ಸೋಮವಾರ, ಆಗಸ್ಟ್ 2, 2021
28 °C

ಕಸಾಯಿಖಾನೆಗೆ ಸಾಗಿಸುತ್ತಿದ್ದ 11 ಜಾನುವಾರು ರಕ್ಷಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಟಗುಪ್ಪ: ಸಮೀಪದ ಸಿಂಧನಕೇರಾ ಗ್ರಾಮದಿಂದ ಪಟ್ಟಣದ ಕಸಾಯಿಖಾನೆಗೆ ಅನಧಿಕೃತವಾಗಿ ಎರಡು ಲಾರಿಗಳಲ್ಲಿ ಸಾಗಿಸುತ್ತಿದ್ದ 11 ಜಾನುವಾರುಗಳನ್ನು ಪಟ್ಟಣ ಠಾಣೆಯ ಪೊಲೀಸರು ಶುಕ್ರವಾರ ರಾತ್ರಿ ವಶಕ್ಕೆ ಪಡೆದು ವಿಚಾರಣೆ ಮುಂದುವರೆಸಿದ್ದಾರೆ.

ಖಚಿತ ಮಾಹಿತಿ ಆಧಾರದಲ್ಲಿ ಪಿಎಸ್‌ಐ ಕಾಶಿನಾಥ್‌ ಹಾಗೂ ಸಿಬ್ಬಂದಿ ಜೊತೆಗೆ ರಾಜ್ಯ ಹೆದ್ದಾರಿ 75 ರ ಮೇಲೆ ಹಜರತ್‌ ದರ್ಗಾ ಎದುರುಗಡೆ ಜಾನುವಾರು ತುಂಬಿಕೊಂಡು
ಬರುತ್ತಿದ್ದ ಎರಡು ಲಾರಿಗಳನ್ನು ತಡೆದು ಒಳಗಿದ್ದ 4 ಎತ್ತು, 7 ಹೋರಿಗಳಿಗೆ ವಶಕ್ಕೆ ಪಡೆದು ಚಾಂಗಲೇರಾ ಗೋಶಾಲೆಗೆ ಕಳಿಸಿದ್ದಾರೆ.

ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೆಯಕ 2020 ಕಾಯ್ದೆ ಅಡಿ ಚಿಟಗುಪ್ಪ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.