ಬುಧವಾರ, ಆಗಸ್ಟ್ 17, 2022
23 °C
ಗುರುನಾನಕ ಶಿಕ್ಷಣ ಸಂಸ್ಥೆಯಿಂದ ಬಡವರಿಗೆ ನೆರವಿನ ಹಸ್ತ

ತಾಲ್ಲೂಕು ಆಡಳಿತಕ್ಕೆ 100 ಆಹಾರಧಾನ್ಯ ಕಿಟ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ಕೋವಿಡ್ ಕಾರಣ ಜಾರಿಗೊಳಿಸಲಾದ ಲಾಕ್‍ಡೌನ್‍ನಿಂದ ಸಂಕಷ್ಟಕ್ಕೊಳಗಾದ ಬಡವರಿಗೆ ವಿತರಿಸಲು ಇಲ್ಲಿಯ ಗುರುನಾನಕ ಶಿಕ್ಷಣ ಸಂಸ್ಥೆಯ ಅಂಗ ಸಂಸ್ಥೆಗಳು ತಾಲ್ಲೂಕು ಆಡಳಿತಕ್ಕೆ 100 ಆಹಾರಧಾನ್ಯ ಕಿಟ್‍ಗಳನ್ನು ನೀಡಿವೆ.

ನೆಹರೂ ಕ್ರೀಡಾಂಗಣ ಹತ್ತಿರದ ಗುರುನಾನಕ ಪಬ್ಲಿಕ್ ಸ್ಕೂಲ್, ಮೈಲೂರು ರಸ್ತೆಯ ಗುರುನಾನಕ ದೇವ ಎಂಜಿನಿಯರಿಂಗ್ ಕಾಲೇಜು, ಮನ್ನಳ್ಳಿ ರಸ್ತೆಯ ಗುರುನಾನಕ ಪಬ್ಲಿಕ್ ಸ್ಕೂಲ್, ಗುರುನಗರದ ಗುರುನಾನಕ ಪಬ್ಲಿಕ್ ಸ್ಕೂಲ್, ಜನವಾಡ ರಸ್ತೆಯ ಗುರುನಾನಕ ಪಬ್ಲಿಕ್ ಸ್ಕೂಲ್, ಮನ್ನಾಎಖ್ಖೆಳ್ಳಿಯ ಗುರುನಾನಕ ಪಬ್ಲಿಕ್ ಸ್ಕೂಲ್ ಹಾಗೂ ಗುರುನಾನಕ ಆಸ್ಪತ್ರೆ ವತಿಯಿಂದ ನಗರದಲ್ಲಿ ತಹಶೀಲ್ದಾರ್ ಗಂಗಾದೇವಿ ಎಚ್.ಸಿ. ಅವರಿಗೆ ಕಿಟ್‍ಗಳನ್ನು ಹಸ್ತಾಂತರಿಸಲಾಯಿತು.

ಗುರುನಾನಕ ಶಾಲೆಯ ಮಜರ್ ಹುಸೇನಿ ಮಾತನಾಡಿ, ಗುರುನಾನಕ ಶಿಕ್ಷಣ ಸಂಸ್ಥೆಯು ಆಹಾರಧಾನ್ಯ ಕಿಟ್‍ಗಳ ವಿತರಣೆ ಮೂಲಕ ಬಡವರಿಗೆ ಸಹಾಯಹಸ್ತ ಚಾಚಿದೆ ಎಂದು ಹೇಳಿದರು.

ಗುರುದ್ವಾರ ಪ್ರಬಂಧಕ ಕಮಿಟಿಯ ವತಿಯಿಂದ ಅಧ್ಯಕ್ಷ ಎಸ್. ಬಲಬೀರ್‌ಸಿಂಗ್ ಅವರ ನೇತೃತ್ವದಲ್ಲಿ ಕೋವಿಡ್ ಆರಂಭದಿಂದಲೂ ಮಾನವೀಯ ನೆಲೆಯಲ್ಲಿ ನಗರದ ಬ್ರಿಮ್ಸ್ ಆಸ್ಪತ್ರೆ ಹಾಗೂ ಓಲ್ಡ್‌ಸಿಟಿಯ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿತರು, ಅವರ ಸಂಬಂಧಿಕರು ಸೇರಿ ನಿತ್ಯ 300 ಜನರಿಗೆ ಊಟ ಹಾಗೂ ಉಪಾಹಾರ ವಿತರಿಸಲಾಗುತ್ತಿದೆ ಎಂದು ತಿಳಿಸಿದರು.

ಗುರುನಾನಕ ಶಾಲೆಯ ಸಿಬ್ಬಂದಿ ಪ್ರದೀಪ್ ರಾಗಾ, ಗುರುನಾನಕ ಎಂಜಿನಿಯರಿಂಗ್ ಕಾಲೇಜಿನ ಡಾ. ಮನೋಜಕುಮಾರ, ದೇವಜೀತ್‍ಸಿಂಗ್, ರಿಶಬ್ ಸಿಂಗ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು