ಬೆಂಗಳೂರು: ಕೆಂಗೇರಿ ಮೇಲ್ಸೇತುವೆ ಸಮೀಪದ ಶ್ರೀ ಜಗದ್ಗುರು ರೇಣುಕಾಚಾರ್ಯ ವಿದ್ಯಾಲಯ (ಎಸ್ಜೆಆರ್ಸಿ) ಶಾಲೆಗೆ ಶುಕ್ರವಾರ ಮಧ್ಯಾಹ್ನ ಮಹಿಳೆಯೊಬ್ಬರಿಂದ ಬಂದ ಹುಸಿ ಬಾಂಬ್ ಕರೆ ಕೆಲ ಆತಂಕದ ವಾತಾವರಣ ನಿರ್ಮಿಸಿತು.

ಮಧ್ಯಾಹ್ನ 11.45ರ ಸುಮಾರಿಗೆ ಮಹಿಳೆಯೊಬ್ಬರು ಶಾಲೆಯ ಮುಖ್ಯಸ್ಥೆ ವನಮಾಲ ಎಂಬುವರ ಕಚೇರಿಗೆ ಕರೆ ಮಾಡಿ, ಶಾಲೆಯಲ್ಲಿ ಬಾಂಬ್ ಇರುವುದಾಗಿ ಹೇಳಿದ್ದಾರೆ. ಇದರಿಂದ ಗಾಬರಿಗೊಂಡ ಮನಮಾಲ ಅವರು ಕೂಡಲೇ ಮಕ್ಕಳನ್ನು ಹೊರಗೆ ಕಳುಹಿಸಿ, ಕೆಂಗೇರಿ ಠಾಣೆಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.

`ಮಧ್ಯಾಹ್ನ 12.10ರ ಸುಮಾರಿಗೆ ಶಾಲೆಯ ಮುಖ್ಯಸ್ಥರು ಠಾಣೆಗೆ ಕರೆ ಮಾಡಿ ವಿಷಯ ತಿಳಿಸಿದರು. ಕೂಡಲೇ, ಬಾಂಬ್ ಪತ್ತೆ ದಳ ಹಾಗೂ ಶ್ವಾನ ದಳದ ಸಿಬ್ಬಂದಿಯೊಂದಿಗೆ ಶಾಲೆಗೆ ತೆರಳಿ ಸುಮಾರು ಒಂದು ತಾಸು ಪರಿಶೀಲನೆ ನಡೆಸಲಾಯಿತು.

ಬಳಿಕ ಇದೊಂದು ಹುಸಿ ಕರೆ ಎಂದು ಗೊತ್ತಾಯಿತು. ಆ ಮಹಿಳೆ ಕಾಯಿನ್ ಬಾಕ್ಸ್ನಿಂದ ಕರೆ ಮಾಡಿದ್ದು, ಎಲ್ಲಿಂದ ಕರೆ ಮಾಡಿದ್ದರು ಎಂಬ ಬಗ್ಗೆ ಪರಿಶೀಲನೆ ನಡೆಸುತ್ತಿದ್ದೇವೆ. ಈ ಸಂಬಂಧ ಅನಾಮಧೇಯ ಕರೆಯಿಂದ ಬೆದರಿಕೆ ಹಾಕಿದ (ಐಪಿಸಿ 507) ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ' ಎಂದು ಕೆಂಗೇರಿ ಪೊಲೀಸರು ಮಾಹಿತಿ ನೀಡಿದರು.

`ಶಾಲೆಯಲ್ಲಿ ಸುಮಾರು 95 ಮಕ್ಕಳಿದ್ದರು. ಬೆದರಿಕೆ ಕರೆ ಬಂದ ಹಿನ್ನೆಲೆಯಲ್ಲಿ ತರಗತಿಯನ್ನು ರದ್ದುಗೊಳಿಸಿ ಮಕ್ಕಳನ್ನು ಮನೆಗೆ ಕಳುಹಿಸಲಾಯಿತು. ಅಲ್ಲದೇ, ಕೆಂಗೇರಿ 80 ಅಡಿ ರಸ್ತೆಯಲ್ಲಿರುವ ಎಸ್ಜೆಆರ್ಸಿ ಶಾಲೆಗೂ ಮಧ್ಯಾಹ್ನದ ನಂತರ ರಜೆ ಘೋಷಿಸಲಾಯಿತು' ಎಂದು ವನಮಾಲ ತಿಳಿಸಿದರು.

ಯುವಕ ಸಾವು: ಬಾಗಲೂರು ಕಣ್ಣೂರು ಮುಖ್ಯರಸ್ತೆಯ ತವಕಲ್ ಮಸೀದಿ ಸಮೀಪ ಗುರುವಾರ ಬೈಕ್ ಮತ್ತು ಕ್ಯಾಂಟರ್ ನಡುವೆ ಸಂಭವಿಸಿದ ಅಪಘಾತದಲ್ಲಿ ಮಹಮದ್ ಖುದ್ದುಸ್ (20) ಎಂಬುವರು ಸಾವನ್ನಪ್ಪಿದ್ದಾರೆ.

ಹೊಸೂರು ಬಂಡೆ ನಿವಾಸಿಯಾದ ಖುದ್ದುಸ್, ಮಹಮ್ಮದ್ ಯೂಸಫ್ ಎಂಬುವರ ಮಗ. ವೆಲ್ಡರ್ ಕೆಲಸ ಮಾಡುತ್ತಿದ್ದ ಖುದ್ದುಸ್, ಕೆಲಸ ಮುಗಿಸಿಕೊಂಡು ಊಟ ಮಾಡಲು ಮಧ್ಯಾಹ್ನ 3.30ರ ಸುಮಾರಿಗೆ ಬೈಕ್ನಲ್ಲಿ ಮನೆಗೆ ಹೋಗುತ್ತಿದ್ದರು. ಈ ವೇಳೆ ಹಿಂದಿನಿಂದ ಬಂದ ಕ್ಯಾಂಟರ್ (ಕೆಎ 28 ಎ 1904) ಬೈಕ್ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಕೆಳಗೆ ಬಿದ್ದ ಅವರ ಮೇಲೆ ಕ್ಯಾಂಟರ್ನ ಚಕ್ರ ಹರಿದ ಪರಿಣಾಮ, ಖುದ್ದುಸ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ನಂತರ ಚಾಲಕ ವಾಹನ ಬಿಟ್ಟು ಪರಾರಿಯಾಗಿದ್ದಾನೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಚಿಕ್ಕಜಾಲ ಪೊಲೀಸರು ಮಾಹಿತಿ ನೀಡಿದರು. ಗುರುತು ಪತ್ತೆ: ವಿಜಯನಗರ ಸಮೀಪದ ಹೊಸಹಳ್ಳಿ ಕಾಲೊನಿಯಲ್ಲಿ ಬುಧವಾರ ರಾತ್ರಿ ದುಷ್ಕರ್ಮಿಗಳಿಂದ ಹಲ್ಲೆಗೊಳಗಾಗಿ ಕೊಲೆಯಾದ ವ್ಯಕ್ತಿಯನ್ನು ರಘು ಅಲಿಯಾಸ್ ಮೆಂಟಲ್ ರಘು (30) ಎಂದು ಗುರುತಿಸಲಾಗಿದೆ.

ರಘು ವಿರುದ್ಧ ಕೊಲೆ, ಕೊಲೆ ಯತ್ನ ಸೇರಿದಂತೆ ವಿವಿಧ ಠಾಣೆಗಳಲ್ಲಿ 10ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದವು. ಬುಧವಾರ ರಾತ್ರಿ 8 ಗಂಟೆ ಸುಮಾರಿಗೆ ನಾಲ್ಕೈದು ಮಂದಿ ದುಷ್ಕರ್ಮಿಗಳು, ಆತನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದರು. ತೀವ್ರ ಗಾಯಗೊಂಡಿದ್ದ ರಘು, ತಡರಾತ್ರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.