ಗುರುವಾರ , ಆಗಸ್ಟ್ 11, 2022
21 °C
ಕೊರೊನಾ ಸೋಂಕಿತ ಎಂದು ಬಿಂಬಿಸಿ ಕೃತ್ಯ– ಆರು ಮಂದಿ ಬಂಧನ

₹40 ಲಕ್ಷಕ್ಕಾಗಿ ಪತಿಯನ್ನೇ ಅಪಹರಿಸಿದ ಪತ್ನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಹಣಕ್ಕಾಗಿ ಪತಿಯನ್ನು ಕೊರೊನಾ ಸೋಂಕಿತ ಎಂದು ನಕಲಿ ದಾಖಲೆ ಸೃಷ್ಟಿಸಿ, ಸ್ನೇಹಿತರೊಂದಿಗೆ ಆಂಬುಲೆನ್ಸ್ ನಲ್ಲಿ ಅಪಹರಿಸಿದ್ದ ಪತ್ನಿ ಸೇರಿದಂತೆ ಆರು ಮಂದಿ ಆರೋಪಿಗಳನ್ನು ಬಾಗಲಗುಂಟೆ ಪೊಲೀಸರು ಬಂಧಿಸಿದ್ದಾರೆ.

ಇಲ್ಲಿನ ತ್ಯಾಗರಾಜನಗರದ ನಿವಾಸಿ ಸೋಮಶೇಖರ್ ಅಪಹರಣಗೊಂಡವರು. ಅವರ ಪತ್ನಿ ಸುಪ್ರಿಯಾ, ಸ್ನೇಹಿತ ಗಗನ್, ಲತಾ, ಬಾಲಾಜಿ, ತೇಜಸ್ ಹಾಗೂ ಕಿರಣ್ ಬಂಧಿತರು. 

‘ಖಾಸಗಿ ಕಂಪನಿ ಉದ್ಯೋಗಿಯಾಗಿರುವ ಸೋಮಶೇಖರ್ ಮನೆ ಖರೀದಿಗೆ ಕೂಡಿಟ್ಟಿದ್ದ ₹40 ಲಕ್ಷ ಹಣವನ್ನು ಕಸಿಯಲು ಸುಪ್ರಿಯಾ ಅಪಹರಣಕ್ಕೆ ಸಂಚು ರೂಪಿಸಿದ್ದಳು. ತನಗೆ ಆರೋಗ್ಯ ಸರಿಯಿಲ್ಲ. ಮಾತ್ರೆ ತನ್ನಿ ಎಂದು ಪತಿಯನ್ನು ಹೊರಗೆ ಕಳುಹಿಸಿದ್ದಳು. ಯೋಜನೆಯಂತೆ ಸಜ್ಜಾಗಿದ್ದ ತಂಡ ಅವರನ್ನು ತಪ್ಪಿಸಿಕೊಂಡಿರುವ ಕೊರೊನಾ ಸೋಂಕಿತ ಎಂದು ಬಲವಂತವಾಗಿ ಆಂಬುಲೆನ್ಸ್ ಗೆ ಎಳೆದೊಯ್ದಿತ್ತು. ಬಳಿಕ ಚಾಮರಾಜನಗರದ ತೋಟದ ಮನೆಯೊಂದ
ರಲ್ಲಿ ಬಂಧಿಸಿ ಇಟ್ಟಿತ್ತು.’ ಎಂದು ಪೊಲೀಸರು ತಿಳಿಸಿದ್ದಾರೆ.

ಪತಿ ಸ್ನೇಹಿತರಿಂದ ದೂರು ದಾಖಲು: ಆರೋಪಿಗಳು ಸೋಮಶೇಖರ್‌ಗೆ ಹಿಂಸೆ ನೀಡಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಈ ವೇಳೆ ಸೋಮಶೇಖರ್ ತನ್ನ ಸ್ನೇಹಿತರಿಗೆ ಕರೆ ಮಾಡಿ, ಪತ್ನಿಗೆ ₹10 ಲಕ್ಷ ನೀಡುವಂತೆ ಹೇಳಿದ್ದರು. ಪತಿಯ ಸ್ನೇಹಿತರು ಸುಪ್ರಿಯಾಗೆ ಕರೆ ಮಾಡಿದಾಗ, ತನ್ನ ಪತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಸುಳ್ಳು ಹೇಳಿ
ದ್ದಳು. ಅನುಮಾನಗೊಂಡ ಸ್ನೇಹಿತರು ಪೊಲೀಸರಿಗೆ ದೂರು ನೀಡಿದ್ದರು.

'ಪತಿಗೆ ಕೊರೊನಾ ಎಂದು ನಂಬಿಸಲು ಸುಪ್ರಿಯಾ ವೈದ್ಯರಿಂದ ನಕಲಿ ದಾಖಲೆ ಸೃಷ್ಟಿಸಿದ್ದಳು. ವಿಚಾರಣೆ ನಡೆಸಿದಾಗ ಮುಗ್ಧಳಂತೆ ವರ್ತಿಸಿದ್ದಳು. ಬಳಿಕ ಸ್ನೇಹಿತ ಗಗನ್‍ಗೆ ಕರೆ ಮಾಡಿ ಪೊಲೀಸರಿಗೆ ವಿಷಯ ತಿಳಿದಿರುವುದಾಗಿ ಹೇಳಿದ್ದಾಳೆ'.

'ಭಯಗೊಂಡ ಗಗನ್ ಸೋಮಶೇಖರ್ ಮುಖೇನ ಸ್ನೇಹಿತರಿಗೆ ಕರೆ ಮಾಡಿಸಿದ್ದ. ಆಸ್ಪತ್ರೆಯಿಂದ ನ.3
ರಂದು ಮನೆಗೆ ಮರಳುತ್ತಿರುವುದಾಗಿ ಹೇಳಿಸಿದ್ದ. ಮನೆಗೆ ಬಿಡಲು ಬಂದಿ
ದ್ದಾಗ ಗಗನ್ ಹಾಗೂ ಲತಾರನ್ನು ಹಿಡಿದು, ಪೊಲೀಸರಿಗೆ ಒಪ್ಪಿಸಲಾ
ಯಿತು. ವಿಚಾರಣೆಯಿಂದ ಅಪಹರಣದ ಮಾಹಿತಿ ಹೊರಬಿದ್ದಿದೆ. ಮಾಹಿತಿ ಆಧರಿಸಿ ಆರು ಮಂದಿಯನ್ನು ಬಂಧಿಸ
ಲಾಗಿದೆ. ಕೃತ್ಯದಲ್ಲಿ ಭಾಗಿಯಾಗಿರುವ ಇನ್ನೂ ಹಲವರು ತಲೆಮರೆಸಿಕೊಂಡಿದ್ದು ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು