ಬುಧವಾರ, ಜೂನ್ 16, 2021
26 °C
ವಿದ್ಯಾರ್ಥಿನಿಯರ ಅತ್ಯುತ್ತಮ ಸಾಧನೆ

ಬೀದರ್ ಜಿಲ್ಲೆಯ 26 ಶಾಲೆಗಳಿಗೆ ಶೇ 100ರಷ್ಟು ಫಲಿತಾಂಶ

ಚಂದ್ರಕಾಂತ ಮಸಾನಿ Updated:

ಅಕ್ಷರ ಗಾತ್ರ : | |

Prajavani

ಬೀದರ್‌: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಯ 26 ಶಾಲೆಗಳು ಶೇಕಡ ನೂರಕ್ಕೆ ನೂರರಷ್ಟು ಫಲಿತಾಂಶ ಪಡೆದುಕೊಂಡಿವೆ.

ಜಿಲ್ಲೆಯ 523 ಶಾಲೆಗಳಲ್ಲಿ ಮೂರು ಸರ್ಕಾರಿ, ಎರಡು ಅನುದಾನಿತ ಹಾಗೂ 21 ಅನುದಾನ ರಹಿತ ಶಾಲೆಗಳ ಎಲ್ಲ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 112 ಅನುದಾನ ರಹಿತ ಶಾಲೆಗಳು, 33 ಅನುದಾನಿತ ಶಾಲೆಗಳು ಹಾಗೂ 56 ಸರ್ಕಾರಿ ಪ್ರೌಢ ಶಾಲೆಗಳು ಶೇಕಡ 80ಕ್ಕೂ ಹೆಚ್ಚು ಫಲಿತಾಂಶ ಪಡೆದುಕೊಂಡಿವೆ.

49 ಅನುದಾನ ರಹಿತ ಶಾಲೆಗಳು, 37 ಅನುದಾನಿತ ಶಾಲೆಗಳು ಹಾಗೂ 78 ಸರ್ಕಾರಿ ಪ್ರೌಢ ಶಾಲೆಗಳು ಶೇಕಡ 60 ರಿಂದ 80 ರಷ್ಟು ಫಲಿತಾಂಶ ಪಡೆದುಕೊಂಡಿವೆ. ಅನುದಾನ ರಹಿತ ಪ್ರೌಢ ಶಾಲೆಗಳು ಉತ್ತಮ ಫಲಿತಾಂಶ ಪಡೆದಿವೆ. ಜಿಲ್ಲೆಯ ಮೂರು ಅನುದಾನ ರಹಿತ ಪ್ರೌಢ ಶಾಲೆಗಳ ಒಂದು ವಿದ್ಯಾರ್ಥಿಯೂ ಪಾಸಾಗಿಲ್ಲ.

ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದ 11,057 ವಿದ್ಯಾರ್ಥಿಗಳ ಪೈಕಿ 7,633 ಹಾಗೂ 10,965 ವಿದ್ಯಾರ್ಥಿನಿಯರ ಪೈಕಿ 8,163 ಮಂದಿ ಉತ್ತೀರ್ಣರಾಗಿದ್ದಾರೆ. ಕನ್ನಡ ಮಾಧ್ಯಮದ 6,828 ವಿದ್ಯಾರ್ಥಿಗಳ ಪೈಕಿ 4,769 ಹಾಗೂ 6,529 ವಿದ್ಯಾರ್ಥಿನಿಯರ ಪೈಕಿ 4,923 ಜನ ಉತ್ತೀರ್ಣರಾಗಿದ್ದಾರೆ. ಇಂಗ್ಲಿಷ್‌ ಮಾಧ್ಯಮದ 2,595 ವಿದ್ಯಾರ್ಥಿಗಳ ಪೈಕಿ 2,128 ಹಾಗೂ 1,670 ವಿದ್ಯಾರ್ಥಿನಿಯರ ಪೈಕಿ 1,491 ಮಂದಿ ಉತ್ತೀರ್ಣರಾಗಿದ್ದಾರೆ.

ಉರ್ದು ಮಾಧ್ಯಮದ 766 ವಿದ್ಯಾರ್ಥಿಗಳ ಪೈಕಿ 288 ಹಾಗೂ 1,752 ವಿದ್ಯಾರ್ಥಿನಿಯರ ಪೈಕಿ 1,096 ಜನ ಉತ್ತೀರ್ಣರಾಗಿದ್ದಾರೆ. ಹಿಂದಿ ಮಾಧ್ಯಮದ ನಾಲ್ವರು ವಿದ್ಯಾರ್ಥಿಗಳ ಪೈಕಿ ಒಬ್ಬ ವಿದ್ಯಾರ್ಥಿನಿ ಹಾಗೂ ವಿದ್ಯಾರ್ಥಿ ಪಾಸಾಗಿದ್ದಾರೆ. ಮರಾಠಿ ಮಾಧ್ಯಮದ 866 ವಿದ್ಯಾರ್ಥಿಗಳ ಪೈಕಿ 447 ಹಾಗೂ 1,012 ವಿದ್ಯಾರ್ಥಿನಿಯರ ಪೈಕಿ 650 ಮಂದಿ ಉತ್ತೀರ್ಣರಾಗಿದ್ದಾರೆ

ಬೀದರ್‌ ಜಿಲ್ಲೆಗೆ ಭಾಲ್ಕಿ ತಾಲ್ಲೂಕಿನ ಶ್ರೀ ಚನ್ನಬಸವೇಶ್ವರ ಗುರುಕುಲ ಪ್ರೌಢ ಶಾಲೆಯ ಅಪರಾಜಿತೇಶ್ವರಿ ಸೂರ್ಯಕಾಂತ (621ಅಂಕ), ಹುಮನಾಬಾದ್‌ನ ಶಾದಾನ್‌ ಪ್ರೌಢ ಶಾಲೆಯ ಮಹಮ್ಮದ್‌ ಸೂಫಿಯಾನಾ (620) ಹಾಗೂ ಔರಾದ್‌ನ ಆದರ್ಶ ಶಾಲೆಯ ವಿದ್ಯಾರ್ಥಿ ಅರುಣಾ ರಾಠೋಡ (619) ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.

ಜಿಲ್ಲೆಯ 39 ಸರ್ಕಾರಿ ಶಾಲೆಗಳು, 24 ಅನುದಾನಿತ ಶಾಲೆಗಳು ಹಾಗೂ 97 ಅನುದಾನ ರಹಿತ ಶಾಲೆಗಳು ಗ್ರೇಡ್‌ ‘ಎ’ ಪಡೆದುಕೊಂಡಿವೆ. 68 ಸರ್ಕಾರಿ ಶಾಲೆಗಳು, 39 ಅನುದಾನಿತ ಶಾಲೆಗಳು ಹಾಗೂ 55 ಅನುದಾನ ರಹಿತ ಶಾಲೆಗಳು ಗ್ರೇಡ್‌ ‘ಬಿ’ ಪಡೆದುಕೊಂಡಿವೆ. 78 ಸರ್ಕಾರಿ ಶಾಲೆಗಳು, 58 ಅನುದಾನಿತ ಶಾಲೆಗಳು ಹಾಗೂ 65 ಅನುದಾನ ರಹಿತ ಶಾಲೆಗಳು ಗ್ರೇಡ್‌ ‘ಸಿ’ ಪಡೆದಿವೆ.

ವಿವಿಧ ಶಾಲಾ ವಿಭಾಗ: ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ಭಾತಂಬ್ರಾದ ಸರ್ಕಾರಿ ಪ್ರೌಢ ಶಾಲೆಯ ಓವೈಸಿ ಅಹಮ್ಮದ್ (616),
ಬಸವಕಲ್ಯಾಣ ತಾಲ್ಲೂಕಿನ ರಾಜೋಳಾದ ಆದರ್ಶ ವಿದ್ಯಾಲಯದ ಸಾಗರ (615), ಔರಾದ್‌ನ ರಾಣಿ ಚೆನ್ನಮ್ಮ ರೆಸಿಡೆನ್ಸಿಯಲ್‌ ಸ್ಕೂಲ್‌ನ ಭುವನೇಶ್ವರಿ ಶಿವರಾಜ್ (615) ಟಾಪರ್‌ ಆಗಿ ಹೊರ ಹೊಮ್ಮಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು