ಬೆಂಗಳೂರು: ಮೆಟ್ರೊ ರೈಲು ಕಾಮಗಾರಿಗಾಗಿ ಕಬ್ಬನ್ ರಸ್ತೆಯಲ್ಲಿ ವಾಹನಗಳ ಸಂಚಾರವನ್ನು ಮೂರು ವರ್ಷಗಳ ಕಾಲ ನಿರ್ಬಂಧಿಸಿರುವುದರಿಂದ ಬಿಎಂಟಿಸಿ ಬಸ್ಗಳ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಲಿದೆ.

ಶಿವಾಜಿನಗರದಿಂದ ಎಚ್ಎಎಲ್, ಮಾರತ್ಹಳ್ಳಿ, ಎಲೆಕ್ಟ್ರಾನಿಕ್ಸ್ ಸಿಟಿ, ಸರ್ಜಾಪುರ, ಬೆಳ್ಳಂದೂರು, ಬನ್ನೇರುಘಟ್ಟ, ಜಯನಗರ ಪ್ರದೇಶಗಳಿಗೆ ಹೊರಡುವ ಬಸ್ಗಳು ಸಾಕಷ್ಟು ಸುತ್ತು ಹಾಕಿಕೊಂಡು ಹೋಗುವ ಅನಿವಾರ್ಯತೆ ಎದುರಾಗಿದೆ.

‘ಕಬ್ಬನ್ ರಸ್ತೆಯನ್ನು ಮುಚ್ಚಿದ ನಂತರ ಬಸ್ಗಳು ವಿಧಾನಸೌಧ ರಸ್ತೆಯ ಮೂಲಕ ಹಡ್ಸನ್ ವೃತ್ತ ಬಳಸಿಕೊಂಡು ಸಂಚರಿಸಬೇಕಾಗುತ್ತದೆ. ಇದರಿಂದ ಪ್ರಸ್ತುತ ಮಾರ್ಗದಲ್ಲಿ ಸಂಚರಿಸುತ್ತಿರುವ ಪ್ರಯಾಣಿಕರಿಗೆ ಬಸ್ ಸೇವೆ ತಪ್ಪಿಹೋಗಲಿದೆ’ ಎಂದು ಬಿಎಂಟಿಸಿ ಸಹಾಯಕ ಸಂಚಾರ ನಿರೀಕ್ಷಕ ಎಚ್.ಸಿ.ರಾಜಶೇಖರಯ್ಯ ಹೇಳಿದರು.

‘ಇನ್ನೊಂದು ಮಾರ್ಗವೆಂದರೆ, ಬೌರಿಂಗ್ ಆಸ್ಪತ್ರೆಯ ಮೂಲಕ ಬಸ್ಗಳನ್ನು ಓಡಿಸುವುದು. ಸದ್ಯಕ್ಕೆ ಈ ಮಾರ್ಗ ಏಕಮುಖ ಸಂಚಾರವಾಗಿದ್ದು, ಇದನ್ನು ದ್ವಿಮುಖ ಸಂಚಾರಕ್ಕೆ ಮುಕ್ತಗೊಳಿಸಿ ಬಸ್ಗಳ ಸಂಚಾರಕ್ಕೆ ಅನುವು ನೀಡಬಹುದಾಗಿದೆ’ ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.