ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಮಲಾ ಬರಹ ಸತ್ಯಾಂಶದ ಹುಡುಕಾಟ: ವಿಮರ್ಶಕ ಎಸ್.ಆರ್.ವಿಜಯಶಂಕರ್

ಲೇಖಕಿಯರ ಸಂಘದಿಂದ ಅಭಿನಂದನಾ ಕಾರ್ಯಕ್ರಮ
Last Updated 28 ಅಕ್ಟೋಬರ್ 2018, 20:06 IST
ಅಕ್ಷರ ಗಾತ್ರ

ಬೆಂಗಳೂರು: ‘ಕಮಲಾ ಹಂಪನಾ ಅವರ ಸಂಶೋಧನಾ ಬರಹಗಳಲ್ಲಿ ಸತ್ಯಾಂಶದ ಹುಡುಕಾಟ ಮತ್ತು ವಿಚಾರಗಳ ಶೋಧದ ಹದವಾದ ಮಿಶ್ರಣವಿದೆ’ ಎಂದು ವಿಮರ್ಶಕ ಎಸ್.ಆರ್.ವಿಜಯಶಂಕರ್ ಅಭಿಪ್ರಾಯಪಟ್ಟರು.

ಕಮಲಾ ಹಂಪನಾ ಅವರಿಗೆ 84 ವರ್ಷ ತುಂಬಿದ ನೆನಪಿನಲ್ಲಿಕರ್ನಾಟಕ ಲೇಖಕಿಯರ ಸಂಘವು ನಗರದಲ್ಲಿ ಭಾನುವಾರ ಆಯೋಜಿಸಿದ್ದ ‘ಅಭಿನಂದನಾ ಕಾರ್ಯಕ್ರಮದಲ್ಲಿ’ ಅವರು ಮಾತನಾಡಿದರು.

‘ಇರುವುದನ್ನು ಇನ್ನಷ್ಟು ನೋಡಿ ಹೊಸತನ್ನು ಅರಿಯುವ ಅನ್ವೇಷಣಾ ಕ್ರಮ ನಮ್ಮಲ್ಲಿ ಹಿಂದಿನಿಂದಲೂ ಇದೆ. ಸಂಶೋಧನೆ, ಸಂಶೋಧಕ ಎಂಬ ಪರಿಭಾಷೆ ಹೊಸತು ಹೊರತು, ಅದರ ಪರಿಕಲ್ಪನೆ ಪುರಾತನವಾದದ್ದು. ಈ ತಳಹದಿಯ ಮೇಲೆ ಕಮಲಾ ಅವರು ವೈಜ್ಞಾನಿಕವಾಗಿ ಸಂಶೋಧನಾ ಕಾರ್ಯ ಮಾಡಿದ್ದಾರೆ. ಇವರ ಬರಹ ಬೋಧನಾ ಶೈಲಿಯಲ್ಲಿದೆ’ ಎಂದರು.

ಶಿಕ್ಷಣ ತಜ್ಞ ಕೆ.ಇ.ರಾಧಾಕೃಷ್ಣ ಮಾತನಾಡಿ,‘ಹಂಪನಾ ದಂಪತಿಯನ್ನು ಮುದ್ದಣ್ಣ–ಮನೋರಮೆ ದಾಂಪತ್ಯಕ್ಕೆ ಹೋಲಿಸಬಹುದು. ಕಮಲಾ ಅವರ ಬರವಣಿಗೆಗಳು ಸಾಮಾಜಿಕ ಭಕ್ತಿಯಿಂದ ಕೂಡಿವೆ. ಈ ಭಕ್ತಿಯು ಶರಣರ ಮತ್ತು ದಾಸರ ಪರಂಪರೆಯ ಆಶಯವನ್ನು ತೋರ್ಪಡಿಸುತ್ತದೆ’ ಎಂದರು.

ಅಧ್ಯಾಪಕಿ ಎಲ್.ಜಿ.ಮೀರಾ,‘ಕಮಲಾ ಮೇಡಂ ದೇಹಕ್ಕೆ 84 ವರ್ಷ ಆಯಸ್ಸು ಆಗಿರಬಹುದು, ಆದರೆ ಅವರ ಮನಸ್ಸು 14 ವರ್ಷ ಹರೆಯದ ಕಲಿಕೆಯ ಹಂಬಲ ಮತ್ತು ಉತ್ಸಾಹವನ್ನು ಹೊಂದಿದೆ. ಇವರ ಶ್ರಮದಿಂದಲೇ ವಿಜಯನಗರದ ಸರ್ಕಾರಿ ಕಾಲೇಜಿನ ಹೊಸ ಕಟ್ಟಡ ನಿರ್ಮಾಣವಾಯಿತು’ ಎಂದು ಸ್ಮರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT