ಲೋಕಸಭೆಗೆ ದೇಶದಲ್ಲಿ ನಡೆದ ಏಳು ಹಂತಗಳ ಮತದಾನದಲ್ಲಿ ಏ. 26 ಹಾಗೂ ಮೇ 7ರಂದು ಎರಡು ಹಂತಗಳಲ್ಲಿ ಕರ್ನಾಟಕದ 28 ಕ್ಷೇತ್ರಗಳಿಗೆ ಮತದಾನ ನಡೆದಿತ್ತು. ಬಿಜೆಪಿ–ಜೆಡಿಎಸ್ ಮೈತ್ರಿ ಒಂದೆಡೆಯಾದರೆ, ಆಡಳಿತಾರೂಢ ಕಾಂಗ್ರೆಸ್ ಮತ್ತೊಂದೆಡೆ. ಯಾರ ಕೈ ಮೇಲಾಗಲಿದೆ ಎಂಬುದಕ್ಕೆ ಇಂದು ನಡೆಯಲಿರುವ ಮತ ಎಣಿಕೆ ತೆರೆ ಎಳೆಯಲಿದೆ. ಮತ ಎಣಿಕೆ ನಡೆಯುತ್ತಿದ್ದು, ನಿರೀಕ್ಷೆಗಳು ಗರಿಗೆದರಿವೆ...