ಬೆಂಗಳೂರು: ಬೆಥೆಲ್ ಕಾಲೇಜಿನಲ್ಲಿ ನಕಲಿ ಅಂಕಪಟ್ಟಿ ಮತ್ತು ಪರೀಕ್ಷಾ ಪ್ರವೇಶ ಪತ್ರಗಳನ್ನು ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಇಲಾಖೆ ಮೂಲಗಳು ತಿಳಿಸಿವೆ.

ಬೆಥೆಲ್ ಮತ್ತು ಹಾಸ್ಮಾಟ್ ಸಮೂಹದ ಸಂಸ್ಥೆಯಲ್ಲಿ ನಕಲಿ ಪ್ರವೇಶ ಪತ್ರಗಳನ್ನು ನೀಡುತ್ತಿರುವ ಬಗ್ಗೆ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ (ಆರ್‌ಜಿಯುಎಚ್‌ಎಸ್) ಪರಿಶೀಲನೆ ನಡೆಸಿತ್ತು. ವಿಶ್ವವಿದ್ಯಾಲಯದ ದಾಖಲೆ ಹಾಗೂ ಅಂಕಪಟ್ಟಿಗಳನ್ನು ನಕಲು ಮಾಡಿದ ಪ್ರಕರಣ ಪರಿಶೀಲನೆಗೆ ವಿಶ್ವವಿದ್ಯಾಲಯ ನೇಮಿಸಿದ್ದ ತನಿಖಾ ತಂಡ ಇತ್ತೀಚೆಗೆ ವರದಿಸಲ್ಲಿಸಿದೆ. ಆಂತರಿಕ ತನಿಖಾ ಸಮಿತಿಯ ವರದಿಯನ್ನು ಆರ್‌ಜಿಯುಎಚ್‌ಎಸ್ ಅಧಿಕಾರಿಗಳು ಸಿಂಡಿಕೇಟ್ ಸಭೆಗೆ ನೀಡಿದ್ದು, ಆ ಬಗ್ಗೆ ವಿವರಣೆ ಕೇಳಿ ಕಾಲೇಜಿಗೆ ಶೋಕಾಸ್ ನೋಟಿಸ್ ನೀಡಲು ಸೂಚಿಸಲಾಗಿತ್ತು. ತನಿಖಾ ತಂಡ 1,200 ಪುಟಗಳ ವರದಿ ನೀಡಿದ್ದು, ಅದರಲ್ಲಿ ಆ ಕಾಲೇಜಿನ ಮಾನ್ಯತೆ ರದ್ದುಗೊಳಿಸುವ ಶಿಫಾರಸು ಮಾಡಿದೆ.

ಕಾಲೇಜಿನ ಅಕ್ರಮದ ಬಗ್ಗೆ ಇರಾನಿ ವಿದ್ಯಾರ್ಥಿನಿಯೊಬ್ಬರು ತಿಲಕ್ ನಗರ ಠಾಣೆಯಲ್ಲಿ ದೂರು ನೀಡಿದ ನಂತರ ಈ ಪ್ರಕರಣ ಬೆಳಕಿಗೆ ಬಂದಿದೆ. ಬಳಿಕ ವಅಧಿಕಾರಿಗಳು, ಕಾಲೇಜಿನಿಂದ 500 ಜಿ.ಬಿ ದತ್ತಾಂಶ ವಶಪಡಿಸಿಕೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.