ಬೆಂಗಳೂರು: ವಿಶ್ವ ಬಿದಿರು ದಿನದ ಅಂಗವಾಗಿ ‘ಹಸಿರು ಕಟ್ಟಡ ಸಾಮಗ್ರಿ ಮತ್ತು ತಂತ್ರಜ್ಞಾನ ಕೇಂದ್ರ–ಸಿಜಿಬಿಎಂಟಿ’ಯು ಬಿದಿರಿನಿಂದ ಕರಕುಶಲ ಮತ್ತು ನಿರ್ಮಾಣ ಸಾಮಗ್ರಿಗಳ ವಿನ್ಯಾಸ ಕಾರ್ಯಾಗಾರವನ್ನು ಹಮ್ಮಿಕೊಂಡಿದೆ.
ನಗರದ ಅಮೃತಹಳ್ಳಿ ರೈಲ್ವೆ ಗೇಟ್ ಬಳಿ ಇರುವ ಸಿಜಿಬಿಎಂಟಿ ಕ್ಯಾಂಪಸ್‌ನಲ್ಲಿ ಇದೇ 17ರಿಂದ 24ರವರೆಗೆ ಕಾರ್ಯಾಗಾರ ನಡೆಯಲಿದೆ.
ಬಿದಿರು ದಿನದ ಅಂಗವಾಗಿ ಇದೇ 15 ಮತ್ತು 16ರಂದು ಆಯೋಜಿಸಲಾಗಿದ್ದ ‘ಬಿದಿರು ಹಬ್ಬ’ದಲ್ಲಿ, ಸಿಜಿಬಿಎಂಟಿಯ ಆವರಣದಲ್ಲಿ ಬಿದಿರು ನೆಡಲಾಯಿತು. ಹೆಚ್ಚಿನ ಮಾಹಿತಿಗೆ ಸಂಸ್ಥೆಯ ಜಾಲತಾಣವನ್ನು ಸಂಪರ್ಕಿಸಬಹುದು.