ಬೀದರ್: ದಾಂಪತ್ಯ ಜೀವನ ಸಮರಸದಿಂದ ಕೂಡಿರಬೇಕು ಎಂದು ಬಸವಕಲ್ಯಾಣ ಅನುಭವ ಮಂಟಪದ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು ನುಡಿದರು.
ನಗರದ ಡಾ.ಚನ್ನಬಸವ ಪಟ್ಟದ್ದೇವರು ಪ್ರಸಾದ ನಿಲಯದಲ್ಲಿ ಶುಕ್ರವಾರ ನಡೆದ 155ನೇ ಅನುಭವ ಮಂಟಪ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಬಸವಾದಿ ಶರಣರು ಸತ್ಯ ಶುದ್ಧ ಕಾಯಕದೊಂದಿಗೆ ದಾಂಪತ್ಯ ಜೀವನ ನಡೆಸಿದ್ದರು. ಸಂಸಾರದಲ್ಲಿದ್ದುಕೊಂಡೇ ಮನುಕುಲದ ಕಲ್ಯಾಣಕ್ಕೆ ಶ್ರಮಿಸಿದ್ದರು. ಆದರ್ಶ ದಾಂಪತ್ಯಕ್ಕೆ ಅವರ ತತ್ವಗಳನ್ನು ಪಾಲಿಸಬೇಕು. ಇಂದು ಮಾನವೀಯತೆ ಮರೆಯಾಗಿದೆ. ಶರಣರು, ಸಂತರ ವಾಣಿ ಆಲಿಕೆಯಿಂದ ಮಾನವೀಯತೆ, ಪ್ರೀತಿ, ಭಾತೃತ್ವದ ಭಾವನೆ ಜಾಗೃತಗೊಳ್ಳುತ್ತದೆ ಎಂದು ಹೇಳಿದರು.
ಲಿಂಗಾಯತ ಅಭಿವೃದ್ಧಿ ಸಂಘದ ಅಧ್ಯಕ್ಷ ಬಿ.ಜಿ. ಶೆಟಕಾರ ಕಾರ್ಯಕ್ರಮ ಉದ್ಘಾಟಿಸಿದರು. ಕರ್ನಾಟಕ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಜಗನ್ನಾಥ ಹೆಬ್ಬಾಳೆ, ಪ್ರಸಾದ ನಿಲಯದ ಕಾರ್ಯದರ್ಶಿ ಪ್ರೊ. ಎಸ್.ಬಿ. ಬಿರಾದಾರ ಮಾತನಾಡಿದರು.
ಮಹಾಲಿಂಗ ಸ್ವಾಮೀಜಿ ನೇತೃತ್ವ ವಹಿಸಿದ್ದರು. ರಾಷ್ಟ್ರೀಯ ಬಸವ ದಳದ ರಾಷ್ಟ್ರೀಯ ಅಧ್ಯಕ್ಷ ಬಸವರಾಜ ಧನ್ನೂರ, ಜಿ.ಪಂ ಮಾಜಿ ಸದಸ್ಯೆ ಶಕುಂಲಾ ಬೆಲ್ದಾಳೆ, ಅಶೋಕ ಪಾಟೀಲ, ವೀರಭದ್ರಪ್ಪ ಬುಯ್ಯಾ, ದಾಸೋಹಿ ಗುಂಡಮ್ಮ ಕಲ್ಯಾಣರಾವ ಜಾಬಾ, ವೈಜಿನಾಥ ಪಾಟೀಲ, ಮೀನಾಕ್ಷಿ ಪಾಟೀಲ, ಉಮೇಶ ಜಾಬಾ, ಲಕ್ಷ್ಮಿ ಬಿರಾದಾರ, ಶಾಂತಕುಮಾರ ಸಂಗೋಳಗಿ, ಸೋಮಶೇಖರ ಪಾಟೀಲ ಗಾದಗಿ, ಶ್ರೀಕಾಂತ ಬಿರಾದಾರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.