ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಟಗಳಲ್ಲಿ ‘ಅಮೃತ ಮಹೋತ್ಸವ ಸಂಭ್ರಮ'

ಆಗಸದಲ್ಲಿ ಏಕಕಾಲಕ್ಕೆ ರಾಷ್ಟ್ರ ಧ್ವಜದ 75 ಪತಂಗಗಳ ಹಾರಾಟ
Last Updated 7 ಜನವರಿ 2023, 12:37 IST
ಅಕ್ಷರ ಗಾತ್ರ

ಬೀದರ್: ಬೀದರ್ ಉತ್ಸವದ ಅಂಗವಾಗಿ ಇಲ್ಲಿಯ ಐತಿಹಾಸಿಕ ಕೋಟೆಯಲ್ಲಿ ಹಮ್ಮಿಕೊಂಡಿರುವ ಪತಂಗ ಉತ್ಸವದಲ್ಲಿ ಶನಿವಾರ ಪಟಗಳಲ್ಲಿ ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮ ಕಂಡು ಬಂದಿತು.

ಬಾನಂಗಳದಲ್ಲಿ ಏಕಕಾಲಕ್ಕೆ ಹಾರಾಡಿದ ರಾಷ್ಟ್ರ ಧ್ವಜದ ಮಾದರಿಯ 75 ಪತಂಗಗಳು ದೇಶಾಭಿಮಾನ ಮೂಡಿಸಿದವು.
250 ಪಟಗಳ ಸರಣಿಯ ರೈಲು ಪಟ, ಬಲೂನ್ ಪಟ, ಡ್ರ್ಯಾಗನ್, ಸ್ಪೈಡರ್ ಮ್ಯಾನ್, ಆಕ್ಟೊಪಸ್ ಆಕೃತಿ, ವೆಂಕಟೇಶ್ವರ, ಭಗತ್‍ಸಿಂಗ್ ಚಿತ್ರ ಹೊಂದಿದ ಪಟಗಳು ಎಲ್ಲರ ಗಮನ ಸೆಳೆದವು.ಎಲ್‍ಇಡಿ ಬಲ್ಬ ಸಹಿತ ಪಟಗಳು ಸಂಜೆ ವೇಳೆ ಆಗಸದಲ್ಲಿ ಬಣ್ಣ ಬಣ್ಣಗಳ ಚಿತ್ತಾರ ಮೂಡಿಸಿದವು. ನೋಡುಗರನ್ನು ಮಂತ್ರಮುಗ್ಧಗೊಳಿಸಿದವು.

ಹೈದರಾಬಾದ್‍ನ ಕೋಹಿನೂರ್ ಕೈಟ್ ಕ್ಲಬ್, ಇಂಡಿಯನ್ ಕೈಟ್ ಕ್ಲಬ್ ಹಾಗೂ ದೊಡ್ಡಬಳ್ಳಾಪುರ ಕೈಟ್ ಕ್ಲಬ್ ಸೇರಿ ಮೂರು ಕೈಟ್ ಕ್ಲಬ್‍ಗಳ ತಂಡಗಳು ಪತಂಗ ಉತ್ಸವದಲ್ಲಿ ಪಾಲ್ಗೊಂಡಿವೆ ಎಂದು ಪತಂಗ ಉತ್ಸವದ ಸಂಯೋಜಕ ರವಿ ಮೂಲಗೆ ತಿಳಿಸಿದರು.
ಪತಂಗ ಹಾರಿಸಲು 15 ಪರಿಣಿತರು ಬಂದಿದ್ದಾರೆ. 150 ಕ್ಕೂ ಹೆಚ್ಚು ಪ್ರಕಾರಗಳ ವೈವಿಧ್ಯಮಯ ಗಾಳಿಪಟಗಳನ್ನು ಹಾರಿಸುತ್ತಿದ್ದಾರೆ. ಪತಂಗ ಉತ್ಸವವನ್ನು ನೋಡುವುದೇ ಕಣ್ಣಿಗೆ ದೊಡ್ಡ ಹಬ್ಬವಾಗಿದೆ ಎಂದು ಹೇಳಿದರು.

ವಿದ್ಯಾರ್ಥಿಗಳು, ಯುವಕರು ಹಾಗೂ ಹಿರಿಯರು ಪತಂಗ ಉತ್ಸವ ವೀಕ್ಷಣೆಗೆ ಅಪಾರ ಸಂಖ್ಯೆಯಲ್ಲಿ ಹರಿದು ಬರುತ್ತಿದ್ದಾರೆ. ನಯನ ಮನೋಹರ ಪತಂಗಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಪತಂಗ ಉತ್ಸವ ಭಾನುವಾರವೂ ಇರಲಿದೆ
ಎಂದು ತಿಳಿಸಿದರು.

ಪತಂಗವಾಗಿ ನಾ ಹಾರಬಲ್ಲೆ...

‘ಪತಂಗವಾಗಿ ನಾ ಹಾರಬಲ್ಲೆ, ತರಂಗವಾಗಿ ನಾ ತೇಲಬಲ್ಲೆ, ಖುಷಿಯಲ್ಲಿ ನಶೆ ಏರಿದೆ, ಹಾರಲೆ, ಹೇ ಕುಣಿಯಲೇ...’
ಪತಂಗ ಉತ್ಸವಕ್ಕೆ ಜೋಶ್ ತುಂಬಿದ ಗೀತೆ ಇದು. ಆಗಸದಲ್ಲಿ ಗಾಳಿ ಪಟಗಳ ಚಿತ್ತಾರ ವೀಕ್ಷಿಸಲು ಬಂದವರು ಈ ಹಾಡಿಗೆ ನಿಂತಲ್ಲೇ ಹೆಜ್ಜೆ ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT