ಬೆಂಗಳೂರು: ಐಎಸ್‌ಐ ಚಿಹ್ನೆಯನ್ನು ದುರ್ಬಳಕೆ ಮಾಡಿಕೊಂಡು ಗ್ರಾಹಕರಿಗೆ ವಂಚಿಸುತ್ತಿದ್ದ ಎರಡು ಅಂಗಡಿಗಳ ಮೇಲೆ ಭಾರತೀಯ ಮಾನಕ ವಿಭಾಗದ (ಬಿಐಎಸ್) ಬೆಂಗಳೂರು ಶಾಖೆಯ ಅಧಿಕಾರಿಗಳು ಮಂಗಳವಾರ ದಾಳಿ ನಡೆಸಿದ್ದಾರೆ.

ಹೊಸೂರು ರಸ್ತೆಯ ಬೊಮ್ಮಸಂದ್ರ ಕೈಗಾರಿಕಾ ವಲಯದಲ್ಲಿರುವ ಕಿಮಾಯೆ ಕಿಚನ್ಸ್ ಇನ್‌ಕಾರ್ಪೊರೇಷನ್ ಹೆಸರಿನ ಅಂಗಡಿ ಮಾಲೀಕರು ವಿವಿಧ ಕಂಪೆನಿಗಳ ಐಎಸ್‌ಐ ಚಿಹ್ನೆ ಇಲ್ಲದ ಗ್ಯಾಸ್ ಸ್ಟೌಗಳನ್ನು ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ಮಾಹಿತಿ ಕಲೆ ಹಾಕಿ ಹೆಬ್ಬಗೋಡಿ ಪೊಲೀಸರ ನೆರವಿನಿಂದ ಆ ಅಂಗಡಿ ಮೇಲೆ ದಾಳಿ ನಡೆಸಲಾಯಿತು ಎಂದು ಬಿಐಎಸ್ ಅಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮತ್ತೊಂದು ಪ್ರಕರಣ: ಪರವಾನಿಗೆ ಪಡೆಯದೆ ವಿವಿಧ ಕಂಪೆನಿಗಳ ಹೆಸರಿನಲ್ಲಿ ಕುಡಿಯುವ ನೀರು ಪೂರೈಕೆ ಮಾಡುತಿದ್ದ ಕೃತಿಕ್ ಮಿನರಲ್ಸ್ ಎಂಬ ಅಂಗಡಿ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಗೋಲ್ಡ್‌ಲೈಫ್, ಫೈವ್ ಸ್ಟಾರ್, ಅಕ್ವಾಸಿಟಿ, ಎಲ್.ಜಿ.ಅಕ್ವಾ, ಹಾಗೂ ಅಕ್ವಾಫೈಸ್ ಎಂಬ ಹೆಸರುಗಳಿಂದ ಗ್ರಾಹಕರಿಗೆ ನೀರು ಪೂರೈಕೆ ಮಾಡುತ್ತಿದ್ದರು. ಮಾಲೀಕರು ಈ ಬಗ್ಗೆ ಬಿಎಸ್‌ಐನಿಂದ ಯಾವುದೇ ಪರವಾನಿಗೆ ಪಡೆದಿರಲಿಲ್ಲ ಎಂದು ತಿಳಿಸಿದ್ದಾರೆ.

ಹೀಗೆ ಐಎಸ್‌ಐ ಚಿಹ್ನೆ ದುರ್ಬಳಕೆ ಮಾಡಿ ಉತ್ಪನ್ನಗಳ ಮಾರಾಟ ಮಾಡ್ತುರುವುದು ತಿಳಿದು ಬಂದಲ್ಲಿ ಮಾಹಿತಿ ನೀಡುವಂತೆ ತಿಳಿಸಿದ್ದಾರೆ. (ದೂ: 28935355, 28394956)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.