ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಲಸೂರ: ಕಂಬಗಳಿದ್ದರೂ ಉರಿಯದ ಬೀದಿ ದೀಪ

ಕತ್ತಲೆಯಲ್ಲಿ ಜನ ಸಂಚಾರ: ಅಧಿಕಾರಿಗಳ ವಿರುದ್ಧ ಜನರ ಅಸಮಾಧಾನ
ಗುರುಪ್ರಸಾದ್ ಮೆಂಟೇ
Published 19 ಮಾರ್ಚ್ 2024, 4:54 IST
Last Updated 19 ಮಾರ್ಚ್ 2024, 4:54 IST
ಅಕ್ಷರ ಗಾತ್ರ

ಹುಲಸೂರ: ‘ಪಟ್ಟಣದ ಭಾಲ್ಕಿ -ಬಸವಕಲ್ಯಾಣಕ್ಕೆ ಹಾದು ಹೋಗಿರುವ ಹೆದ್ದಾರಿಯ ವಿಭಜಕದಲ್ಲಿ ಅಳವಡಿಸಿರುವ ಬೀದಿ ದೀಪಗಳು ಸರಿಯಾಗಿ ಉರಿಯದೆ, ಜನರು ರಾತ್ರಿ ಹೊತ್ತು ಕತ್ತಲಲ್ಲಿ ತಿರುಗಾಡುವಂತಾಗಿದೆ.

‘ಪಟ್ಟಣದ ಮುಖ್ಯ ರಸ್ತೆಯಲ್ಲಿ ವಿದ್ಯುತ್ ಕಂಬಗಳಿದ್ದರೂ ಬೆಳಕಿನ ವ್ಯವಸ್ಥೆ ಇಲ್ಲ. ಪ್ರತಿ ದಿನ ನೂರಾರು ವಾಹನಗಳು ಸಂಚರಿಸುತ್ತವೆ. ರಾತ್ರಿ ಹೊತ್ತು ವಾಹನಗಳ ದಟ್ಟಣೆ ಹೆಚ್ಚಿರುತ್ತದೆ. ಜನರು ಕೂಡ ಓಡಾಡುತ್ತಿರುತ್ತಾರೆ. ಇದನ್ನು ಕಂಡರೂ ಗ್ರಾಮ ಪಂಚಾಯಿತಿ ಅಧಿಕಾರಿಗಳು ದುರಸ್ತಿಗೆ ಮುಂದಾಗುತ್ತಿಲ್ಲ’ ಎಂಬುದು ಸಾರ್ವಜನಿಕರ ದೂರು.

ರಸ್ತೆಯ ಎರಡು ಬದಿಯಲ್ಲಿ ಅವೈಜ್ಞಾನಿಕವಾಗಿ ಚರಂಡಿಗಳನ್ನು ನಿರ್ಮಿಸಲಾಗಿದೆ. ಕಾಮಗಾರಿಯೂ ಕಳಪೆಯಾಗಿರುವುದರಿಂದ ಚರಂಡಿ ಮೇಲಿನ ಕಾಂಕ್ರೀಟ್‌ ಅಲ್ಲಲ್ಲಿ ಹಾನಿಗೀಡಾಗಿದೆ. ಬೀದಿ ದೀಪವೂ ಬೆಳಗದಿರುವುದರಿಂದ ಪಾದಚಾರಿ ಮಾರ್ಗದಲ್ಲಿ ನಡೆದಾಡುವವರು ಬಿದ್ದು ಗಾಯಗೊಂಡಿದ್ದಾರೆ.

‘ಪಟ್ಟಣದಲ್ಲಿ ರಾತ್ರಿ ಬೀದಿ ದನಗಳು ಈ ರಸ್ತೆಯಲ್ಲಿ ಓಡಾಡುತ್ತವೆ. ಕೆಲ ದಿನಗಳ ಹಿಂದಷ್ಟೇ ಅಜಾಗರೂಕತೆಯಿಂದ ವಾಹನ ಸವಾರರು ಅಪಘಾತಕ್ಕೀಡಾಗಿದ್ದಲ್ಲದೇ ಒಂದು ವಿದ್ಯುತ್ ಕಂಬ ಕೆಳಗೆ ಬಿದ್ದಿದೆ. ರಸ್ತೆಯಲ್ಲಿ ಉರಿಯದ ಬೀದಿ ದೀಪಗಳದ್ದೇ ಬಲುದೊಡ್ಡ ಸಮಸ್ಯೆಯಾಗಿ ಸಾರ್ವಜನಿಕರನ್ನು ಕಾಡತೊಡಗಿದೆ. ಕಳೆದ ಕೆಲ ಸಮಯದಿಂದ ಇಲ್ಲಿ ಬೀದಿ ದೀಪಗಳು ಸರಿಯಾಗಿ ಉರಿಯುತ್ತಿಲ್ಲ ಎಂದು ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ’ ಎಂದು ಸಾರ್ವಜನಿಕರು ದೂರಿದ್ದಾರೆ.

ಕಳ್ಳತನಕ್ಕೂ ಕಾರಣ: ಬೀದಿ ದೀಪಗಳು ಇಲ್ಲದೆ ಇರುವುದರಿಂದ ಕೆಲ ಕಡೆ ಇದನ್ನೇ ಬಂಡವಾಳ ಮಾಡಿಕೊಂಡ ಕಳ್ಳರು ಕಳ್ಳತನಕ್ಕೆ ಇಳಿಯುತ್ತಾರೆ. ನಂದಿನಿ ಹಾಲಿನ ವಾಹನದವರು ಕೆಲವೊಮ್ಮೆ ನಗರಕ್ಕೆ ಮಧ್ಯರಾತ್ರಿ ಬಂದು ಹಾಲಿನ ಪಾಕೆಟ್‌ಗಳನ್ನು ಅಂಗಡಿ ಬಳಿ ಇಟ್ಟು ಹೋಗುತ್ತಾರೆ. ಕಳ್ಳರು ಇದನ್ನು ಗಮನಿಸಿ ಕಳವು ಮಾಡಿಕೊಂಡು ಹೋಗಿದ್ದಾರೆ.

ಗಡಿಯಲ್ಲಿನ ಪ್ರಮುಖ ಪಟ್ಟಣ ಇದು. ಬೀದಿದೀಪದ ವ್ಯವಸ್ಥೆ ಅತ್ಯಂತ ಅವಶ್ಯಕ. ಅದೇ ಇಲ್ಲದಿರುವುದರಿಂದ ಜನರಿಗೆ ತೊಂದರೆಯಾಗುತ್ತಿದೆ. ಕೂಡಲೇ ದೀಪಗಳನ್ನು ಬೆಳಗಿಸಲು ಗ್ರಾಮ ಪಂಚಾಯಿತಿ ಕ್ರಮ ವಹಿಸಬೇಕು’ ಎಂಬುದು ಸ್ಥಳೀಯರ ಆಗ್ರಹ. 

ಹುಲಸೂರು ಪಟ್ಟಣದ ಭಾಲ್ಕಿ -ಬಸವಕಲ್ಯಾಣಕ್ಕೆ ಹಾದು ಹೋಗಿರುವ ಹೆದ್ದಾರಿಯ ವಿಭಜಕದಲ್ಲಿ ಅಳವಡಿಸಿರುವ ಬೀದಿ ದೀಪಗಳು
ಹುಲಸೂರು ಪಟ್ಟಣದ ಭಾಲ್ಕಿ -ಬಸವಕಲ್ಯಾಣಕ್ಕೆ ಹಾದು ಹೋಗಿರುವ ಹೆದ್ದಾರಿಯ ವಿಭಜಕದಲ್ಲಿ ಅಳವಡಿಸಿರುವ ಬೀದಿ ದೀಪಗಳು
- ಗುಲಾಮ ಬಡಾಯಿ ಸಾಮಾಜಿಕ ಕಾರ್ಯಕರ್ತ
- ಗುಲಾಮ ಬಡಾಯಿ ಸಾಮಾಜಿಕ ಕಾರ್ಯಕರ್ತ

‘ಗ್ರಾಮ ಪಂಚಾಯಿತಿ ಅಧಿಕಾರಿಗಳು ಕಂಡೂ ಕಾಣದಂತೆ ಇದ್ದಾರೆ. ಬೀದಿ ದೀಪಗಳು ಸರಿಯಾಗಿ ಉರಿಯದೆ ಹೋದರೆ ಸಾರ್ವಜನಿಕರು ಹೇಗೆ ಓಡಾಡಬೇಕು? ಅಧಿಕಾರಿಗಳು ಕೂಡಲೇ ಸಮಸ್ಯೆ ಪರಿಹರಿಸಲು ಮುಂದಾಗಬೇಕಿದೆ

- ಪ್ರವೀಣ್ ಕಡಾದಿ ಜಾಗತಿಕ ಲಿಂಗಾಯತ ಮಹಾಸಭಾ ತಾಲ್ಲೂಕು ಅಧ್ಯಕ್ಷ

‘ಬೀದಿ ದೀಪ ಸರಿಯಾಗಿ ಉರಿಯದಿರುವುದರಿಂದ ಓಡಾಟಕ್ಕೆ ತೊಂದರೆಯಾಗಿದೆ. ಹೆಣ್ಣು ಮಕ್ಕಳು ರಾತ್ರಿ ವೇಳೆ ಇಲ್ಲಿ ಓಡಾಡಲು ಭಯ ಪಡುತ್ತಾರೆ. ಕೂಡಲೇ ಅಧಿಕಾರಿಗಳು ಸೂಕ್ತ ಕ್ರಮ ವಹಿಸಬೇಕಿದೆ

- ಗುಲಾಮ ಬಡಾಯಿ ಸಾಮಾಜಿಕ ಕಾರ್ಯಕರ್ತ

Quote - ‘ಬೀದಿದೀಪ ಸರಿಯಾಗಿ ಉರಿಯದ ಬಗ್ಗೆ ಈಗಾಗಲೇ ನನ್ನ ಗಮನಕ್ಕೆ ಬಂದಿದೆ. ಆದಷ್ಟು ಬೇಗ ಸಾರ್ವಜನಿಕರಿಗೆ ತೊಂದರೆಯಾಗದಂತೆ ಬೀದಿ ದೀಪ ಸರಿಪಡಿಸಲು ಕ್ರಮವಹಿಸಲಾಗುವುದು - ರಮೇಶ ಮಿಲಿಂದಕರ ಪಿಡಿಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT