ಬೆಂಗಳೂರು: ‘ಪ್ರಕೃತಿ ಕುರಿತ ಅದ್ಯಮ ಕುತೂಹಲದಷ್ಟೇ ಯಂತ್ರ ವಿಜ್ಞಾನದಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದ ಸಾಹಿತಿ ಪೂರ್ಣಚಂದ್ರ ತೇಜಸ್ವಿ ಅವರು ಬಹುತೇಕ ಬರಹಗಾರರಿಗಿಂತ ಭಿನ್ನವಾಗಿ ಯೋಚಿಸಿ, ಅದರಂತೆಯೇ ಬದುಕಿದ್ದರು’ ಎಂದು ವಿಮರ್ಶಕ ಡಾ.ಸಿ.ಎನ್.ರಾಮಚಂದ್ರನ್ ಅಭಿಪ್ರಾಯಪಟ್ಟರು.

ಸಪ್ನ ಬುಕ್ ಹೌಸ್ ನಗರದಲ್ಲಿ ಶನಿವಾರ ಆಯೋಜಿಸಿದ್ದ ಸಮಾರಂಭದಲ್ಲಿ ಬುಕ್ ಹೌಸ್‌ನ ಕನ್ನಡ ವಿಭಾಗದ ಮುಖ್ಯಸ್ಥ ಆರ್.ದೊಡ್ಡೆಗೌಡ ಅವರು ಸಂಪಾದಿಸಿದ ‘ತೇಜಸ್ವಿಯನ್ನು ಹುಡುಕುತ್ತಾ...’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಮುಖ್ಯಾಂಶಗಳು

*ಬಿಡುಗಡೆಯಾದ ಪುಸ್ತಕ: ತೇಜಸ್ವಿಯನ್ನು ಹುಡುಕುತ್ತಾ...
* ಬೆಲೆ: ₨250

‘ತಂದೆ ಕುವೆಂಪು ಅವರಿಗಿಂತ ಭಿನ್ನವಾದ ದಾರಿಯಲ್ಲಿ ಬದುಕಿದರೂ ಅವರಂತೆಯೇ ಸಾಹಿತ್ಯಕ್ಕೆ ತಮ್ಮನ್ನು ಸಣ್ಣ ವಯಸ್ಸಿನಲ್ಲಿಯೇ ಅರ್ಪಿಸಿಕೊಂಡ ತೇಜಸ್ವಿ ಅವರು ಗಾಂಭಿರ್ಯ ಮತ್ತು ವಿನೋದ ಎರಡನ್ನು ಒಳಗೊಂಡ ಶೈಲಿಯನ್ನು ರೂಢಿಸಿಕೊಂಡಿದ್ದರು’ ಎಂದು ತಿಳಿಸಿದರು.

*‘ಬಹುಮುಖ ಪ್ರತಿಭೆಯಾಗಿದ್ದ ತೇಜಸ್ವಿ ಅವರಲ್ಲಿ ಅಗಾಧ ವಿಸ್ಮಯಗಳ ಹುಡುಕಾಟದ ಗುಣವಿತ್ತು. 1973ರಲ್ಲಿ ನವ್ಯ ಸಾಹಿತ್ಯದಿಂದ ಬಿಡಿಸಿಕೊಂಡು ವೈಜ್ಞಾನಿಕ ಬರಹಗಳತ್ತ ಒಲವು ತೋರಿದ ಅವರು ಸಮಾಜಮುಖಿ ಚಿಂತನೆಯಲ್ಲಿ ತೊಡಗಿಕೊಂಡರು. ಮಲೆನಾಡಿನ ಸೌಂದರ್ಯದೊಂದಿಗೆ ಅಲ್ಲಿನ ಸಮಸ್ಯೆಗಳನ್ನು ತಮ್ಮ ಕೃತಿಗಳ ಮೂಲಕ ತೆರೆದಿಟ್ಟರು’
ಡಾ.ದೇ.ಜವರೇಗೌಡ, ಸಾಹಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.