ಬೆಂಗಳೂರು: ಜಲ ಮಂಡಳಿಯ ವಿವಿಧ ಉಪ ವಿಭಾಗಗಳಲ್ಲಿ ಗುರುವಾರ ಬೆಳಿಗ್ಗೆ 9.30ರಿಂದ 11 ರವರೆಗೆ ನೀರಿನ ಅದಾಲತ್ ನಡೆಯಲಿದೆ.
ಅದಾಲತ್‌ನಲ್ಲಿ ನೀರಿನ ಬಿಲ್, ನೀರು ಮತ್ತು ಒಳಚರಂಡಿ ಸಂಪರ್ಕ ಕಲ್ಪಿಸುವಲ್ಲಿ ಆಗುತ್ತಿರುವ ವಿಳಂಬ, ಗೃಹ ಬಳಕೆಯಿಂದ ವಾಣಿಜ್ಯ ಬಳಕೆಗೆ ಪರಿವರ್ತನೆ ಸೇರಿದಂತೆ ವಿವಿಧ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು.
ಸಾರ್ವಜನಿಕರು ಜಲಮಂಡಳಿಯ ದೂರು ನಿರ್ವಹಣಾ ಕೇಂದ್ರದ ಸಹಾಯವಾಣಿ 1916 ಗೆ ಕರೆಮಾಡಿ ದೂರು ದಾಖಲಿಸಬಹುದು. ವಾಟ್ಸ್ ಆ್ಯಪ್ ಸಂಖ್ಯೆ– 8762228888ಗೆ ಸಂದೇಶದ ಮೂಲಕವೂ ದೂರು ಸಲ್ಲಿಸಬಹುದು ಜಲಮಂಡಳಿ ಪ್ರಕಟಣೆ ತಿಳಿಸಿದೆ.