ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವಕನಿಗೆ ಚಾಕುವಿನಿಂದ ಇರಿತ: ಇಬ್ಬರ ಬಂಧನ

Published 30 ಡಿಸೆಂಬರ್ 2023, 23:40 IST
Last Updated 30 ಡಿಸೆಂಬರ್ 2023, 23:40 IST
ಅಕ್ಷರ ಗಾತ್ರ

ಬೆಂಗಳೂರು: ಯುವತಿ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ಯುವಕನಿಗೆ ಚಾಕುವಿನಿಂದ ಇರಿದಿದ್ದ ಇಬ್ಬರು ಆರೋಪಿಗಳನ್ನು ಚಂದ್ರಾಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ನಾಯಂಡಹಳ್ಳಿ ನಿವಾಸಿಗಳಾದ ಧನುಷ್(20) ಹಾಗೂ ಶಾಬುದ್ದೀನ್(22) ಬಂಧಿತರು.

ಆರೋಪಿಗಳು, ಡಿ.21ರಂದು ನಾಯಂಡಹಳ್ಳಿ ಸಮೀಪದ ವಿನಾಯಕ ಲೇಔಟ್‌ನಲ್ಲಿ ಕಾರ್ತಿಕ್ ಎಂಬಾತನಿಗೆ ಚಾಕುವಿನಿಂದ ಇರಿದಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

‘ಧನುಷ್‌ ಪ್ರೇಯಸಿಯ ನಂಬರ್ ಪಡೆದಿದ್ದ ಕಾರ್ತಿಕ್, ಆಕೆಗೆ ಕರೆ ಮಾಡಿ ಮಾತಾಡಿದ್ದ. ಜತೆಗೆ ಆಕೆಯ ಹಿಂದೆ ಬಿದ್ದು ಪ್ರೀತಿಸುವಂತೆ ಪೀಡಿಸುತ್ತಿದ್ದ. ವಿಚಾರವನ್ನು ಧನುಷ್‌ಗೆ ಯುವತಿ ತಿಳಿಸಿದ್ದಳು. ವಿಚಾರ ಕೇಳಿ ಕುಪಿತಗೊಂಡಿದ್ದ ಧನುಷ್‌ ತನ್ನ ಸ್ನೇಹಿತ ಶಾಬುದ್ದೀನ್‌ಗೆ ತಿಳಿಸಿದ್ದ. ಕಾರ್ತಿಕ್‌ ಮೇಲೆ ಹಲ್ಲೆ ನಡೆಸಿ ಬುದ್ಧಿ ಕಲಿಸಲು ನಿರ್ಧರಿಸಿದ್ದರು. ಅದರಂತೆ ಡಿ.21ರ ಸಂಜೆ 6.30ಕ್ಕೆ ಕಾರ್ತಿಕ್‌ಗೆ ಕರೆ ಮಾಡಿದ ಧನುಷ್, ಮನೆಯಿಂದ ಹೊರ ಬರುವಂತೆ ಹೇಳಿದ್ದಾನೆ. ಮನೆಯಿಂದ 500 ಮೀಟರ್ ದೂರಕ್ಕೆ ಚಾಕುವಿನಿಂದ ಹಲ್ಲೆ ನಡೆಸಿ ಪರಾರಿ ಆಗಿದ್ದರು’ ಎಂದು ಪೊಲೀಸರು ಹೇಳಿದರು.

ಚೇತರಿಕೆ:‌ ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿದ್ದ ಕಾರ್ತಿಕ್ ತಾನೇ ಬೈಕ್ ಹತ್ತಿ ಆಸ್ಪತ್ರೆಗೆ ದಾಖಲಾಗಿದ್ದ. ಸದ್ಯ ಆತ ಚೇತರಿಸಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT