ಟು ಇಳಿಕೆಯಾಗಲಿದೆ ಎಂದು ಬೆಂಗಳೂರು ಹವಾಮಾನ ಕೇಂದ್ರದ ವಿಜ್ಞಾನಿ ಡಾ. ಎನ್ ಪುವಿಯರಸನ್ ಮಾಹಿತಿ ನೀಡಿದ್ದಾರೆ.

ಮುಂದಿನ ವಾರ ಮಳೆಯಾಗುವ ಸಾಧ್ಯತೆಯಿಲ್ಲ. ಅಲ್ಲದೆ ತಾಪಮಾನದ ಏರಿಕೆಯು ಬೇಸಿಗೆಯ ಮುನ್ಸೂಚನೆಯೂ ಅಲ್ಲ. ಚಳಿಗಾಲವು ಫೆಬ್ರುವರಿ ಅಂತ್ಯದವರೆಗೆ ಇರಲಿದೆ. ಮಾರ್ಚ್ ಮತ್ತು ಮೇ ನಡುವೆ ಪೂರ್ವ ಮಾನ್ಸೂನ್ ಋತುವಿನ ಕಾರಣದಿಂದಾಗಿ ಸಾಮಾನ್ಯವಾಗಿ ಮಳೆಯಾಗುತ್ತದೆ ಎಂದು ಇಲಾಖೆ ಸ್ಪಷ್ಟಪಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.