ಬೆಂಗಳೂರು: `ಕನ್ನಡ ಸಾಹಿತ್ಯದಲ್ಲಿ ಮಹಿಳಾಪರ ಚಿಂತನೆಗಳಿರುವ ಪುಸ್ತಕಗಳ ಸಂಖ್ಯೆ ಹೆಚ್ಚಾಗಬೇಕು~ ಎಂದು ವಿದ್ವಾಂಸ ಪ್ರೊ. ಟಿ.ವಿ.ವೆಂಕಟಾಚಲ ಶಾಸ್ತ್ರಿ ಹೇಳಿದರು. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ನಲ್ಲಿ ಭಾನುವಾರ ಏರ್ಪಡಿಸಿದ್ದ ಕರ್ನಾಟಕ ಲೇಖಕಿಯರ ಸಂಘದ ಸಹಯೋಗದಲ್ಲಿ ನವಕರ್ನಾಟಕ ಪ್ರಕಾಶನದ ವನಿತಾ ಚಿಂತನ ಮಾಲೆಯ ಮೂರು ಕೃತಿಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

`ಪುರುಷ ಸಮಾಜ ಹೆಣ್ಣಿಗೂ ಒಂದು ವ್ಯಕ್ತಿತ್ವವಿದೆ ಎಂಬುದನ್ನು ಮನಗಂಡು ಗೌರವಿಸಬೇಕು. ಹೆಣ್ಣಿನ ಜೊತೆ ಯಾವುದೇ ಭಿನ್ನಾಪ್ರಾಯಗಳಿದ್ದರೂ ಒಟ್ಟಿಗೆ ಬದುಕಲು ಉತ್ಸುಕರಾಗಿರಬೇಕು. ಹೆಣ್ಣಿಗೆ ಶಿಕ್ಷಣ ಅಗತ್ಯವಾಗಿದ್ದು ಉತ್ತಮ ಶಿಕ್ಷಣ ಸಿಕ್ಕಿದಾಗ ಮಾತ್ರ ಉತ್ತಮ ಸಮಾಜ ನಿರ್ಮಾಣವಾಗಬಹುದು~ ಎಂದರು.

ಇಂದು ಬಿಡುಗಡೆಯಾದ ನಾಗಮಣಿ ಎಸ್.ರಾವ್ ಬರೆದ `ಧೀಮತಿಯರು~ ಮತ್ತು `ಸ್ತ್ರೀಪಥ~ ಕೃತಿಗಳು ಎಲ್ಲರೂ ಓದಬಹುದಾದ ಉತ್ತಮ ಕೃತಿಗಳಾಗಿವೆ~ ಎಂದು ಹೇಳಿದರು.ಡಾ.ಮಂಗಳಾ ಪ್ರಿಯದರ್ಶಿನಿ ಮಾತನಾಡಿ, `ನಾಗಮಣಿ ಎಸ್.ರಾವ್ ಅವರ `ಸ್ತ್ರೀಪಥ~ ಕೃತಿಯಲ್ಲಿ ಹೆಣ್ಣು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಅವಳಿಗೆ ಅವಕಾಶದ ಕೊರತೆ ಬಗ್ಗೆ ಪ್ರಸ್ತಾಪಿಸಿದ್ದಾರೆ ಎಂದು ಹೇಳಿ ಕೃತಿಯ ಮಹತ್ವವನ್ನು ವಿವರಿಸಿದರು.

ಲೇಖಕಿ ನಾಗಮಣಿ .ಎಸ್.ರಾವ್ ಮಾತನಾಡಿ, ತಮ್ಮ ಕೃತಿಗಳಲ್ಲಿ ಮಹಿಳೆಯರ ಕೊಡುಗೆ ಮತ್ತು ನಾಡಿಗಾಗಿ ಸೇವೆ ಸಲ್ಲಿಸಿದವರ ಬಗ್ಗೆ ಬರೆದಿರುವುದಾಗಿ ತಿಳಿಸಿದರು.ಡಾ.ಜ್ಯೋತ್ಸ್ನಾ ಕೃಷ್ಣಾನಂದ ಕಾಮತರು ಕೊಂಕಣಿಯಲ್ಲಿ ಬರೆದ `ಕಮಲಾದೇವಿ ಚಟ್ಟೋಪಾಧ್ಯಾಯ~ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ ಡಾ.ಗೀತಾ ಶೆಣೈ ಅವರು ಮಾತನಾಡಿ, ಮಾಜಿ ರಾಷ್ಟ್ರಪತಿ ಆರ್.ವೆಂಕಟರಾಮನ್ ಅವರು ಕಮಲಾದೇವಿಯವರು ಇನ್ನಿಲ್ಲ ಎಂದು ಹೇಳಲು ನನ್ನಿಂದ ಅಸಾಧ್ಯ, ಕುಂಬಾರರ ಚರಕಗಳಲ್ಲಿ, ನೇಕಾರರ ರಾಟೆಯಲ್ಲಿ, ಕರಕುಶಲ ವಸ್ತುಗಳಲ್ಲಿ ಅವರು ಜೀವಂತವಾಗಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಎಚ್.ಎಸ್. ಪಾರ್ವತಿ, ಶಶಿ ದೇಶಪಾಂಡೆ, ಸರೋಜ ನಾರಾಯಣ, ಡಾ.ವಿಜಯ, ನಾಗಮಣಿ ಎಸ್ ರಾವ್, ಜಿ.ವಿ.ಜಯಾ ರಾಜಶೇ ಖರ ಅವನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ಡಾ.ಜ್ಯೋತ್ಸ್ನಾ ಕೃಷ್ಣಾನಂದ ಕಾಮತ್, ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ವಸುಂಧರಾ ಭೂಪತಿ ಮತ್ತು ನವಕರ್ನಾಟ ಪ್ರಕಾಶನದ ವ್ಯವಸ್ಥಾಪಕ ನಿರ್ದೇಶಕ ಆರ್.ಎಸ್.ರಾಜಾರಾಮ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.