ಭಾನುವಾರ, ಜನವರಿ 26, 2020
28 °C

ಸಿಎಂ ನಮ್ಮಲ್ಲಿಗೆ ಬರುವಂತೆ ಮಾಡುತ್ತೇವೆ: ವಚನಾನಂದ ಸ್ವಾಮೀಜಿ

ಪ್ರಜಾವಾಣಿ ವಾರ್ತ Updated:

ಅಕ್ಷರ ಗಾತ್ರ : | |

prajavani

ಬೆಂಗಳೂರು: ‘ಪಂಚಮಸಾಲಿ ಸಮುದಾಯದವರಿಗೆ ಮಂತ್ರಿ ಸ್ಥಾನ ನೀಡಬೇಕು ಎಂದು ಒತ್ತಾಯಿಸಿ ನಾವು ಮುಖ್ಯಮಂತ್ರಿ ಮನೆ ಬಳಿ ಧರಣಿ ಕೂರುವುದಿಲ್ಲ. ಅವರೇ ನಮ್ಮಲ್ಲಿಗೆ ಬರುವಂತೆ ಮಾಡುತ್ತೇವೆ’ ಎಂದು ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಹೇಳಿದರು.

ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪಂಚಮಸಾಲಿ ಸಮುದಾಯಕ್ಕೆ ಸೇರಿದ 15 ಮಂದಿ ಬಿಜೆಪಿಯಿಂದ, ಮೂವರು ಕಾಂಗ್ರೆಸ್‌ನಿಂದ ಹಾಗೂ ಒಬ್ಬರು ಜೆಡಿಎಸ್‌ನಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಬಿಜೆಪಿ ಶಾಸಕರ ಪೈಕಿ ಮೂವರನ್ನು ಮಂತ್ರಿ ಮಾಡಬೇಕು. ಅವರಲ್ಲಿ ಒಬ್ಬರಿಗೆ ಉಪಮುಖ್ಯಮಂತ್ರಿ ಸ್ಥಾನ ಕೊಡಬೇಕು ಎಂದು ಒತ್ತಾಯಿಸಿದ್ದೇವೆ’ ಎಂದರು.

‘ಪೀಠಕ್ಕೆ ನಿಷ್ಠಾವಂತರಾಗಿರುವವರನ್ನೇ ಮಂತ್ರಿಯನ್ನಾಗಿ ಮಾಡಬೇಕು. ಅವರು ಸಮಾಜಕ್ಕೂ ಕೊಡುಗೆ ನೀಡಿದವರಾಗಿರಬೇಕು. ಪೀಠದ ಬಗ್ಗೆ ಬದ್ಧತೆ ಹಾಗೂ ಪರಿಶುದ್ಧತೆಯಿಂದ ನಡೆದುಕೊಳ್ಳುವಂತವರಾಗಿರಬೇಕು’ ಎಂದು ಅವರು ಹೇಳಿದರು.

‘ಈ ನಮ್ಮ ಬೇಡಿಕೆಗೆ ಸ್ಪಂದಿಸದಿದ್ದರೆ ಮುಂದೇನು ಕ್ರಮ ಕೈಗೊಳ್ಳಲಾಗುವುದು ಎಂಬ ಬಗ್ಗೆ ಇದೇ 14ರಂದು ಹರಿಹರದಲ್ಲಿ ನಡೆಯಲಿರುವ ಹರ ಜಾತ್ರಾ ಮಹೋತ್ಸವ ಮುಗಿದ ಬಳಿಕ ನಿರ್ಧಾರ ಪ್ರಕಟಿಸುತ್ತೇವೆ’ ಎಂದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು