ಮಂಗಳವಾರ, 4 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಿಮಗೆ ಮುತ್ತೈದೆ ಭಾಗ್ಯ... ನಮಗೆ ಮತ ಭಾಗ್ಯ’

Last Updated 31 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಮುನಿರಾಜು ಅವರ ಪತ್ನಿ ಸುಜಾತ ಅವರು ಚಿಕ್ಕಬಾಣಾವರದಲ್ಲಿ ಮಹಿಳೆಯರಿಗೆ ಬಳೆ ತೊಡಿಸಿ, ಅರಿಶಿನ ಕುಂಕುಮ ಕೊಟ್ಟು ಮತ ಕೇಳಿದ್ದಾರೆ’ ಎಂದು ಹೆಸರು ಹೇಳಲು ಇಚ್ಛಿಸದ ಸ್ತ್ರೀಶಕ್ತಿ ಸಂಘದ ಮಹಿಳೆ ತಿಳಿಸಿದರು.

‘ಸ್ತೀಶಕ್ತಿ ಗುಂಪುಗಳಿಗೆ ವಿಶೇಷ ಸಭೆ ಇದೆ ಎಂದು ಹೇಳಿ ಕರೆಸಿದರು. ಸಭೆಗೆಂದು ಬಂದ ಮಹಿಳೆಯರಿಗೆ ಗೌರಿ ಹಬ್ಬದಲ್ಲಿ ಬಾಗಿನ ನೀಡುವಂತೆ ಎಲ್ಲರಿಗೂ ಉಡಿ ತುಂಬಿದರು’ ಎಂದರು. ‌‘ನನ್ನ ಗಂಡನಿಗೆ ಮತ ಹಾಕಿ. ಈ ಸಾರಿ ಗೆದ್ದರೆ ಮೂರನೇ ಬಾರಿ ಅವಕಾಶ ಸಿಕ್ಕಂತಾಗುತ್ತದೆ. ಮಾಡಬೇಕಾಗಿರುವ ಅಭಿವೃದ್ಧಿ ಕೆಲಸಗಳು ಸಾಕಷ್ಟು ಇವೆ. ನಿಮ್ಮ ಕಷ್ಟದಲ್ಲಿ ನಾವು ಭಾಗಿಯಾಗುತ್ತೇವೆ. ಮುತ್ತೈದೆ ಭಾಗ್ಯದ ಎಲ್ಲಾ ಸಂಕೇತಗಳನ್ನು ಉಡುಗೊರೆಯಾಗಿ ಕೊಟ್ಟಿದ್ದೇನೆ. ಮತ ಹಾಕುವ ಭರವಸೆ ನೀಡಿ ಎಂದು ಸುಜಾತಾ ಕೋರಿದರು’ ಎಂದರು.

‘ಸ್ತ್ರೀಶಕ್ತಿ ಗುಂಪಿನ ಮಹಿಳೆಯರು ಬಿಜೆಪಿ ಏಜೆಂಟರಲ್ಲ. ಸ್ವಾವಲಂಬನೆಯಿಂದ ಬದುಕು ಸಾಧಿಸಲು ಸಂಘ ರೂಪಿಸಿಕೊಂಡಿದ್ದೇವೆ. ಇವರೇನು ನಮ್ಮ ಬದುಕು ಉದ್ಧಾರ ಮಾಡುವುದು’ ಎಂದು ಮಹಿಳೆಯೊಬ್ಬರು ಪ್ರಶ್ನಿಸಿದರು.

‘ಬಿಜೆಪಿಯ ಕೆಲ ಮುಖಂಡರು ಪಕ್ಷ ತೊರೆದು ಜೆಡಿಎಸ್ ಸೇರ್ಪಡೆಯಾಗುತ್ತಿದ್ದಾರೆ. ಈ ಬೆಳವಣಿಗೆ ಶಾಸಕರಲ್ಲಿ ನಡುಕ ಹುಟ್ಟಿಸಿದೆ’ ಎಂದು ಗ್ರಾಮದ ಕೆಲವು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT