ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನಟ ಪುನೀತ್‌ ರಾಜಕುಮಾರ ಜನ್ಮದಿನ ಆಚರಣೆ

Published 19 ಮಾರ್ಚ್ 2024, 3:10 IST
Last Updated 19 ಮಾರ್ಚ್ 2024, 3:10 IST
ಅಕ್ಷರ ಗಾತ್ರ

ಬೀದರ್‌: ಕರ್ನಾಟಕ ರಕ್ಷಣಾ ವೇದಿಕೆ ಕಾವಲುಪಡೆಯಿಂದ ನಗರದಲ್ಲಿ ಭಾನುವಾರ ದಿವಂಗತ ನಟ ಪುನೀತ್‌ ರಾಜಕುಮಾರ ಅವರ ಜನ್ಮದಿನ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದವರಿಗೆ ಕರ್ನಾಟಕ ರತ್ನ ಪುನೀತ್‌ ರಾಜಕುಮಾರ ಪ್ರಶಸ್ತಿ ಪ್ರದಾನ ಮಾಡಲಾಯಿತು. ಡಾ. ಸುನೀತಾ ಬಿಕ್ಲೆ, ದೀಪಿಕಾ ಮಲ್ಲಪ್ಪ, ಶೇಷಪ್ಪಾ ಚಿಟ್ಟಾ, ಪೀಟರ್‌ ಚಿಟಗುಪ್ಪ, ಪ್ರಶಾಂತ ಭಾವಿಕಟ್ಟಿ, ಶ್ರೀಕಾಂತ ಭವಾನಿ, ನವೀನ್‌ ಚಿಟ್ಟಾಕರ್, ಆನಂದ ಗಂಟೆ, ನವೀನ್ ಅಲ್ಲಾಪೂರ, ಸುಧಾಕರ ಕೋಟೆ, ಗೋಪಾಲ ದೊಡ್ಡಿ, ಚಿದಾನಂದ ಆಣದೂರು, ವಿಜಯಕುಮಾರ ಹಿಪ್ಪಳಗಾಂವ್, ರಾಘವೇಂದ್ರ ಸ್ವಾರಳಿಕರ್, ಮುಬಿನ್ ಎನ್.ಕೆ. ಸ್ಟಾರ್, ಹಣ್ಮು ಪಾಜಿ, ಸಂಜೀವ ಸೂರ್ಯವಂಶಿ, ಮನೋಹರ ಹೊಸಮನಿ, ಅಮೃತ ಮುತ್ತಂಗಿ, ವಿಲ್ಸನ್ ಅನಿಲ್‌, ಶಿರೋಮಣಿ ಮಾಳೆಗಾಂವ, ಧನರಾಜ ಬೇಮಳಖೇಡ ಅವರನ್ನು ಗೌರವಿಸಲಾಯಿತು.

ಕಾವಲುಪಡೆ ರಾಜ್ಯ ಘಟಕದ ಅಧ್ಯಕ್ಷ ಎಚ್. ರಮೇಶ ಕಾರ್ಯಕ್ರಮ ಉದ್ಘಾಟಿಸಿ, ಕನ್ನಡ ನಾಡಿನಲ್ಲಿ ಕನ್ನಡಿಗರ ಹೆಸರಲ್ಲಿ ಸಂಸ್ಥಾಪನೆಯಾಗಿರುವ ಕನ್ನಡ ಪರ ಸಂಘಟನೆಗಳು ಒಂದಾಗಿ ಮುಂದಾಗಿ ಕನ್ನಡ ನಾಡು, ನುಡಿ, ಸಾಹಿತ್ಯ, ಸಂಸ್ಕೃತಿ ಪ್ರಗತಿಗೆ ಹೋರಾಟ ಮಾಡಬೇಕು ಎಂದರು.

12ನೇ ಶತಮಾನದಲ್ಲಿ ವಚನ ಸಾಹಿತ್ಯದ ಮೂಲಕ ಶರಣ ಸಂಕುಲ ನೆಲದ ಭಾಷೆಯನ್ನು ಶ್ರೀಮಂತಗೊಳಿಸಿದ್ದಾರೆ. ಸಮಾನತೆಯ ಸಮಾಜ ನಿರ್ಮಾಣಕ್ಕಾಗಿ ಎಲ್ಲರೂ ಶ್ರಮಿಸಬೇಕಿದೆ.  ರಾಜಕಾರಣ ಬಿಟ್ಟು ಬೀದರ್‌ ಜಿಲ್ಲೆಯ ಅಭಿವೃದ್ಧಿಗೆ ದುಡಿಯಬೇಕಿದೆ ಎಂದು ಹೇಳಿದರು.

ಕಾಂಗ್ರೆಸ್‌ ಮುಖಂಡ ಅಮೃತರಾವ ಚಿಮಕೋಡೆ ಮಾತನಾಡಿ, ಪುನೀತ್‌ ರಾಜಕುಮಾರ ಅವರು ತನ್ನ ದುಡಿಮೆಯ ಸ್ವಲ್ಪ ಭಾಗವನ್ನು ಕೋವಿಡ್‌ನಲ್ಲಿ ಸಂಕಷ್ಟಕ್ಕೆ ಒಳಗಾದವರಿಗೆ ನೆರವು ನೀಡಿದ್ದರು. ನಾಡು ನುಡಿ ವಿಷಯ ಬಂದಾಗ, ಅಪ್ಪನಂತೆ ಚಳವಳಿಯನ್ನು ಕಟ್ಟಿರುವ ಕನ್ನಡ ಕ್ರಾಂತಿವೀರ ಪುನೀತ್‌ ರಾಜಕುಮಾರ ಎಂದು ಹೊಗಳಿದರು.

ವಿಶ್ವ ಕನ್ನಡಿಗರ ಸಂಸ್ಥೆ ಕರ್ನಾಟಕ ಅಧ್ಯಕ್ಷ ಸುಬ್ಬಣ್ಣ ಕರಕನಳ್ಳಿ ಮಾತನಾಡಿ, ಕನ್ನಡದ ನೆಲದವರಾದ ನಾವು ಕನ್ನಡ ಕುಲದವರು ಹೌದು. ಕನ್ನಡವೇ ನಮ್ಮ ಆಡು ಭಾಷೆ, ಆಡಳಿತ ಭಾಷೆ, ಹೋರಾಟ ಭಾಷೆ, ಸಾಹಿತ್ಯ ಕೃಷಿ ಭಾಷೆ, ಭಾವೈಕ್ಯತೆ ಮೂಡಿಸುವ ವಿಶ್ವ ಭಾಷೆಯಾಗಿದೆ ಎಂದರು.

ಕಾವಲುಪಡೆ ಜಿಲ್ಲಾಧ್ಯಕ್ಷ ಅವಿನಾಶ ಬುಧೇರಕರ, ವಿವೇಕ ವಾಲಿ, ಅಭಿ ಕಾಳೆ, ಸಲ್ಮಾನ ಖಾನ್ ಜಾಬಪೇಟ್, ಕರಡ್ಯಾಳ ಆಲ್ಬರ್ಟ್‌ ಕೋಟೆ, ಮಲಿಕ್‌ ಅಮಿತ್‌ ಕೋಟೆ, ಸ್ಟೀಫನ್ ಪೌಲ್, ಸುನೀತ ಬಿಕ್ಲೆ, ಸೆಬಾಸ್ಟಿನ್‌ ಪಾಲ್ಗೊಂಡಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT