ಸೋಮವಾರ, ನವೆಂಬರ್ 18, 2019
25 °C

'ಯಲಹಂಕ ವಾಯ್ಸ್' ಪತ್ರಿಕೆಯ ಸಂಪಾದಕ ಅನಿಲ್ ರಾಜ್ ಜೈಲಿನಲ್ಲಿ ಸಾವು

Published:
Updated:

ಬೆಂಗಳೂರು: ವಿಚಾರಣಾಧೀನ ಕೈದಿ, 'ಯಲಹಂಕ ವಾಯ್ಸ್' ಪತ್ರಿಕೆಯ ಸಂಪಾದಕ ಅನಿಲ್ ರಾಜ್ ಪರಪ್ಪನ ಅಗ್ರಹಾರ ಜೈಲಿನಲ್ಲಿ ಮೃತಪಟ್ಟಿದ್ದಾರೆ.

ಮದುವೆ ಆಗುವುದಾಗಿ ನಂಬಿಸಿ ಯುವತಿ ಮೇಲೆ ಅತ್ಯಾಚಾರ ಎಸಗಿದ್ದ ಆರೋಪದಡಿ ಯಲಹಂಕ ಉಪನಗರ ಪೊಲೀಸರು ಅನಿಲ್ ಅವರನ್ನು ಬಂಧಿಸಿದ್ದರು. ಹಲವು ದಿನಗಳಿಂದ ಜೈಲಿನಲ್ಲಿ ಇದ್ದ ಅವರಿಗೆ ಜಾಮೀನು ಸಿಕ್ಕಿರಲಿಲ್ಲ. 

ಕುಟುಂಬಸ್ಥರು ಅನಿಲ್ ರಾಜ್​​ ಅವರನ್ನು ಮಂಗಳವಾರ ಜೈಲಿನಲ್ಲಿ ಭೇಟಿಯಾಗಿ ಹೋಗಿದ್ದರು. ಆದರೆ, ರಾತ್ರಿ ವೇಳೆಗೆ ಅನಿಲ್ ಮೃತಪಟ್ಟಿರುವುದಾಗಿ ಜೈಲು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪ್ರತಿಕ್ರಿಯಿಸಿ (+)