ಬೆಂಗಳೂರು: ಸ್ವಾತಂತ್ರ್ಯೋತ್ಸವ ದಿನಾಚರಣೆ ಪ್ರಯುಕ್ತ ಲಾಲ್ಬಾಗ್ನಲ್ಲಿ ಆಯೋಜಿಸಿರುವ ಫಲಪುಷ್ಪ ಪ್ರದರ್ಶನಕ್ಕೆ ಆಗಸ್ಟ್ 6ರಿಂದ 12ರವರೆಗೆ ಒಟ್ಟು 1.24 ಲಕ್ಷ ಜನರು ಭೇಟಿ ನೀಡಿದ್ದಾರೆ.

ತೋಟಗಾರಿಕೆ ಇಲಾಖೆ ಮತ್ತು ಮೈಸೂರು ಉದ್ಯಾನಕಲಾ ಸಂಘದ ಆಶ್ರಯದಲ್ಲಿ ಆಯೋಜಿಸಿರುವ ಫಲಪುಷ್ಪ ಪ್ರದರ್ಶನದಲ್ಲಿ ಈ ಬಾರಿಯ ವಿಶೇಷ ಸಂಸತ್ ಭವನದ ಪ್ರತಿಕೃತಿ. ಗಾಜಿನ ಮನೆಯಲ್ಲಿ 27 ಅಡಿ ಎತ್ತರ ಹಾಗೂ 38 ಅಡಿ ಸುತ್ತಳತೆಯ ‘ಸಂಸತ್ ಭವನ’ವನ್ನು ಕೆಂಪು, ಕಿತ್ತಳೆ, ಬಿಳಿ ಬಣ್ಣದ ನಾಲ್ಕು ಲಕ್ಷಕ್ಕೂ ಅಧಿಕ ಹೂವುಗಳಿಂದ ನಿರ್ಮಿಸಿದ್ದು, ನೋಡುಗರನ್ನು ಆಕರ್ಷಿಸುತ್ತಿದೆ.

‘ಕಳೆದ ವರ್ಷ ಬೆಂಗಳೂರು ಅರಮನೆ ಪ್ರತಿಕೃತಿಯನ್ನು ನಿರ್ಮಿಸಲಾಗಿತ್ತು. ಒಟ್ಟು 3.5 ಲಕ್ಷ ಜನರು ಭೇಟಿ ನೀಡಿದ್ದು, ₹ 1.80 ಕೋಟಿ ಹಣ ಸಂಗ್ರಹವಾಗಿತ್ತು. ಈ ವರ್ಷ 4 ಲಕ್ಷ ಜನರು ಭೇಟಿ ನೀಡುವ ನಿರೀಕ್ಷೆ ಇದೆ. ಕಳೆದ ಏಳು ದಿನಗಳಲ್ಲಿ 1.24 ಲಕ್ಷ ಜನರು ಭೇಟಿ ನೀಡಿದ್ದಾರೆ’ ಎಂದು ತೋಟಗಾರಿಕೆ ಜಂಟಿ ನಿರ್ದೇಶಕ ಡಾ.ಎಂ. ಜಗದೀಶ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಇನ್ನೂ ಮೂರು ದಿನಗಳ ಕಾಲ ಫಲಪುಷ್ಪ ಪ್ರದರ್ಶನ ನಡೆಯಲಿದೆ. ಶನಿವಾರ, ಭಾನುವಾರ, ಸೋಮವಾರ ರಜಾ ದಿನ ಆಗಿರುವುದರಿಂದ ಈ ಅವಧಿಯಲ್ಲಿ 2 ಲಕ್ಷಕ್ಕೂ ಹೆಚ್ಚಿನ ಜನರು ಭೇಟಿ ನೀಡುವ ನಿರೀಕ್ಷೆ ಇದೆ’ ಎಂದು ಹೇಳಿದರು.

‘ಟಿಕೆಟ್ ಹಾಗೂ ಪಾಸ್ ಪಡೆದು ಲಾಲ್ಬಾಗ್ಗೆ ಭೇಟಿ ನೀಡಿದವರ ಸಂಖ್ಯೆ 1.24 ಲಕ್ಷ. ಆದರೆ, ವಿವಿಧ ಇಲಾಖೆಗಳ ಅಧಿಕಾರಿಗಳು, ವಿದೇಶಿ ಪ್ರವಾಸಿಗರು, ಕಲಾವಿದರು, ಸ್ವಯಂಸೇವಕರು, ವಿಶೇಷ ಆಹ್ವಾನಿತರು ಹೀಗೆ ಪ್ರತಿದಿನ 3,000ಕ್ಕೂ ಅಧಿಕ ಜನರು ಲಾಲ್ಬಾಗ್ಗೆ ಉಚಿತವಾಗಿ ಭೇಟಿ ನೀಡುತ್ತಾರೆ. ಇವರನ್ನೂ ಸೇರಿಸಿಕೊಂಡರೆ ಲಾಲ್ಬಾಗ್ಗೆ ಭೇಟಿ ನೀಡಿದವರ ಸಂಖ್ಯೆ ಮತ್ತಷ್ಟು ಹೆಚ್ಚುತ್ತದೆ’ ಎಂದು ತೋಟಗಾರಿಕೆ ಇಲಾಖಾ ಉಪನಿರ್ದೇಶಕ ಚಂದ್ರಶೇಖರ್ ತಿಳಿಸಿದರು.

ಜೆ.ಪಿ.ನಗರ ಏಳನೇ ಹಂತದ ಗೌರವ ನಗರದಿಂದ ಬಂದಿದ್ದ ನಾಗಲಕ್ಷ್ಮಿ, ವೀಣಾ, ಸುಜಾತಾ, ಅನುಸೂಯ ಅವರು ‘ಸಂಸತ್ ಭವನ’ದ ಮುಂದೆ ನಿಂತು ಸೆಲ್ಫಿ ತೆಗೆದುಕೊಳ್ಳುತ್ತಿದ್ದರು. ‘ನಾವು ಕಳೆದ ಹತ್ತು ವರ್ಷಗಳಿಂದ ಬರುತ್ತಿದ್ದೇವೆ. ಇಲ್ಲಿ ಆಯೋಜಿಸುವ ಪ್ರತಿ ಫಲಪುಷ್ಪ ಪ್ರದರ್ಶನವೂ ವಿಶಿಷ್ಟವಾಗಿರುತ್ತದೆ. ನಮಗೆಲ್ಲ ಮನೆಯಲ್ಲಿದ್ದು ಬೇಸರವಾಗಿತ್ತು. ಇಲ್ಲಿಗೆ ಬಂದ ಮೇಲೆ ಮನಸ್ಸು ಉಲ್ಲಾಸಭರಿತವಾಯಿತು’ ಎಂದು ಅವರು ಸಂತಸ ವ್ಯಕ್ತಪಡಿಸಿದರು.

‘ವ್ಯಾಪಾರ ನಿರೀಕ್ಷಿತ ಮಟ್ಟದಲ್ಲಿಲ್ಲ’

ಲಾಲ್ಬಾಗ್ ಆವರಣದಲ್ಲಿ ನೂರಕ್ಕೂ ಹೆಚ್ಚು ಮಳಿಗೆಗಳನ್ನು ತೆರೆಯಲಾಗಿದೆ. ನರ್ಸರಿ, ಕೃಷಿ ಉಪಕರಣಗಳು, ಸಾವಯವ ಗೊಬ್ಬರದ ಮಳಿಗೆಗಳು, ಆಯುರ್ವೇದ ಔಷಧ ಮಳಿಗೆ, ಫ್ಯಾನ್ಸಿ ವಸ್ತುಗಳು, ಬಿದಿರಿನಿಂದ ತಯಾರಿಸಿದ ವಸ್ತುಗಳ ಮಳಿಗೆ, ಉತ್ತರ ಕರ್ನಾಟಕ, ಮಲೆನಾಡಿನ ಶೈಲಿಯ ವಿವಿಧ ಆಹಾರ ಮಳಿಗೆಗಳನ್ನು ಸ್ಥಾಪಿಸಲಾಗಿದೆ. ಆದರೆ, ಆಹಾರ ಮಳಿಗೆಗಳನ್ನು ಹೊರತುಪಡಿಸಿ ಉಳಿದ ಮಳಿಗೆಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ವ್ಯಾಪಾರ, ವಹಿವಾಟು ನಡೆದಿಲ್ಲ.

‘ಕಳೆದ ಎಂಟು ವರ್ಷಗಳಿಂದ ಫಲಪುಷ್ಪ ಪ್ರದರ್ಶನದಲ್ಲಿ ಮಳಿಗೆ ತೆರೆಯುತ್ತ ಬಂದಿದ್ದೇವೆ. ಈ ಬಾರಿ ಹೇಳಿಕೊಳ್ಳುವಂತಹ ವ್ಯಾಪಾರವಾಗಿಲ್ಲ. ಮುಂದಿನ ದಿನಗಳಲ್ಲಿ ಉತ್ತಮ ವ್ಯಾಪಾರ ಆಗಬಹುದು ಎನ್ನುವ ನಿರೀಕ್ಷೆಯಲ್ಲಿದ್ದೇವೆ. ಹತ್ತು ದಿನಗಳಿಗೆ ₹ 25 ಸಾವಿರ ಬಾಡಿಗೆ ನೀಡಿದ್ದೇವೆ. ಫಲಪುಷ್ಪ ಪ್ರದರ್ಶನ ಮುಗಿದ ಬಳಿಕ ₹ 5 ಸಾವಿರ ವಾಪಸ್ ನೀಡಲಿದ್ದಾರೆ’ ಎಂದು ‘ಚಿನ್ನಮ್ಮ ನರ್ಸರಿ’ಯ ಅಮರಾವತಿ ಹೇಳಿದರು.

‘ಸ್ವರ್ಣಭೂಮಿ’ ಹೆಸರಿನ ಸಾವಯವ ಗೊಬ್ಬರ ಮಾರಾಟ ಮಳಿಗೆಯ ಮಾಲೀಕ ವಿಕ್ರಂ ಅವರು, ‘ಈವರೆಗಿನ ವ್ಯಾಪಾರ ಸಮಾಧಾನಕರವಾಗಿದೆ. ಹತ್ತು ದಿನಗಳಲ್ಲಿ ₹ 1.50 ಲಕ್ಷ ಮೌಲ್ಯದ ಗೊಬ್ಬರವನ್ನು ಮಾರಾಟ ಮಾಡುವ ಗುರಿ ಇದೆ. ಈಗಾಗಲೇ ₹ 80 ಸಾವಿರ ಮೌಲ್ಯದ ಗೊಬ್ಬರ ಮಾರಾಟವಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.