ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೇಖಕ ನಿತಿನ್‌ ಸೇಥ್‌ ಬರೆದ ಡಿಜಿಟಲ್‌ ಏಜ್‌ ಕೃತಿಗೆ ಬೇಡಿಕೆ

Last Updated 24 ಮಾರ್ಚ್ 2021, 3:40 IST
ಅಕ್ಷರ ಗಾತ್ರ

ಬೆಂಗಳೂರು: ಲೇಖಕ ನಿತಿನ್‌ ಸೇಥ್‌ ಹೊರತಂದಿರುವ ‘ವಿನ್ನಿಂಗ್‌ ಇನ್‌ ದಿ ಡಿಜಿಟಲ್‌ ಏಜ್‌; ಸೆವೆನ್‌ ಬಿಲ್ಡಿಂಗ್‌ ಬ್ಲಾಕ್ಸ್‌ ಆಫ್‌ ಸಕ್ಸಸ್‌ಫುಲ್‌ ಡಿಜಿಟಲ್‌ ಟ್ರಾನ್ಸ್‌ಫಾರ್ಮೇಷನ್‌’ ಪುಸ್ತಕವು ಅಮೆಜಾನ್‌ನಲ್ಲಿ ಹೆಚ್ಚು ಮಾರಾಟವಾದ ಕೃತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಭಾರತದ ಡಿಜಿಟಲ್‌ ರೂಪಾಂತರದ ಯಶೋಗಾಥೆಯನ್ನು ಈ ಕೃತಿಯಲ್ಲಿ ಅನಾವರಣಗೊಳಿಸಲಾಗಿದೆ.

ಈ ಕುರಿತು ಮಾತನಾಡಿರುವ ನಿತಿನ್‌ ‘ನಾವು ತಂತ್ರಜ್ಞಾನ ಯುಗದ ಆರಂಭದಲ್ಲಿದ್ದೇವೆ. ಉತ್ಸಾಹಿಗಳಿಗೆ ಅವಕಾಶದ ಬಾಗಿಲು ತೆರೆದುಕೊಳ್ಳುತ್ತಿದೆ. ಕೋವಿಡ್‌ನಿಂದಾಗಿ ಆರ್ಥಿಕ ಬೆಳವಣಿಗೆಯ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಿದೆ. ಭಾರತವು ತಂತ್ರಜ್ಞಾನ ಯುಗದ ಶಕ್ತಿ ಕೇಂದ್ರವಾಗಿ ರೂಪುಗೊಳ್ಳಲು ಅವಶ್ಯವಿರುವ ಎಂಟು ಹೊಸ ವ್ಯವಹಾರ ನೀತಿಗಳನ್ನು ಈ ಕೃತಿಯಲ್ಲಿ ಶಿಫಾರಸು ಮಾಡಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT