ರಾಮನಗರ: ಜನರು ಕನಸನ್ನು ನನಸು ಮಾಡಿಕೊಳ್ಳಲು ಪ್ರಯತ್ನಿಸದಿದ್ದರೆ, ಕನಸು ಕಾಣುವುದರಲ್ಲಿಯೇ ಸಮಯ ವ್ಯರ್ಥವಾಗುತ್ತದೆ ಎಂದು ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದ ಕುಮಾರ ಚಂದ್ರಶೇಖರನಾಥ ಮಹಾಸ್ವಾಮಿ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಚಿಕ್ಕೇನಹಳ್ಳಿಯಲ್ಲಿ ಭಾನುವಾರ ಎಎಸ್ಬಿ ಟೌನ್ಶಿಪ್ ಮುಖ್ಯದ್ವಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ಯಾಂತ್ರೀಕೃತ ಬದುಕಿನಲ್ಲಿ ಮನುಷ್ಯನು ಮೌಲ್ಯಗಳ ಬದಲಾಗಿ ಹಣಕ್ಕೆ ಬೆಲೆ ಕೊಡುತ್ತಿದ್ದಾನೆ. ದುಡಿದ ಹಣದಲ್ಲಿ ಸ್ವಲ್ಪವನ್ನಾದರೂ ಸಮಾಜದ ಒಳಿತಿಗೆ ವಿನಿಯೋಗಿಸಬೇಕು ಎಂದರು.

ಚಿತ್ರ ನಟ ದರ್ಶನ್ ಮಾತನಾಡಿ, ಪ್ರತಿಯೊಬ್ಬರ ಜೀವನದಲ್ಲೂ ಏಳು ಬೀಳುಗಳಿರುತ್ತವೆ. ಅವೆಲ್ಲವನ್ನೂ ಸಮರ್ಥವಾಗಿ ನಿಭಾಯಿಸಿಕೊಂಡು ಹೋಗಬೇಕು. ಯಶಸ್ಸು ಸಿಕ್ಕಾಗ ಬೀಗದೆ, ಸೋಲು, ಗೆಲುವು ಎರಡನ್ನೂ ಸಮನಾಗಿ ತೆಗೆದುಕೊಳ್ಳಬೇಕು. ತಾಳ್ಮೆ, ಸಂಯಮ, ಶಿಸ್ತನ್ನು ರೂಢಿಸಿಕೊಂಡರೆ ಯಶಸ್ಸು ಗಳಿಸಲು ಸಾಧ್ಯ ಎಂದರು.

ಇದೇ ಸಂದರ್ಭದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ, ನೇತ್ರ ತಪಾಸಣಾ ಶಿಬಿರ ಮತ್ತು ವೆಂಕಿ ಸ್ಕೂಲ್ ಆಫ್ ಡ್ಯಾನ್ಸ್ ಅಂಡ್ ಮ್ಯೂಸಿಕ್ಸ್ ಶಾಲೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು.

ಬಂಡೆ ಮಠದ ಸಿದ್ದಲಿಂಗಸ್ವಾಮಿಗಳು, ಚಿತ್ರ ನಟ ಪ್ರೇಮ್, ವಿಜಯ್, ಯೋಗೀಶ್, ಶ್ರಿನಗರ ಕಿಟ್ಟಿ, ಕಂಠೀರವ ಸ್ಟೂಡಿಯೋ ಅಧ್ಯಕ್ಷ ಎಂ. ರುದ್ರೇಶ್, ಸಹನಾ ಕುಮಾರಿ, ಹಿರಿಯ ಕಲಾವಿದ ಲೋಹಿತಾಶ್ವ, ಕಿರುತೆರೆ ನಿರ್ದೇಶಕ ರವಿ ಕಿರಣ್, ನಿರ್ಮಾಪಕ ಮೋಹನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.