ಬೆಂಗಳೂರು: ‘ಅಂಗವಿಕಲರಿಗಾಗಿ ಸರ್ಕಾರವು ರೂಪಿಸಿರುವ ಯೋಜನೆ ಗಳು ಪೂರ್ಣ ಪ್ರಮಾಣದಲ್ಲಿ ಅವರನ್ನು ತಲುಪುತ್ತಿಲ್ಲ’ ಎಂದು ಅಂಗವಿಕಲ ಹಾಗೂ ಹಿರಿಯ ನಾಗರಿಕ ಸಬಲೀಕರಣ ಇಲಾಖೆಯ ನಿರ್ದೇಶಕ ಜಯವಿಭವ ಸ್ವಾಮಿ ಹೇಳಿದರು.

ನಗರದ ಕೆಎಎಸ್ ಅಧಿಕಾರಿಗಳ ಸಂಘದಲ್ಲಿ ಬುಧವಾರ ನಡೆದ ‘ಅಂಗವಿಕಲರ ಪುನರ್ವಸತಿ ಯೋಜನೆಗಳ ಕುರಿತಾಗಿ ಅರಿವು ಮೂಡಿಸುವ ತರಬೇತಿ ಕಾರ್ಯಾಗಾರ’ ಉದ್ಘಾಟಿಸಿ ಮಾತನಾಡಿದರು. ‘ಅಂಗವಿಕಲರನ್ನು ಮದುವೆ ಯಾಗುವ ಸಾಮಾನ್ಯ ವ್ಯಕ್ತಿಗೆ ₨ 50 ಸಾವಿರ ನೀಡುವ ಯೋಜನೆ ಜಾರಿ ಯಾಗಿ ವರ್ಷವಾಗಿದೆ. ಆದರೆ, ಯೋಜನೆಯು ನಿರೀಕ್ಷಿತ ರೀತಿಯಲ್ಲಿ ಫಲಾನುಭವಿಗಳನ್ನು ತಲುಪುತ್ತಿಲ್ಲ. ಈ ಯೋಜನೆಗಾಗಿ ಇಲ್ಲಿಯವರೆಗೆ ಕೇವಲ 79 ಅರ್ಜಿಗಳಷ್ಟೇ ಬಂದಿವೆ’ ಎಂದರು.

‘ಅಂಧ ಮಹಿಳೆಯರ ಹೆರಿಗೆ ಬಳಿಕ ಮಗುವಿಗೆ ಎರಡು ವರ್ಷ ತುಂಬುವವ ರೆಗೂ ಮಾಸಿಕ ₨ 2 ಸಾವಿರ ಸಹಾಯ ಧನ ನೀಡುವ ಯೋಜನೆ ಜಾರಿಯಲ್ಲಿದೆ. ಇಬ್ಬರು ಮಕ್ಕಳವರೆಗೆ ಈ ಸೌಲಭ್ಯ ಪಡೆಯಬಹುದು. ₨ 2.5ಲಕ್ಷಕ್ಕಿಂತ ಕಡಿಮೆ ಆದಾಯ ಇರುವ ಶೇ.40ಕ್ಕಿಂತ ಹೆಚ್ಚು ದೃಷ್ಟಿ ಸಮಸ್ಯೆ ಇರುವವರೂ ಈ ನೆರವು ಪಡೆಯಬಹುದು’ ಎಂದರು.

‘ಕೆಲ ವರ್ಷಗಳ ಹಿಂದೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಯಲ್ಲಿದ್ದ ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸ್ವತಂತ್ರವಾಗಿ ಅಸ್ತಿತ್ವಕ್ಕೆ ಬಂದು 10 ವರ್ಷ ಕಳೆದಿದೆ. ಆದರೂ ಇಲಾ ಖೆಯಲ್ಲಿ 476 ಜನರ ಕೆಲಸವನ್ನು 136 ಮಂದಿ ಮಾಡುತ್ತಿದ್ದೇವೆ’ ಎಂದು ಹೇಳಿದರು.

‘ಶೇ 50 ಕ್ಕಿಂತ ಹೆಚ್ಚು ಗ್ರಾಮೀಣ ಭಾಗದ ಜನರಿಗೆ ಸರ್ಕಾರದ ಸೌಲಭ್ಯಗಳ ಮಾಹಿತಿ ಇಲ್ಲ. ಈ ಬಗ್ಗೆ ಅರಿವು ಮೂಡಿಸುವ ಕಾರ್ಯವೂ ತಳ ಮಟ್ಟದಿಂದ ಆಗಬೇಕು. ಅಂಗವಿಕಲರಿ ಗಷ್ಟೇ ಇತರ ಅಂಗವಿಕಲರ ಸಂಕಟ ಅರಿಯಲು ಸಾಧ್ಯ ಎಂಬ ಕಾರಣದಿಂದ ಕಲ್ಯಾಣಾಧಿಕಾರಿಗಳ ಹುದ್ದೆಗೆ ಅಂಗ ವಿಕಲರನ್ನೇ ನೇಮಿಸಲಾಗಿದೆ. ಫಲಾನುಭವಿಗಳ ಸಂಖ್ಯೆ ಹೆಚ್ಚಾದರೆ ಅದಕ್ಕೆ ಸಮನಾದ ನಿಧಿ ನೀಡುವ ಜವಾಬ್ದಾರಿ ಸರ್ಕಾರಕ್ಕಿದೆ. ಮುಂಬ ರುವ ಬಜೆಟ್ನಲ್ಲೂ ಇಲಾಖೆಗೆ ಉತ್ತಮ ನೆರವು ದೊರಕುವ ಬಗ್ಗೆ ವಿಶ್ವಾಸವಿದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.