ಶನಿವಾರ, ಆಗಸ್ಟ್ 13, 2022
26 °C

₹ 62 ಲಕ್ಷ ಮೌಲ್ಯದ ಗಾಂಜಾ ನಾಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್‌: ಮಾದಕ ವಸ್ತುಗಳ ವಿಲೇವಾರಿ ಸಮಿತಿ ವತಿಯಿಂದ ಅಂತರರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆ ಅಂಗವಾಗಿ ವಿವಿಧ ಪ್ರಕರಣಗಳಲ್ಲಿ ವಶಪಡಿಸಿಕೊಳ್ಳಲಾಗಿದ್ದ ಒಟ್ಟು ₹ 62 ಲಕ್ಷ ಮೊತ್ತದ ಗಾಂಜಾ ಹಾಗೂ ಇತರೆ ಮಾದಕ ವಸ್ತುಗಳನ್ನು ಭಾನುವಾರ ನಾಶ ಪಡಿಸಲಾಯಿತು.

ನಗರದ ಹೊರವಲಯದಲ್ಲಿ ವಿವಿಧ ಪ್ರಕರಣಗಳಲ್ಲಿ ವಶಪಡಿಸಿಕೊಳ್ಳಲಾದ ಮಾದಕ ವಸ್ತಗಳನ್ನು ಸುಟ್ಟು ಹಾಕಲಾಯಿತು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಿ.ಕಿಶೋರಬಾಬು ನೇತೃತ್ವದಲ್ಲಿ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಮಹೇಶ ಮೇಘಣ್ಣವರ, ಬೀದರ್‌ ಡಿವೈಎಸ್‌ಪಿ ಕೆ.ಎಂ.ಸತೀಶ, ಭಾಲ್ಕಿ ಡಿವೈಎಸ್‌ಪಿ ಪೃಥ್ವಿಕ್‌ ಶಂಕರ, ಮಾಲಿನ್ಯ ನಿಯಂತ್ರಣ ಮಂಡಳಿ ಕ್ಷೇತ್ರ ಸಹಾಯಕ ಮಹೇಶ ಭೀಮರೆಡ್ಡಿ, ಡಿಇಒ ಧನರಾಜ ನಾರಾಯಣರಾವ, ಡಿಸಿಆರ್‌ಪಿ ಸಿಪಿಐ ಪುಲ್ಲಯ್ಯ ರಾಠೋಡ, ಪಿಎಸ್‌ಐ ರವಿಕುಮಾರ, ಮುಖ್ಯಪೇದೆ ಸುನೀಲ ಬಿಚಕುಂದೆ, ಗೋರಖನಾಥ ಸಮ್ಮುಖದಲ್ಲಿ ಗಾಂಜಾ ನಾಶಪಡಿಸಲಾಯಿತು.

ಜಿಲ್ಲೆಯ 11 ಠಾಣೆಯ ಪಿಎಸ್‌ಐ ಹಾಗೂ ಸಿಬ್ಬಂದಿ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.