ಸೋಮವಾರ, ಆಗಸ್ಟ್ 2, 2021
21 °C
ಬಸವಕಲ್ಯಾಣ ಸರ್ಕಾರಿ ಆಸ್ಪತ್ರೆ ಹೊರ ರೋಗಿಗಳ ವಿಭಾಗ ಬಂದ್

135 ಮಂದಿಗೆ ಕೋವಿಡ್ ಸೋಂಕು

ಚಂದ್ರಕಾಂತ ಮಸಾನಿ Updated:

ಅಕ್ಷರ ಗಾತ್ರ : | |

Prajavani

ಬೀದರ್: ಜಿಲ್ಲೆಯಲ್ಲಿ ಭಾನುವಾರ ಒಂದೇ ದಿನ 135 ಜನರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಕೋವಿಡ್ ವೈರಾಣು ಪೀಡಿತರ ಸಂಖ್ಯೆ 2,398ಕ್ಕೆ ತಲುಪಿದೆ.

ಜಿಲ್ಲೆಯಲ್ಲಿ 735 ಕೋವಿಡ್‌ ಪ್ರಕರಣಗಳು ಸಕ್ರೀಯವಾಗಿವೆ. ಬೀದರ್ ತಾಲ್ಲೂಕಿನಲ್ಲಿ 40 ಮಂದಿಗೆ ಸೋಂಕು ತಗುಲಿದೆ. ಹುಮನಾಬಾದ್ ತಾಲ್ಲೂಕಿನಲ್ಲಿ 27, ಭಾಲ್ಕಿ ತಾಲ್ಲೂಕಿನಲ್ಲಿ 30, ಔರಾದ್ ತಾಲ್ಲೂಕಿನಲ್ಲಿ 16, ಬಸವಕಲ್ಯಾಣ ತಾಲ್ಲೂಕಿನಲ್ಲಿ 21 ಜನರಿಗೆ ಹಾಗೂ ನೆರೆ ರಾಜ್ಯದ ಒಬ್ಬರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಒಟ್ಟು ಸೋಂಕಿತರಲ್ಲಿ ಮೂವರು ಬಾಲಕಿಯರು, ನಾಲ್ವರು ಬಾಲಕಿಯರು, 34 ಮಹಿಳೆಯರು ಹಾಗೂ 96 ಪುರುಷರು ಇದ್ದಾರೆ

ಕೋವಿಡ್ ಆಸ್ಪತ್ರೆಯಿಂದ 36 ಮಂದಿ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. ಈವರೆಗೆ 1,580 ಮಂದಿ ಬಿಡುಗಡೆ ಹೊಂದಿದ್ದಾರೆ.

ಬೀದರ್‌ನ ರಾಮನಗರದ 45 ವರ್ಷದ ಪುರುಷ, ಚೌಬಾರಾ ರಸ್ತೆಯ 25 ವರ್ಷದ ಪುರುಷ, ಪಿಟಿಎಸ್‌ ಶಾಲೆಯ 27 ವರ್ಷದ ಪುರುಷ, ರಾಮಪುರೆ ಕಾಲೊನಿಯ 35 ವರ್ಷದ ಪುರುಷ, ನಾವದಗೇರಿಯ 62 ವರ್ಷದ ಮಹಿಳೆ, ಝೀರಾ ಕನ್ವೆನ್ಶನ್‌ ಸೆಂಟರ್‌ನ 57 ವರ್ಷದ ಪುರುಷ, ಬಸವನಗರದ 43 ವರ್ಷದ ಪುರುಷ, ಹಳ್ಳದಕೇರಿಯ 32 ವರ್ಷದ ಪುರುಷನಿಗೆ ಸೋಂಕು ತಗುಲಿದೆ,

ಔರಾದ್‌ ತಾಲ್ಲೂಕಿನ ಮುಧೋಳ ಗ್ರಾಮದ 46, 18, 34 ವರ್ಷದ ಮಹಿಳೆ, 9 ವರ್ಷದ ಬಾಲಕ, ನಾಗೂರ ಗ್ರಾಮದ 31 ವರ್ಷದ ಪುರುಷನಿಗೆ ಸೋಕು ತಗಲಿದೆ. ಚಿಂತಾಕಿಯ 40, 32 ವರ್ಷದ ಪುರುಷ, ನಾಗೂರ ಗ್ರಾಮದ 31, 62 ವರ್ಷದ ಪುರುಷ, ದೇಗಲವಾಡಿಯ 33 ಪುರುಷ, ಕೌಠಾದ 40 ವರ್ಷದ ಮಹಿಳೆಗೆ ಸೋಕು ಬಂದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು