ಗುರುವಾರ , ನವೆಂಬರ್ 14, 2019
22 °C

ಯಶವಂತ್‌ಗೆ 4 ಪದಕ

Published:
Updated:
Prajavani

ಬೆಂಗಳೂರು: ಬಲ್ಗೇರಿಯಾದಲ್ಲಿ ಇತ್ತೀಚೆಗೆ ನಡೆದ 4ನೇ ‘ವಿಶ್ವ ಯೋಗ ಹಬ್ಬ’ದಲ್ಲಿ ನಗರದ ಎಲೆಕ್ಟ್ರಾನಿಕ್ ಸಿಟಿಯ 13 ವರ್ಷದ ಬಾಲಕ ಎ.ಯಶವಂತ್‌ 4 ಪದಕ (2ಚಿನ್ನ, 1 ಬೆಳ್ಳಿ, 1ಕಂಚು) ಪಡೆದಿದ್ದಾನೆ. 

ಕಲಾತ್ಮಕ ಜೋಡಿ ಹಾಗೂ ಲಯಬದ್ಧ ಜೋಡಿ ಯೋಗಾಸನದಲ್ಲಿ ತಲಾ ಮೊದಲ ಸ್ಥಾನ, ಅಥ್ಲೆಟಿಕ್ ಏಕವ್ಯಕ್ತಿ ವಿಭಾಗದಲ್ಲಿ ಎರಡನೇ ಸ್ಥಾನ ಹಾಗೂ ಕಲಾತ್ಮಕ ಏಕವ್ಯಕ್ತಿ ವಿಭಾಗದಲ್ಲಿ ಮೂರನೇ ಸ್ಥಾನ ಪಡೆದಿದ್ದಾನೆ.

ಯಶವಂತ್‌ ಸರಸ್ವತಿ ಯೋಗಕೇಂದ್ರದ ಪುರುಷೋತ್ತಮ್‌ ಬಳಿ ಯೋಗಾಭ್ಯಾಸದ ತರಬೇತಿ ಪಡೆದಿದ್ದಾನೆ. ಪ್ರಸ್ತುತ ನಗರದ ಟ್ರಿಮಿಸ್‌ ವರ್ಲ್ಡ್‌ ಶಾಲೆಯಲ್ಲಿ 8ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾನೆ.

ಪ್ರತಿಕ್ರಿಯಿಸಿ (+)