ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೇಖಕಿಯರ ಸಂಘ: ದತ್ತಿ ಪ್ರಶಸ್ತಿಗೆ ಕೃತಿಗಳ ಆಹ್ವಾನ

Published 7 ಮೇ 2024, 14:52 IST
Last Updated 7 ಮೇ 2024, 14:52 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ಲೇಖಕಿಯರ ಸಂಘವು ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ 13 ದತ್ತಿ ಪ್ರಶಸ್ತಿಗಳಿಗೆ ಲೇಖಕಿಯರಿಂದ ಕೃತಿಗಳನ್ನು ಆಹ್ವಾನಿಸಿದೆ.‌

ದತ್ತಿ ಪ್ರಶಸ್ತಿಗಳು: ಕಾಕೋಳು ಸರೋಜಮ್ಮ (ಕಾದಂಬರಿ), ಭಾಗ್ಯ ನಂಜಪ್ಪ (ವಿಜ್ಞಾನ ಸಾಹಿತ್ಯ), ನಾಗರತ್ನ ಚಂದ್ರಶೇಖರ್ (ಲಲಿತ ಪ್ರಬಂಧ), ಜಿ.ವಿ. ನಿರ್ಮಲ (ಅನುವಾದಿತ ಕಾದಂಬರಿ, ಕಥಾ ಸಂಕಲನ ಹಾಗೂ ಜೀವನ ಚರಿತ್ರೆ), ತ್ರಿವೇಣಿ ಸಾಹಿತ್ಯ ಪುರಸ್ಕಾರ (ಸಣ್ಣಕಥೆ ಹಾಗೂ ಕಾದಂಬರಿ), ಕಮಲಾ ರಾಮಸ್ವಾಮಿ (ಪ್ರವಾಸ ಸಾಹಿತ್ಯ), ನುಗ್ಗೆಹಳ್ಳಿ ಪಂಕಜ (ಹಾಸ್ಯ ಕೃತಿ), ಗುಣಸಾಗರಿ ನಾಗರಾಜ್ (ಮಕ್ಕಳ ಸಾಹಿತ್ಯ) ಮತ್ತು ಇಂದಿರಾ ವಾಣಿರಾವ್ ದತ್ತಿ ಪ್ರಶಸ್ತಿಗೆ ನಾಟಕ ಕೃತಿಗಳನ್ನು ಆಹ್ವಾನಿಸಿದೆ.

ಜಯಮ್ಮ ಕರಿಯಣ್ಣ (ಸಂಶೋಧನೆ), ತ್ರಿವೇಣಿ (ಕಥೆ ಹಾಗೂ ಕಾದಂಬರಿ), ಉಷಾ ಪಿ.ರೈ (ಕವನ ಸಂಕಲನ- 2020- 2021- 2022 ವರ್ಷಗಳಲ್ಲಿ ಪ್ರಕಟಗೊಂಡಿರುವುದು), ನಿರುಪಮಾ ದತ್ತಿ ಪ್ರಶಸ್ತಿಗೆ ಡಿಜಿಟಲ್  ಮತ್ತು ಮುದ್ರಣ ಮಾಧ್ಯಮದಲ್ಲಿ ಪ್ರಕಟಗೊಂಡ ಕಥೆಗಳನ್ನು ಆಹ್ವಾನಿಸಲಾಗಿದೆ. ‌

2023ರ ಜನವರಿಯಿಂದ 2023ರ ಡಿಸೆಂಬರ್‌ವರೆಗೆ ಪ್ರಕಟಗೊಂಡ ಪ್ರಥಮ ಆವೃತ್ತಿಯ ಕೃತಿಗಳನ್ನು ಮಾತ್ರ ಪ್ರಶಸ್ತಿಗೆ ಪರಿಗಣಿಸಲಾಗುವುದು. ಈಗಾಗಲೇ ಎರಡು ಪುಸ್ತಕ ಬಹುಮಾನ ಪಡೆದ ಲೇಖಕಿಯರ ಕೃತಿಗಳನ್ನು ಬಹುಮಾನಕ್ಕಾಗಿ ಪರಿಗಣಿಸಲಾಗುವುದಿಲ್ಲ. ಸಂಪಾದಿತ ಕೃತಿಗಳು ಹಾಗೂ ಪಿ.ಎಚ್.ಡಿ. ಪ್ರಬಂಧಗಳನ್ನು ಬಹುಮಾನಕ್ಕಾಗಿ ಪರಿಗಣಿಸಲಾಗುವುದಿಲ್ಲ.

ಆಸಕ್ತರು ಕೃತಿಯ ಮೂರು ಪ್ರತಿಗಳು ಹಾಗೂ ವಿಳಾಸ ಸಹಿತ ಅಗತ್ಯ ವಿವರವನ್ನು ಮೇ 23ರ ಒಳಗೆ ಕರ್ನಾಟಕ ಲೇಖಕಿಯರ ಸಂಘ, 206, 2ನೇ ಮಹಡಿ, ವಿಜಯ ಮ್ಯಾನ್ ಶನ್, 2ನೇ ತಿರುವು, 2ನೇ ಮುಖ್ಯರಸ್ತೆ, ಚಾಮರಾಜಪೇಟೆ, ಬೆಂಗಳೂರು-560018 ಈ ವಿಳಾಸಕ್ಕೆ ಕಳುಹಿಸಬೇಕು ಎಂದು ಸಂಘದ ಅಧ್ಯಕ್ಷೆ ಎಚ್.ಎಲ್.ಪುಷ್ಪ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT