ಬೆಂಗಳೂರು: ಹಿಂಬದಿ ಸವಾರರು ಹೆಲ್ಮೆಟ್ ಧರಿಸದಿದ್ದರೆ ಜ.20ರಿಂದ ದಂಡ ವಿಧಿಸುವುದಾಗಿ ಸಂಚಾರ ಪೊಲೀಸರು ಹಾಗೂ ಸಾರಿಗೆ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. ಆದರೆ, ಮಕ್ಕಳ ತಲೆಗೆ ಹೊಂದುವಂಥ ಹೆಲ್ಮೆಟ್ಗಳು ಇನ್ನೂ ಮಾರುಕಟ್ಟೆಯಲ್ಲಿ ಸಿಗುತ್ತಿಲ್ಲ ಎಂಬ ದೂರು ಸಾರ್ವಜನಿಕರಿಂದ ಕೇಳಿ ಬಂದಿದೆ.

ಈ ಮಧ್ಯೆ ಕಳಪೆ ಹೆಲ್ಮೆಟ್ಗಳ ಮಾರಾಟದ ಭರಾಟೆಯೂ ಹೆಚ್ಚಾಗಿದೆ. ಹೆಲ್ಮೆಟ್ನ ಲಭ್ಯತೆ, ಗುಣಮಟ್ಟ ಮತ್ತು ಅದನ್ನು ಧರಿಸುವ ಬಗ್ಗೆ ಇರುವ ನಿಯಮಾವಳಿ ಕುರಿತ ವಿಶ್ಲೇಷಣೆ ಇಲ್ಲಿದೆ.

ನಿಯಮದಲ್ಲೇನಿದೆ?
ಭಾರತೀಯ ಮೋಟಾರು ವಾಹನ ಕಾಯ್ದೆ-1988ರ ಸೆಕ್ಷನ್ 129ರ ಪ್ರಕಾರ, ದ್ವಿಚ್ರಕ ವಾಹನಗಳ ಸವಾರರು ಕಡ್ಡಾಯವಾಗಿ ಐಎಸ್ಐ ಗುರುತಿನ ಹೆಲ್ಮೆಟ್ ಧರಿಸಬೇಕಾಗಿದೆ. ಅಂತೆಯೇ ಹೊಸ ನಿಯಮದ ಪ್ರಕಾರ, ಸವಾರರಷ್ಟೆ ಅಲ್ಲದೆ, ಹಿಂಬದಿ ಸವಾರರು ಕೂಡ ಹೆಲ್ಮೆಟ್ ಧರಿಸುವುದು ಕಡ್ಡಾಯವಾಗಿದೆ.

ಭಾರತೀಯ ಮಾನದಂಡ ಸಂಸ್ಥೆಯ (ಐಎಸ್ಐ) ಗುರುತಿರುವ ಹೆಲ್ಮೆಟ್ಗಳನ್ನೇ ಧರಿಸಬೇಕು. ಅಲ್ಲದೆ, ಹಿಂದೆ ಕುಳಿತು ಸವಾರಿ ಮಾಡುವ ಮಕ್ಕಳು ಸಹ ಇದಕ್ಕೆ ಹೊರತಲ್ಲ ಎಂಬುದು ನಿಯಮದಲ್ಲಿ ಸ್ಪಷ್ಟವಾಗಿದೆ.

ನಿಯಮ ಎಲ್ಲೆಲ್ಲಿ ಜಾರಿಯಲ್ಲಿದೆ?
ದೆಹಲಿ
ತಮಿಳುನಾಡು
ಕೇರಳ
ರಾಜಸ್ತಾನ
ಪಶ್ಚಿಮ ಬಂಗಾಳ

ದೋಷಗಳು
* ಯಾವುದೇ ಪರೀಕ್ಷೆಗೆ ಒಳಪಡದ ಈ ಹೆಲ್ಮೆಟ್ಗಳು ಐಎಸ್ಐ ಗುರುತು ಹೊಂದಿರುವುದಿಲ್ಲ.
* ತಲೆ, ಕಿವಿ, ಕೆನ್ನೆ ಹಾಗೂ ಗಲ್ಲವನ್ನು ಸಂಪೂರ್ಣವಾಗಿ ಮುಚ್ಚಿಕೊಳ್ಳುವುದಿಲ್ಲ.
* ಅಂಗಡಿಗಳ ಹೆಲ್ಮೆಟ್ಗಳಿಗೆ ಸಿಗುವಂತೆ ಯಾವುದೇ ಗ್ಯಾರಂಟಿ ಇರುವುದಿಲ್ಲ.
* ರಸ್ತೆಯಲ್ಲಿ ಸಾಗುವಾಗ ಗಾಳಿ, ಮುಖಕ್ಕೆ ರಾಚುವ ದೂಳು ಹಾಗೂ ಮಣ್ಣಿನ ಕಣದಿಂದ ರಕ್ಷಣೆ ಇರುವುದಿಲ್ಲ.
* ಬೈಕ್ನಿಂದ ಕೆಳಕ್ಕೆ ಬಿದ್ದಾಗ ಹೆಲ್ಮೆಟ್ ಒಡೆದು ಹೋಗಿ, ತಲೆಗೆ ಗಾಯವಾಗುವ ಸಾಧ್ಯತೆ ಹೆಚ್ಚಿರುತ್ತದೆ.

ಮಕ್ಕಳ ಹೆಲ್ಮೆಟ್ ಕೊರತೆ
ನಿಯಮ ಜಾರಿಯಾದ ಬೆನ್ನಲ್ಲೇ ಜನರು ಹೆಲ್ಮೆಟ್ಗಳ ಖರೀದಿಗೆ ಮುಗಿಬಿದ್ದಿರುವುದರಿಂದ, ಅಂಗಡಿಗಳಲ್ಲಿ ಹೆಲ್ಮೆಟ್ ಮಾರಾಟ ಶೇ 20ರಿಂದ ಶೇ 30ರಷ್ಟು ಹೆಚ್ಚಾಗಿದೆ. ಆದರೆ, ಮಕ್ಕಳ ಹೆಲ್ಮೆಟ್ಗಳು ಮಾತ್ರ ಬಹುತೇಕ ಅಂಗಡಿಗಳಲ್ಲಿ ದೊರೆಯುತ್ತಿಲ್ಲ.

ಕೊರತೆಗೆ ಕಾರಣ:
* ಮಕ್ಕಳ ಹೆಲ್ಮೆಟ್ಗಳಿಗೆ ದೇಶದಲ್ಲಿ ಬೇಡಿಕೆ ತೀರಾ ಕಡಿಮೆ
* ಉತ್ಪಾದನಾ ವೆಚ್ಚ ಹೆಚ್ಚು ತಗುಲುವುದರಿಂದ ತಯಾರಕರ ನಿರಾಸಕ್ತಿ
* ಹೆಲ್ಮೆಟ್ ಬೆಲೆ ಜಾಸ್ತಿ. ಆದರೆ ಕೊಳ್ಳುವವರ ಸಂಖ್ಯೆ ಕಮ್ಮಿ
* ವಾಹನ ಚಾಲನಾ ಪರವಾನಗಿ ಪಡೆಯಲು ಕನಿಷ್ಠ 18 ವರ್ಷವಾಗಿರಬೇಕು. ಹಾಗಾಗಿ ಕಂಪೆನಿಗಳು ಅದಕ್ಕಿಂತ ಕಡಿಮೆ ವಯಸ್ಸಿನವರ ಹೆಲ್ಮೆಟ್ ಉತ್ಪಾದನೆಗೆ ಮುಂದಾಗಿಲ್ಲ

ಲಗ್ಗೆ ಇಟ್ಟ ಛೋಟಾ ಭೀಮ್ ಹೆಲ್ಮೆಟ್ಗಳು
‘ನಿಯಮ ಜಾರಿಯಾದ ಮೇಲೆ ಮಕ್ಕಳ ಹೆಲ್ಮೆಟ್ಗಳಿಗೆ ಬೇಡಿಕೆ ಹೆಚ್ಚಾಗಿದೆ. ಸದ್ಯ ಮಾರುಕಟ್ಟೆಯಲ್ಲಿ ಮಕ್ಕಳನ್ನು ಆಕರ್ಷಿಸುವಂತಹ ಸ್ಪೈಡರ್ ಮ್ಯಾನ್, ಚೋಟಾ ಭೀಮ್ ಚಿತ್ರಗಳನ್ನು ಹೊಂದಿರುವ ಹೆಲ್ಮೆಟ್ಗಳು ಈಗಾಗಲೇ ಬಂದಿವೆ’ ಎಂದು ಮಲ್ಲೇಶ್ವರದ ಶ್ರೀ ಸಾಯಿ ಹೆಲ್ಮೆಟ್ ಸೆಂಟರ್ನ ಮಾಲೀಕ ಶಿವಕುಮಾರ್ ಹೇಳುತ್ತಾರೆ.

‘ಆದರೆ ಈ ಹೆಲ್ಮೆಟ್ಗಳಿಗೆ ಐಎಸ್ಐ ಮಾನ್ಯತೆ ಇಲ್ಲ. ಹಾಗಾಗಿ ನಾವು ಅವುಗಳನ್ನು ಮಾರುತ್ತಿಲ್ಲ. ಸದ್ಯ ಸ್ಟಡ್ಸ್ ಕಂಪೆನಿಯ ಎಲೈಟ್ 540 ಎಂ.ಎಂ ಗಾತ್ರದ ಹೆಲ್ಮೆಟ್ಗಳು ಮಕ್ಕಳು ಮತ್ತು ಮಹಿಳೆಯರಿಗೆ ಹೊಂದಿಕೆಯಾಗುತ್ತಿವೆ. ಒಂದು ವೇಳೆ ಚಿಕ್ಕ ಮಕ್ಕಳ ಹೆಲ್ಮೆಟ್ಗಳಿಗೆ ಹೆಚ್ಚು ಬೇಡಿಕೆ ಬಂದರೆ, ಡೀಲರ್ಗಳಿಂದ ತರಿಸಿ ಕೊಡುತ್ತೇವೆ’ ಎಂದು ಅವರು ತಿಳಿಸುತ್ತಾರೆ.

ಕಳಪೆ ಹೆಲ್ಮೆಟ್ಗಳ ಮಾರಾಟ
ನಿಯಮ ಜಾರಿಯದ ಬೆನ್ನಲ್ಲೇ ನಗರದ ರಸ್ತೆ ಬದಿಗಳಲ್ಲಿ ಕಳಪೆ ಗುಣಮಟ್ಟದ, ಐಎಸ್ಐ ಚಿಹ್ನೆ ಇಲ್ಲದ ಹೆಲ್ಮೆಟ್ಗಳ ಮಾರಾಟವೂ ಹೆಚ್ಚಾಗಿದೆ. ಅಂಗಡಿ ಮತ್ತು ರಸ್ತೆ ಬದಿ ಮಾರಾಟವಾಗುವ ಹೆಲ್ಮೆಟ್ಗಳ ಬೆಲೆಗಳಲ್ಲಿ ಅಜಗಜಾಂತರವಿದೆ. ಐಎಸ್ಐ ಚಿಹ್ನೆ ಹೊಂದಿದ ಹೆಲ್ಮೆಟ್ಗಳ ಗುಣಮಟ್ಟದ ಅರಿವಿಲ್ಲದ ಜನರು, ಕಡಿಮೆ ಬೆಲೆ ಹಾಗೂ ನಿಯಮ ಪಾಲನೆ ಮಾಡಲೇಬೇಕು ಎಂಬ ಕಾರಣಕ್ಕೆ ಕಳಪೆ ಗುಣಮಟ್ಟದ ಹೆಲ್ಮೆಟ್ಗಳ ಮೊರೆ ಹೋಗುತ್ತಿದ್ದಾರೆ.

ದಂಡ ವಸೂಲಿ ಹೇಗೆ?
ಮೊದಲ ಬಾರಿಗೆ ನಿಯಮ ಉಲ್ಲಂಘಿಸಿದರೆ ₹ 100 ಮತ್ತು ಎರಡನೇ ಬಾರಿಗೆ ₹ 200 ದಂಡ ವಿಧಿಸಲಾಗುವುದು. ಎರಡಕ್ಕಿಂತ ಹೆಚ್ಚು ಬಾರಿ ಉಲ್ಲಂಘಿಸಿದರೆ ಅಂತಹವರ ಚಾಲನಾ ಪರವಾನಗಿಯನ್ನು ಜಪ್ತಿ ಮಾಡಲಾಗುವುದು. ಬಳಿಕ ಸಾರಿಗೆ ಇಲಾಖೆಗೆ ಕಳುಹಿಸಿ ಅಮಾನತುಗೊಳಿಸುವಂತೆ ಶಿಫಾರಸು ಮಾಡಲಾಗುವುದು. ಹಿಂಬದಿ ಸವಾರ ಹೆಲ್ಮೆಟ್ ಧರಿಸದಿದ್ದರೆ, ಅದಕ್ಕೆ ಸವಾರನನ್ನೇ ಹೊಣೆಗಾರನನ್ನಾಗಿ ಮಾಡಿ ದಂಡ ವಿಧಿಸಲಾಗುವುದು ಎಂದು ಸಂಚಾರ ಪೊಲೀಸರು ಹೇಳುತ್ತಾರೆ.

ಮಾರಾಟಗಾರರಿಗಿಲ್ಲ ಕಡಿವಾಣ
ಐಎಸ್ಐ ಚಿಹ್ನೆ ಇಲ್ಲದ ಕಳಪೆ ಗುಣಮಟ್ಟದ ಹೆಲ್ಮೆಟ್ಗಳು ಎಲ್ಲೆಂದರಲ್ಲಿ ಮಾರಾಟವಾಗುತ್ತಿವೆ. ಆದರೆ, ಅದನ್ನು ತಡೆಯುವ ಜವಾಬ್ದಾರಿ ಯಾರದು ಎಂಬ ಗೊಂದಲ ಮುಂದುವರಿದಿದೆ. ಸಾರಿಗೆ ಇಲಾಖೆ ನಿಯಮ ರೂಪಿಸುವುದು ತಮ್ಮ ಜವಾಬ್ದಾರಿ ಎಂದರೆ, ನಿಯಮ ಉಲ್ಲಂಘನೆಯಾಗದಂತೆ ನೋಡಿಕೊಳ್ಳುವುದು ಮತ್ತು ಉಲ್ಲಂಘಿಸುವವರಿಗೆ ದಂಡ ವಿಧಿಸುವುದು ನಮ್ಮ ಹೊಣೆ ಎನ್ನುತ್ತಾರೆ ಸಂಚಾರ ಪೊಲೀಸರು.

ಹೆಚ್ಚು ಮಾರಾಟವಾಗುತ್ತಿರುವ ಹೆಲ್ಮೆಟ್ಗಳು
ಸ್ಟಡ್ಸ್, ವೆಗಾ, ಸ್ಟೀಲ್ ಬರ್ಡ್, ವೊಗಾ, ಆಕ್ಸರ್, ಸ್ಪೀಡ್ವೇವ್, ರ್ಯಾಂಗ್ಲರ್, ಏರೊಸ್ಟಾರ್

ಹೆಲ್ಮೆಟ್ಗಳ ಬಗೆಗಳು
* ಫುಲ್ಫೇಸ್ ಹೆಲ್ಮೆಟ್
* ಆಫ್ ರೋಡ್ ಅಥವಾ ಮೋಟಾರ್ ಕ್ರಾಸ್ ಹೆಲ್ಮೆಟ್
* ಮಾಡ್ಯೂಲರ್ ಅಥವಾ ಫ್ಲೀಪ್ ಅಫ್ ಹೆಲ್ಮೆಟ್
* ಓಪನ್ ಫೇಸ್ ಹೆಲ್ಮೆಟ್
* ಹಾಫ್ ಹೆಲ್ಮೆಟ್

ಸಾರ್ವಜನಿಕರು ಏನಂತಾರೆ...
ಮಕ್ಕಳಿಗೆ ಸರಿಹೊಂದುವ ಹೆಲ್ಮೆಟ್ಗಳು ಅಂಗಡಿಗಳಲ್ಲಿ ಸಿಗುತ್ತಿಲ್ಲ. ಹೆಲ್ಮೆಟ್ಗಳ ಬೆಲೆ ಸಹ ದುಬಾರಿಯಾಗಿದೆ. ಬೈಕ್ಗಳಲ್ಲಿ ಎರಡು ಹೆಲ್ಮೆಟ್ಗಳನ್ನು ಇಡಲೂ ಆಗುತ್ತಿಲ್ಲ.
– ಲತಾ, ಮಹಾಲಕ್ಷ್ಮಿ ಲೇಔಟ್

ಹೆಲ್ಮೆಟ್ ಕಡ್ಡಾಯ ಮಾಡಿದರೆ ಅಪಘಾತ ಕಡಿಮೆಯಾಗದು. ಬದಲಿಗೆ ಉತ್ತಮ ಗುಣಮಟ್ಟದ ರಸ್ತೆಗಳನ್ನು ನಿರ್ಮಾಣ ಮಾಡಬೇಕು
– ವಿಘ್ನೇಶ್, ಬಸವನಗುಡಿ

ಐಎಸ್ಐ ಗುರುತಿನ ಹೆಲ್ಮೆಟ್ಗಳನ್ನೇ ಧರಿಸಬೇಕು ಎಂದು ನಿಯಮದಲ್ಲಿ ಸ್ಪಷ್ಟವಾಗಿದೆ. ಗುಣಮಟ್ಟದ ಈ ಹೆಲ್ಮೆಟ್ಗಳಲ್ಲಿ ರಕ್ಷಣೆಗೆ ಮೊದಲ ಆದ್ಯತೆ ಇದೆ. ಜನರು ಅವುಗಳನ್ನೇ ಬಳಸಬೇಕು
– ಡಾ. ರಾಮೇಗೌಡ,
ಸಾರಿಗೆ ಇಲಾಖೆ ಆಯುಕ್ತ

ಸವಾರರು ಮತ್ತು ಹಿಂಬದಿ ಸವಾರರು ಐಎಸ್ಐ ಗುರುತು ಇಲ್ಲದ ಹೆಲ್ಮೆಟ್ ಧರಿಸಿದ್ದು ಕಂಡುಬಂದರೆ, ಅದನ್ನು ಹೆಲ್ಮೆಟ್ ರಹಿತ ಪ್ರಯಾಣ ಎಂದು ಪರಿಗಣಿಸಿ ದಂಡ ವಿಧಿಸಲಾಗುವುದು
– ಡಾ.ಎಂ.ಎ. ಸಲೀಂ,
ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.