ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆರೋಗ್ಯ ತಜ್ಞರ ಜ್ಞಾನ ವಿನಿಮಯ ಅಗತ್ಯ’

Last Updated 28 ಜುಲೈ 2019, 19:01 IST
ಅಕ್ಷರ ಗಾತ್ರ

ಯಲಹಂಕ:‘ದೇಶದಲ್ಲಿ ಪ್ರತಿ ವರ್ಷ ಸುಮಾರು 80 ಸಾವಿರ ಬಾಯಿ ಕ್ಯಾನ್ಸರ್‌ ಪ್ರಕರಣಗಳು ಪತ್ತೆಯಾಗುತ್ತಿವೆ. ಈ ರೋಗದ ವಿರುದ್ದ ಹೋರಾಡಲು ಆರೋಗ್ಯ ತಜ್ಞರು ತಮ್ಮ ಜ್ಞಾನವನ್ನು ವಿನಿಮಯ ಮಾಡಿಕೊಳ್ಳಬೇಕಾದ ಅಗತ್ಯವಿದೆ’ ಸೈಟ್ ಕೇರ್ ಆಸ್ಪತ್ರೆಯ ಮುಖ್ಯಸ್ಥ ಡಾ.ವಿಕ್ರಂ ಕೆಕತ್ಪುರೆ ಹೇಳಿದರು.

ಅಳ್ಳಾಲಸಂದ್ರದಲ್ಲಿ ಆಸ್ಪತ್ರೆಯ ವತಿಯಿಂದ ಆಯೋಜಿಸಿದ್ದ ತಲೆ ಮತ್ತು ಕುತ್ತಿಗೆ ಕ್ಯಾನ್ಸರ್‌ ಕುರಿತ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಜಗತ್ತಿನಲ್ಲಿಯೇ ಅತಿ ಹೆಚ್ಚು ‘ತಲೆ ಮತ್ತು ಬಾಯಿ ಕ್ಯಾನ್ಸರ್‌’ ರೋಗಿಗಳು ಇರುವುದು ಭಾರತದಲ್ಲಿ’ ಎಂದರು.

ಆಸ್ಪತ್ರೆಯ ಕಾರ್ಯದರ್ಶಿ ಡಾ. ಗಿರೀಶ್‌ ಶೆಟ್ಟರ್‌, ‘ವಿಕಿರಣ ತಂತ್ರಗಳು, ರೇಡಿಯೊ ಥೆರಪಿ ಮತ್ತಿತರ ತಂತ್ರಜ್ಞಾನಗಳನ್ನು ಬಳಸಿಕೊಂಡು ಕ್ಯಾನ್ಸರ್‌ಗೆ ಚಿಕಿತ್ಸೆ ನೀಡಬಹುದಾಗಿದೆ. ಈ ಕ್ಷೇತ್ರದಲ್ಲಿ ಹೊಸ ಸಂಶೋಧನೆಗಳು ಆದಾಗ ಮಾತ್ರ, ರೋಗಿಗಳಿಗೆ ಉತ್ತಮ ಕ್ರಿಯಾತ್ಮಕ ಫಲಿತಾಂಶ ನೀಡಬಹುದಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT