ಬೀದರ್: ಕೇಂದ್ರ ಸರ್ಕಾರದ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ ಅಧೀನದ ನೆಹರು ಯುವ ಕೇಂದ್ರವು 2022-23ನೇ ಸಾಲಿನ ಜಿಲ್ಲಾಮಟ್ಟದ ಯುವ ಮಂಡಳ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಿದೆ.

ಆಯ್ಕೆಯಾದ ಯುವಕ, ಮಹಿಳಾ ಮಂಡಳಗಳಿಗೆ ₹25 ಸಾವಿರ ಹಾಗೂ ಪ್ರಶಸ್ತಿ ಪತ್ರ ನೀಡಲಾಗುವುದು ಎಂದು ಜಿಲ್ಲಾ ಯುವ ಅಧಿಕಾರಿ ಮಯೂರಕುಮಾರ ಗೋರಮೆ ತಿಳಿಸಿದ್ದಾರೆ.

ಅರ್ಜಿ ಸಲ್ಲಿಸುವ ಯುವ ಮಂಡಳಗಳು ಕರ್ನಾಟಕ ಸಂಘ ಸಂಸ್ಥೆಗಳ ಕಾಯ್ದೆ 1860 ರ ಅಡಿ ನೋಂದಣಿಯಾಗಿರಬೇಕು. ಬೀದರ್ನ ನೆಹರೂ ಯುವ ಕೇಂದ್ರದ ಕಚೇರಿಯಲ್ಲಿ ಸಂಯೋಜನೆಗೊಂಡಿರಬೇಕು. ಆರೋಗ್ಯ, ಕುಟುಂಬ ಕಲ್ಯಾಣ, ಪರಿಸರ ಸಂರಕ್ಷಣೆ, ವೃತ್ತಿ ತರಬೇತಿ, ಮಹಿಳಾ ಸಬಲೀಕರಣ, ಸಾಕ್ಷರತೆ, ಸ್ವಯಂ ಉದ್ಯೋಗ, ಸಾಂಸ್ಕೃತಿಕ ಕಾರ್ಯಕ್ರಮ, ಕ್ರೀಡೆ, ಸಮಾಜ ಸೇವಾ ಚಟುವಟಿಕೆ, ಸಾಮಾಜಿಕ ಪಿಡುಗುಗಳ ವಿರುದ್ಧ ಜಾಗೃತಿ ಮೂಡಿಸಿರಬೇಕು ಎಂದು ಹೇಳಿದ್ದಾರೆ.

ಅರ್ಜಿ ಸಲ್ಲಿಸಲು ಡಿ. 10 ಕೊನೆಯ ದಿನವಾಗಿದೆ. ಆಸಕ್ತ ಯುವಕ, ಮಹಿಳಾ ಮಂಡಳಗಳು ತಮ್ಮ ಕಾರ್ಯ ಚಟುವಟಿಕೆಗಳ ದಾಖಲೆಗಳು, ದಿನಪತ್ರಿಕೆಗಳಲ್ಲಿ ಪ್ರಕಟವಾದ ವರದಿಗಳ ಪ್ರತಿ, 2021-22ನೇ ಸಾಲಿನ ಆಡಿಟ್ ವರದಿ, ನವೀಕರಣ ಪ್ರಮಾಣ ಪತ್ರದೊಂದಿಗೆ ನಗರದ ಮೈಲೂರಿನ ಶಾಸ್ತ್ರಿನಗರದ ಬಿಲಾಲ್ ಮಸೀದಿ ಎದುರಿನ ಬಿಲಾಲ್ ಮೆಡಿಕಲ್ ಪಕ್ಕದಲ್ಲಿನ ಮನೆ ಸಂಖ್ಯೆ 17-1-394 ರಲ್ಲಿ ಇರುವ ನೆಹರೂ ಯುವ ಕೇಂದ್ರದ ಕಚೇರಿಯಲ್ಲಿ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 08482-235360 ಅಥವಾ ಮೊಬೈಲ್ ಸಂಖ್ಯೆ 9762860806 ಗೆ ಸಂಪರ್ಕಿಸಬಹುದು ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.