ಬೆಂಗಳೂರು: ಅಲ್ಲಿ ಬಿಬಿಎಂಪಿ ಕೇಂದ್ರ ಕಚೇರಿ ಇತ್ತು. ಲಾಲ್ಬಾಗ್ ಇತ್ತು. ವಿಜಾಪುರದ ಗೋಲ್ ಗುಂಬಜ್, ಹಂಪಿಯ ಕಲ್ಲಿನ ದೇವಾಲಯ ಸಹ ಜತೆಗಿದ್ದವು. ಅವುಗಳ ಮಧ್ಯೆ ಕೋಲೆ ಬಸವ ಹೆಜ್ಜೆ ಹಾಕುತ್ತಿತ್ತು.

ಬಿಬಿಎಂಪಿಯಲ್ಲಿ ಮೌಲ್ಯಮಾಪಕರಾಗಿ ಸೇವೆ ಸಲ್ಲಿಸುತ್ತಿರುವ ರಾಜಕುಮಾರ್ ಬಿ. ಭಾರಸಿಂಗಿ ಅವರ ಕಲಾಕೃತಿ ಪ್ರದರ್ಶನದಲ್ಲಿ ಕಂಡುಬಂದ ನೋಟಗಳು ಇವು. ಕರ್ನಾಟಕ ಲಲಿತಾ ಕಲಾ ಅಕಾಡೆಮಿ ಅಧ್ಯಕ್ಷ ಎಂ.ಎಸ್.ಮೂರ್ತಿ ಪ್ರದರ್ಶನಕ್ಕೆ ಚಾಲನೆ ನೀಡಿದರು.

ಅಕ್ರಾಲಿಕ್, ಕಾಂಪೋಜಿಷನ್, ಜಲವರ್ಣಗಳಲ್ಲಿ ರಚಿಸಿರುವ ಚಿತ್ರಗಳು ಇಲ್ಲಿವೆ. ಕಾಂಪೋಜಿಷನ್ ಅಡಿಯಲ್ಲಿ ಬಾಲ್ಪೆನ್ ಮೂಲಕ ರಚಿಸಿರುವ ಹಸುಗಳ ವಿಭಿನ್ನ ಭಂಗಿಗಳು ಗಮನ ಸೆಳೆಯುತ್ತವೆ. ಜಲವರ್ಣದಲ್ಲಿ ಚಿತ್ರಿಸಿರುವ ಪ್ರಾಚೀನ ಸ್ಮಾರಕಗಳಾದ ಹಂಪಿ ದೇಗುಲ, ಗೋಲ್ ಗುಂಬಜ್, ಲಾಲ್ಬಾಗ್ ಗೋಪುರ, ಬಿಬಿಎಂಪಿ ಕೇಂದ್ರ ಕಚೇರಿ ಚಿತ್ರಗಳು ಪ್ರದರ್ಶನದಲ್ಲಿವೆ. ಬಿಜೆಪಿ ಪಕ್ಷದ ನಗರ ಘಟಕದ ವಕ್ತಾರ ಎನ್.ಆರ್.ರಮೇಶ್ ಅವರು ಕೋಲೆ ಬಸವ ಕಲಾಕೃತಿಯನ್ನು ₹ 20 ಸಾವಿರ ಕೊಟ್ಟು ಖರೀದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.