ಬೆಂಗಳೂರು: ರೋಟರಿ ಫೌಂಡೇಶನ್ ವತಿಯಿಂದ `ಗುಂಪು ಅಧ್ಯಯನ ವಿನಿಮಯ~ (ಜಿಎಸ್ಇ) ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ರೊಟೇರಿಯನ್ ಗುರ್ಮಿತ್ ಸಿಂಗ್ ರಾಂಧವ ಹೇಳಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಜಾಗತಿಕ ರಂಗದಲ್ಲಿ ಪರಸ್ಪರ ತಿಳಿವಳಿಕೆ, ಸಹಕಾರ ಹಾಗೂ ಶಾಂತಿಯನ್ನು ನಿರ್ಮಿಸಲು ಸಾಂಸ್ಕೃತಿಕ ಮತ್ತು ವೃತ್ತಿಪರ-ವಿನಿಮಯ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ~ ಎಂದರು.

`ಈ ವರ್ಷದ `ಜಿಎಸ್ಇ~ ವಿನಿಮಯ ಕಾರ್ಯಕ್ರಮವು ರೋಟರಿ ಜಿಲ್ಲೆ 3190 ಮತ್ತು ಇಂಗ್ಲೆಂಡ್ ಕೆನಡಾ ರೋಟರಿ ಜಿಲ್ಲಾ ಸಂಸ್ಥೆಗಳ ನಡುವೆ ಆಗಲಿದೆ. ವಿನಿಮಯ ಭೇಟಿಯಲ್ಲಿ ಭಾಗವಹಿಸುವ ಅಭ್ಯರ್ಥಿಗಳು ಸುಮಾರು 25 ರಿಂದ 40 ವರ್ಷದೊಳಗಿನವರಾಗಿರಬೇಕು ಮತ್ತು ವೃತ್ತಿಯಲ್ಲಿ ನಿರತರಾದವರು ಅರ್ಜಿಸಲ್ಲಿಸಬೇಕು~ ಎಂದು ಹೇಳಿದರು.

`ಈ ಕಾರ್ಯಕ್ರಮದ ಅನ್ವಯ ತಂಡವು ಪರ ದೇಶದ ಸಂಸ್ಕೃತಿ ಮತ್ತು ಸಾಂಸ್ಥಿಕ ವ್ಯವಸ್ಥೆಗಳ ವಿಷಯದ ಕುರಿತು ಹೆಚ್ಚಿನ ಮಾಹಿತಿ ಗಳಿಸಿ, ಇಲ್ಲಿಯ ಆಚಾರ-ವಿಚಾರಗಳ, ವೈಯಕ್ತಿಕ ಹಾಗೂ ವೃತ್ತಿಪರತೆಗೆ ಸಂಬಂಧಿಸಿದಂತೆ ವಿಮರ್ಶಿಸಿ, ವಿವೇಚಿಸುವದರೊಂದಿಗೆ ವಿಚಾರ ವಿನಿಮಯಗಳನ್ನು ಮಾಡಲಾಗುವುದು~ ಎಂದರು.

`ಈ ವಿನಿಮಯದಲ್ಲಿ ಜರ್ಮನಿ, ಯುಎಸ್ಎ, ಬ್ರೆಜಿಲ್, ಕೆನಡಾ, ಆಸ್ಟ್ರೇಲಿಯಾ ಮುಂತಾದ ದೇಶಗಳಿಗೆ ನಾಲ್ಕು ವಾರಗಳ ಕಾಲ ಭೇಟಿ ನೀಡಲು ಅವಕಾಶ ಕಲ್ಪಿಸಲಾಗುವುದು~ ಎಂದು ಹೇಳಿದರು.

ಇದರಲ್ಲಿ ಭಾಗವಹಿಸಲು ಇಚ್ಛಿಸುವ ಅಭ್ಯರ್ಥಿಗಳು ಅರ್ಜಿಗಳ ಜತೆಗೆ 500 ರೂಪಾಯಿಯ ಶುಲ್ಕದೊಂದಿಗೆ ಜುಲೈ 25 ರೊಳಗೆ ಸಲ್ಲಿಸಬೇಕು. ಜುಲೈ 29 ರಂದು ಆಯ್ಕೆಯು ನಡೆಯಲಿದೆ. ವಿಳಾಸ: ರೊಟೇರಿಯನ್ ಗುರ್ಮಿತ್ ಸಿಂಗ್ ರಾಂಧವ, ಅಧ್ಯಕ್ಷ, ಜಿಎಸ್ಇ, ಎಚ್ಎಎಲ್, ಎರಡನೇ ಹಂತ, ಇಂದಿರಾನಗರ. ಮೊಬೈಲ್-98450 12303.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.