ಬೀದರ್: ವಿದೇಶದಿಂದ ಮರಳಿರುವ ಬಸವಕಲ್ಯಾಣದ ಮೂವರು ಯುವಕರ ತಪಾಸಣೆ ನಡೆಸಿರುವ ವೈದ್ಯಕೀಯ ತಂಡ, ಕೋವಿಡ್–19 ಸೋಂಕಿನ ಆತಂಕದಿಂದ ಅವರ ಮೇಲೆ ನಿಗಾ ಇಟ್ಟಿದೆ.

ಬಸವಕಲ್ಯಾಣ ತಾಲ್ಲೂಕಿನ ಕಿಟ್ಟಾ ಗ್ರಾಮದ ಇಬ್ಬರು ಹಾಗೂ ಮಂಠಾಳದ ಒಬ್ಬರ ಮೇಲೆ ಔಷಧ ಸಿಂಪರಣೆ ಮಾಡಿ ಆಸ್ಪತ್ರೆಯ ವಿಶೇಷ ವಾರ್ಡ್‌ಗೆ ದಾಖಲು ಮಾಡಲಾಗಿದೆ.

ಕೆಲಸಕ್ಕಾಗಿ ವಿದೇಶಕ್ಕೆ ಹೋಗಿದ್ದ ಕಿಟ್ಟಾ ಗ್ರಾಮದ ಜಗನ್ನಾಥ ಎನ್ನುವವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಜಗನ್ನಾಥ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಲು ಯುವಕರು ಇಲ್ಲಿಗೆ ಬಂದಿದ್ದಾರೆ. ಅವರಲ್ಲಿ ಒಬ್ಬರು ಅನಾರೋಗ್ಯದಿಂದ ಬಳಲಿತ್ತುರುವ ಕಾರಣ ಅವರನ್ನು ಬಸವಕಲ್ಯಾಣದ ಆಸ್ಪತ್ರೆಗೆ ದಾಖಲು ಮಾಡಲಾಯಿತು. ನಂತರ ಉಳಿದ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿ ಅವರ ಮೇಲೆ ನಿಗಾ ಇಡಲಾಗಿದೆ.

‘ಮೂವರು ಯುವಕರು ಒಮನ್ ಹಾಗೂ ಸೌದಿಅರೇಬಿಯಾ ಪ್ರವಾಸ ಮಾಡಿ ಬಂದಿರುವ ಮಾಹಿತಿ ಇದೆ. ಮೂವರ ರಕ್ತ ಹಾಗೂ ಮೂಗಿನ ಶ್ರಾವದ ಮಾದರಿ ಪಡೆದು ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಇವರನ್ನು 14 ದಿನಗಳ ಕಾಲ ನಿಗಾದಲ್ಲಿ ಇಡಲಾಗುವುದು’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.