ಬೆಂಗಳೂರು: ರಾಜಾನುಕುಂಟೆ ಬಳಿ ಕಾರು ಮತ್ತು ಬಿಎಂಟಿಸಿ ಬಸ್ ನಡುವೆ ಇತ್ತೀಚೆಗೆ ಸಂಭವಿಸಿದ ಅಪಘಾತದಲ್ಲಿ ಸಾವನ್ನಪ್ಪಿದ ಕಾದಂಬರಿ ವಾಮನನ್ (37) ಅವರ ಸ್ಮರಣಾರ್ಥ ಕುಟುಂಬ ಸದಸ್ಯರು ಹಾಗೂ ಸ್ನೇಹಿತರು ಸಾಮಾಜಿಕ ಜಾಲತಾಣ ಫೇಸ್ಬುಕ್ನಲ್ಲಿ ರಸ್ತೆ ಸುರಕ್ಷತೆ ಅಭಿಯಾನ ಆರಂಭಿಸಿದ್ದಾರೆ.

ಸಂಚಾರ ನಿಯಮ ಪಾಲನೆ, ವಾಹನ ಸವಾರರು ಮತ್ತು ಪಾದಚಾರಿಗಳ ಸುರಕ್ಷತೆ ಹೀಗೆ ನಗರದ ಸಂಚಾರ ವ್ಯವಸ್ಥೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಸಾರ್ವಜನಿಕರು, ಸರ್ಕಾರಿ ಇಲಾಖೆಗಳು, ಅಧಿಕಾರಿಗಳು ಹಾಗೂ ಸಂಘ ಸಂಸ್ಥೆಗಳನ್ನು ಜಾಗೃತಗೊಳಿಸುವುದು ಈ ಅಭಿಯಾನದ ಉದ್ದೇಶ.

‘Not--–A-–Statistic ಹೆಸರಿನಲ್ಲಿ ಫೇಸ್ಬುಕ್ ಖಾತೆ ತೆರೆದು ಅಭಿಯಾನ ಆರಂಭಿಸಲಾಗಿದ್ದು, ಈಗಾಗಲೇ 879 ಮಂದಿ ಕೈಜೋಡಿಸಿದ್ದಾರೆ’ ಎಂದು ಕಾದಂಬರಿ ಅವರ ಪತಿ ಮಯೂರ್ ವಾಮನನ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಪತ್ನಿಗೆ ಬಂದಂತಹ ಸ್ಥಿತಿ ಯಾರಿಗೂ ಬರಬಾರದು. ಅಪಘಾತಗಳಿಗೆ ಕಾರಣರಾದ ಚಾಲಕರು, ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸಾರಿಗೆ ಸಂಸ್ಥೆ ಘಟನೆಗೆ ಉತ್ತರದಾಯಿತ್ವ ಹೊಂದಿರಬೇಕು ಎಂಬುದು ಅಭಿಯಾನದ ಆಶಯ’ ಎಂದು ಹೇಳಿದ್ದಾರೆ.

ಘಟನೆ ಹಿನ್ನೆಲೆ: ರಾಜಾನುಕುಂಟೆ ಸಮೀಪ ಮಾ.2ರಂದು ಬಿಎಂಟಿಸಿ ಬಸ್ ಚಾಲಕ ಇತರೆ ವಾಹನಗಳನ್ನು ಹಿಂದಿಕ್ಕುವ ಯತ್ನದಲ್ಲಿ ಎದುರುಗಡೆಯಿಂದ ಬರುತ್ತಿದ್ದ ಕಾದಂಬರಿ ಅವರ ಕಾರಿಗೆ ವಾಹನ ಗುದ್ದಿಸಿದ್ದ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದರು.

ರಸ್ತೆ ಸುರಕ್ಷತೆಗೆ ಸಂಬಂಧಿಸಿದಂತೆ ಹಲವು ಸಂಘ ಸಂಸ್ಥೆಗಳೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದ ಕಾದಂಬರಿ ಅವರು ರಸ್ತೆ ಅಪಘಾತದಲ್ಲೇ ಈ ರೀತಿ ದುರಂತ ಅಂತ್ಯ ಕಂಡಿದ್ದರು.

ಅಪಘಾತದ ನಂತರ ಚಾಲಕ ವಾಹನ ಬಿಟ್ಟು ಪರಾರಿಯಾಗಿದ್ದ. ಘಟನೆ ನಡೆದು ನಾಲ್ಕು ದಿನಗಳಾದರೂ ಪೊಲೀಸರು ಆತನನ್ನು ಬಂಧಿಸಿರಲಿಲ್ಲ. ಬಳಿಕ ಆತ ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ಪಡೆದಿದ್ದ.

ಮುಂಬೈ ಮೂಲದ ಕಾದಂಬರಿ ಅವರು ವಾಸ್ತುಶಿಲ್ಪ ವಿಷಯದಲ್ಲಿ ಪದವೀಧರೆಯಾಗಿದ್ದರು. ಅಲ್ಲದೇ, ನಗರಾಭಿವೃದ್ಧಿ ಯೋಜನೆ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು. ತಮಿಳುನಾಡು ಮೂಲದ ಮಯೂರ್ ಅವರು ‘ಚೈನಾಲಿಟಿಕ್ಸ್’ ಎಂಬ ಸಾಫ್ಟ್ವೇರ್ ಕಂಪೆನಿಯಲ್ಲಿ ಹಿರಿಯ ವ್ಯವಸ್ಥಾಪಕರಾಗಿದ್ದಾರೆ. ಅಮೆರಿಕದಲ್ಲಿ ನೆಲೆಸಿದ್ದ ದಂಪತಿ ನಾಲ್ಕು ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದರು.

ಕಾದಂಬರಿ ಅವರು ಭಾರತೀಯ ವಿಜ್ಞಾನ ಸಂಸ್ಥೆಯ ಮೂಲಸೌಕರ್ಯ, ಸುಸ್ಥಿರ ಸಾರಿಗೆ ಮತ್ತು ನಗರ ಯೋಜನೆ ಕೇಂದ್ರ (ಸಿಐಎಸ್ಟಿಯುಪಿ), ಜನಾಗ್ರಹ ಮತ್ತಿತರ ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡಿದ್ದರು.

ತವರಿಗೆ ಹೋಗುವಾಗ ಅಪಘಾತ: ‘ಇಂದಿರಾನಗರ ಸಮೀಪದ ಕೇಂಬ್ರಿಡ್ಜ್ ಲೇಔಟ್ನಲ್ಲಿರುವ ನಮ್ಮ ಮನೆಯ ಬಳಿ ಚರಂಡಿ ಕಾಮಗಾರಿ ನಡೆಯುತ್ತಿತ್ತು. ಇದರಿಂದಾಗಿ ಮನೆಯ ಮುಂದೆ ಕಾರು ನಿಲ್ಲಿಸಲು ತೊಂದರೆಯಾಗುತ್ತಿತ್ತು. ಆದ ಕಾರಣ ಪತ್ನಿ ರಾಜಾನುಕುಂಟೆಯಲ್ಲಿರುವ ತವರು ಮನೆಗೆ ಕಾರು ಬಿಟ್ಟು ಬರಲು ಹೋಗುತ್ತಿದ್ದಾಗ ಅಪಘಾತ ಸಂಭವಿಸಿತ್ತು’ ಎಂದು ಮಯೂರ್ ಘಟನೆಯನ್ನು ನೆನಪಿಸಿಕೊಂಡರು.

‘ಘಟನೆ ನಡೆದು 15 ದಿನ ಕಳೆದರೂ ಬಿಎಂಟಿಸಿ ಅಧಿಕಾರಿಗಳು ಚಾಲಕನ ವಿರುದ್ಧ ಶಿಸ್ತುಕ್ರಮ ಜರುಗಿಸಿಲ್ಲ. ಅಲ್ಲದೇ, ಅಧಿಕಾರಿಗಳು ಸೌಜನ್ಯಕ್ಕೂ ನನ್ನನ್ನು ಸಂಪರ್ಕಿಸಿ ಘಟನೆಯ ಮಾಹಿತಿ ಪಡೆದಿಲ್ಲ. ಈ ಬಗ್ಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ದೂರು ನೀಡಿ, ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಲು ಮನವಿ ಮಾಡಿದ್ದೇನೆ. ಸಚಿವರು ಸಂಬಂಧಪಟ್ಟ ಚಾಲಕನನ್ನು ಅಮಾನತು ಮಾಡುವುದಾಗಿ ಭರವಸೆ ನೀಡಿದ್ದಾರೆ’ ಎಂದು ತಿಳಿಸಿದ್ದಾರೆ.

ಸುಳ್ಳು ಆರೋಪ: ‘ಪತ್ನಿಯೇ ಸಂಚಾರ ನಿಯಮ ಉಲ್ಲಂಘಿಸಿ ರಸ್ತೆಯ ಬಲ ಭಾಗಕ್ಕೆ ವಾಹನ ನುಗ್ಗಿಸಿದ್ದರಿಂದ ಅಪಘಾತ ಸಂಭವಿಸಿತು ಎಂದು ಬಸ್ ಚಾಲಕ ಘಟನೆ ನಂತರ ಸುಳ್ಳು ಆರೋಪ ಮಾಡಿದ್ದಾನೆ. ಇದೇ ರೀತಿಯ ಘಟನೆ ಅಮೆರಿಕದಲ್ಲಿ ನಡೆದಿದ್ದರೆ ಅಲ್ಲಿನ ಪೊಲೀಸರು ಚಾಲಕನನ್ನು ಕೂಡಲೇ ಬಂಧಿಸಿ ಜೈಲಿಗೆ ಕಳುಹಿಸಿರುತ್ತಿದ್ದರು’ ಎಂದು ಮಯೂರ್ ಹೇಳಿದ್ದಾರೆ.

ಮಾರ್ಗಸೂಚಿ: ಸಾರ್ವಜನಿಕರು, ಪ್ರಯಾಣಿಕರು, ಪಾದಚಾರಿಗಳು ಮತ್ತು ವಾಹನ ಸವಾರರ ಸುರಕ್ಷತೆ ದೃಷ್ಟಿಯಿಂದ ಬಿಎಂಟಿಸಿ ಹಾಗೂ ಕೆಎಸ್ಆರ್ಟಿಸಿ ಕೆಲ ಮಾರ್ಗಸೂಚಿ ನಿಯಮಗಳನ್ನು ಅನುಸರಿಸಬೇಕು ಎಂದು ಮಯೂರ್ ಅವರು ಸಲಹೆ ನೀಡಿದ್ದಾರೆ.

ಅಜಾಗರೂಕವಾಗಿ ವಾಹನ ಚಾಲನೆ ಮಾಡಿ ಅಪಘಾತಕ್ಕೆ ಕಾರಣರಾಗುವ ಬಸ್ ಚಾಲಕರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕು. ಪ್ರತಿದಿನದ ಸಂಚಾರ ಸ್ಥಿತಿಗತಿಗೆ ಅನುಗುಣವಾಗಿ ಟ್ರಿಪ್ಗಳ ಸಂಖ್ಯೆಯನ್ನು ನಿಗದಿಪಡಿಸಬೇಕು.
ಸಾರ್ವಜನಿಕರಿಗೆ ಮತ್ತು ಪ್ರಯಾಣಿಕರಿಗೆ ದೂರು ಸಲ್ಲಿಸಲು ಅನುಕೂಲವಾಗುವಂತೆ ಸಹಾಯವಾಣಿ ಕೇಂದ್ರಗಳನ್ನು ಆರಂಭಿಸಬೇಕು. ಆ ಕೇಂದ್ರಗಳ ದೂರವಾಣಿ ಸಂಖ್ಯೆಯನ್ನು ಬಸ್ನ ಹಿಂಬದಿಯಲ್ಲಿ ಕಡ್ಡಾಯವಾಗಿ ಬರೆಸಿರಬೇಕು.

ಪ್ರಯಾಣಿಕರು ಅಥವಾ ಸಾರ್ವಜನಿಕರಿಂದ ಬರುವ ದೂರುಗಳನ್ನು ಆಧರಿಸಿ ಸಂಬಂಧಪಟ್ಟ ಚಾಲಕರು ಮತ್ತು ನಿರ್ವಾಹಕರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಕೆಲಸದ ಒತ್ತಡದಿಂದ ಅಪಘಾತ: ಬಿಎಂಟಿಸಿ ಚಾಲಕರಿಗೆ ಕೆಲಸದ ಒತ್ತಡ ಹೆಚ್ಚಾಗಿದ್ದು, ಇದರಿಂದ ಅಪಘಾತಗಳು ಸಂಭವಿಸುತ್ತಿವೆ ಎಂದು ಸಂಚಾರ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ವಾಹನ ದಟ್ಟಣೆ ಹೆಚ್ಚಿರುವ ವೇಳೆಯಲ್ಲಿ ಬಸ್ ಪ್ರತಿ ನಾಲ್ಕು ನಿಮಿಷಕ್ಕೆ 1 ಕಿ.ಮೀ ದೂರ ಕ್ರಮಿಸಬೇಕು. ವಾಹನ ದಟ್ಟಣೆ ಕಡಿಮೆ ಇರುವ ಸಂದರ್ಭದಲ್ಲಿ ಮೂರು ನಿಮಿಷಕ್ಕೆ 1 ಕಿ.ಮೀ ಕ್ರಮಿಸಬೇಕು. ನಗರದ ಹೊರ ವಲಯಕ್ಕೆ ಹೋಗುವ ಬಸ್ಗಳು ಪ್ರತಿ ಗಂಟೆಗೆ 50 ಕಿ.ಮೀ ದೂರ ಕ್ರಮಿಸಬೇಕೆಂದು ಚಾಲಕರಿಗೆ ಮಿತಿ ನಿಗದಿಪಡಿಸಲಾಗಿದೆ. ಇದರಿಂದ ನಿಗದಿತ ಸಮಯದೊಳಗೆ ನಿರ್ದಿಷ್ಟ ದೂರವನ್ನು ಕ್ರಮಿಸಲೇಬೇಕೆಂಬ ಅನಿವಾರ್ಯತೆಗೆ ಸಿಲುಕಿರುವ ಚಾಲಕರು ಅತಿ ವೇಗವಾಗಿ ವಾಹನ ಚಾಲನೆ ಮಾಡಿ ಅಪಘಾತಗಳಿಗೆ ಕಾರಣರಾಗುತ್ತಿದ್ದಾರೆ ಎಂದು ತಜ್ಞರು ಹೇಳುತ್ತಾರೆ.

ಬಿಎಂಟಿಸಿ ಸಿಬ್ಬಂದಿಗೆ ಒಂದು ಪಾಳಿಯಲ್ಲಿ ಎಂಟು ತಾಸುಗಳ ಕೆಲಸದ ಅವಧಿಯನ್ನು ನಿಗದಿಪಡಿಸಲಾಗಿದೆ. ಸಿಬ್ಬಂದಿ ಕೊರತೆ ಇದ್ದ ಸಂದರ್ಭದಲ್ಲಿ ಹಿರಿಯ ಅಧಿಕಾರಿಗಳು ಲಭ್ಯ ಸಿಬ್ಬಂದಿಯಿಂದ ಹೆಚ್ಚಿನ ಅವಧಿವರೆಗೆ ಕೆಲಸ ಮಾಡಿಸುತ್ತಿದ್ದಾರೆ. ಇದರಿಂದ ಸಿಬ್ಬಂದಿಗೆ ಕಾರ್ಯ ಒತ್ತಡ ಹೆಚ್ಚಿ ಅಪಘಾತಗಳು ಸಂಭವಿಸುತ್ತಿವೆ ಎಂದು ಅವರು ತಿಳಿಸಿದ್ದಾರೆ.

ತರಬೇತಿ: ಮಾಗಡಿ ರಸ್ತೆಯ ವಡ್ಡರಹಳ್ಳಿಯಲ್ಲಿರುವ ಸಂಸ್ಥೆಯ ತರಬೇತಿ ಕೇಂದ್ರದಲ್ಲಿ ಸಿಬ್ಬಂದಿಗೆ ಆಗಾಗ್ಗೆ ತರಬೇತಿ ನೀಡಲಾಗುತ್ತಿದೆ. ಪದೇ ಪದೇ ಅಪಘಾತ ಮಾಡುವ ಚಾಲಕರು ಮತ್ತು ಪ್ರಯಾಣಿಕರೊಂದಿಗೆ ಒರಟಾಗಿ ನಡೆದುಕೊಳ್ಳುವ ನಿರ್ವಾಹಕರನ್ನು ಗುರುತಿಸಿ ಅವರಿಗೆ ಹೆಚ್ಚಿನ ತರಬೇತಿ ನೀಡಲಾಗುತ್ತಿದೆ ಎಂದು ಬಿಎಂಟಿಸಿ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರತಿ ವರ್ಷ ರಸ್ತೆ ಸುರಕ್ಷತಾ ಸಪ್ತಾಹ ಹಮ್ಮಿಕೊಂಡು ಚಾಲಕರನ್ನು ಜಾಗೃತಗೊಳಿಸಲಾಗುತ್ತಿದೆ. ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಗಳು, ಮನೋವೈದ್ಯರು, ಸಂಚಾರ ತಜ್ಞರು, ಸಂಚಾರ ಪೊಲೀಸರಿಂದ ಸಿಬ್ಬಂದಿಗೆ ವೃತ್ತಿಪರ ತರಬೇತಿ ಕೊಡಿಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಗಮನಕ್ಕೆ ಬಂದಿಲ್ಲ
ಘಟನೆ ನನ್ನ ಗಮನಕ್ಕೆ ಬಂದಿಲ್ಲ. ಆ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು ಪರಿಶೀಲನೆ ನಡೆಸಿ ಚಾಲಕನ ವಿರುದ್ಧ ಶಿಸ್ತುಕ್ರಮ ಜರುಗಿಸುವ ಸಂಬಂಧ ನಿರ್ಧಾರ ಕೈಗೊಳ್ಳಲಾಗುವುದು

–ಅಂಜುಂ ಪರ್ವೇಜ್, ವ್ಯವಸ್ಥಾಪಕ ನಿರ್ದೇಶಕ, ಬಿಎಂಟಿಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.