ಬೆಂಗಳೂರು: ಮೂರು ವೈದ್ಯಕೀಯ ಕಾಲೇಜುಗಳಲ್ಲಿನ 300 ಸೀಟುಗಳ ಪ್ರವೇಶಕ್ಕೆ ಭಾರತೀಯ ವೈದ್ಯಕೀಯ ಮಂಡಳಿ (ಎಂಸಿಐ) ಇನ್ನೂ ಅನುಮತಿ ನೀಡದ ಕಾರಣ ವೃತ್ತಿಪರ ಕೋರ್ಸ್ಗಳ ಪ್ರವೇಶಕ್ಕೆ ನಡೆಯಲಿರುವ ಆನ್ಲೈನ್ ಕೌನ್ಸೆಲಿಂಗ್ ಒಂದು ವಾರ ತಡವಾಗಲಿದೆ.

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ, ಸೋಮವಾರದಿಂದ (ಜೂನ್ 24) ಆನ್ಲೈನ್ ಮೂಲಕ ಕೋರ್ಸ್ ಹಾಗೂ ಕಾಲೇಜುಗಳನ್ನು ಗುರುತಿಸುವ ಪ್ರಕ್ರಿಯೆ ಆರಂಭವಾಗಬೇಕಿತ್ತು. ಆದರೆ, ಎಂಸಿಐ 300 ಸೀಟುಗಳಿಗೆ ಒಪ್ಪಿಗೆ ನೀಡದೆ ಇರುವುದರಿಂದ ಸೀಟು ಹಂಚಿಕೆ ಪಟ್ಟಿ ಪ್ರಕಟಿಸಿಲ್ಲ. ಹೀಗಾಗಿ ಕೌನ್ಸೆಲಿಂಗ್ ವಿಳಂಬವಾಗಲಿದೆ.

ರಾಯಚೂರು ಮತ್ತು ಬೀದರ್ ವೈದ್ಯಕೀಯ ಕಾಲೇಜುಗಳಲ್ಲಿನ ತಲಾ 100 ಸೀಟುಗಳು ಹಾಗೂ ಬೆಂಗಳೂರು ವೈದ್ಯಕೀಯ ಕಾಲೇಜಿನಲ್ಲಿ ಕಳೆದ ವರ್ಷ ಹೆಚ್ಚುವರಿಯಾಗಿ ಮಂಜೂರಾಗಿರುವ 100 ಸೀಟುಗಳ ಪ್ರವೇಶಕ್ಕೆ ಎಂಸಿಐ ಈ ವರ್ಷ ಅನುಮತಿ ನೀಡದಿರುವುದು ಆತಂಕ ಸೃಷ್ಟಿಸಿದೆ.

`ಮೇಲಿನ ಮೂರು ಕಾಲೇಜುಗಳಿಗೆ ಅಗತ್ಯವಿರುವ ಸಿಬ್ಬಂದಿ ಹಾಗೂ ಮೂಲಸೌಕರ್ಯಗಳನ್ನು ಕಲ್ಪಿಸಿಕೊಡುವುದಾಗಿ ಈಗಾಗಲೇ ಎಂಸಿಐಗೆ ಮುಚ್ಚಳಿಕೆ ಬರೆದುಕೊಟ್ಟಿದ್ದೇವೆ. ಇದರ ಆಧಾರದ ಮೇಲೆ ಎಂಸಿಐ ಷರತ್ತಿನ ಮೇಲೆ ಒಪ್ಪಿಗೆ ನೀಡುವ ವಿಶ್ವಾಸವಿದೆ' ಎಂದು ವೈದ್ಯಕೀಯ ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು `ಪ್ರಜಾವಾಣಿ'ಗೆ ತಿಳಿಸಿದರು.

`ಜುಲೈ ತಿಂಗಳ ಅಂತ್ಯದವರೆಗೂ ಪ್ರವೇಶಕ್ಕೆ ಅವಕಾಶ ಇದೆ. ಅಲ್ಲದೆ ಖಾಲಿ ಉಳಿಯುವ ಸೀಟುಗಳಿಗೆ ಆ ನಂತರವೂ ಪ್ರವೇಶ ಮಾಡಿಕೊಳ್ಳಬಹುದು. ಹೀಗಾಗಿ ವಿದ್ಯಾರ್ಥಿಗಳು ಆತಂಕಪಡುವ ಅಗತ್ಯವಿಲ್ಲ. 300 ಸೀಟುಗಳಿಗೆ ಎಂಸಿಐ ಒಪ್ಪಿಗೆ ನೀಡಿದರೆ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂಬ ಕಾರಣಕ್ಕೆ 2-3 ದಿನ ಕಾದು ನೋಡುತ್ತೇವೆ. ತರಾತುರಿಯಲ್ಲಿ ಕೌನ್ಸೆಲಿಂಗ್ ಆರಂಭಿಸುವುದಿಲ್ಲ' ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಹೇಳಿದರು.

ಇದೇ 28ರ ಒಳಗೆ ಸರ್ಕಾರ ಸೀಟು ಹಂಚಿಕೆ ಪಟ್ಟಿ ಪ್ರಕಟಿಸುವ ನಿರೀಕ್ಷೆ ಇದೆ. ಆ ಪ್ರಕಾರ ಪಟ್ಟಿ ಬಂದರೆ ಜುಲೈ ಒಂದರಿಂದ ಆನ್ಲೈನ್ ಮೂಲಕ ಸೀಟುಗಳನ್ನು ಗುರುತಿಸುವ ಪ್ರಕ್ರಿಯೆ ಆರಂಭವಾಗಬಹುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.