ಶನಿವಾರ, 7 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೀದರ್‌ | ಪೂರ್ವಾರಾಧನೆ; ರಾಯರ ಪಲ್ಲಕ್ಕಿ ಮೆರವಣಿಗೆ

Published 20 ಆಗಸ್ಟ್ 2024, 13:26 IST
Last Updated 20 ಆಗಸ್ಟ್ 2024, 13:26 IST
ಅಕ್ಷರ ಗಾತ್ರ

ಬೀದರ್‌: ಪೂರ್ವಾರಾಧನೆ ಅಂಗವಾಗಿ ಗುರು ರಾಘವೇಂದ್ರ ಸ್ವಾಮಿಗಳ ಪಲ್ಲಕ್ಕಿ ಮೆರವಣಿಗೆ ನಗರದಲ್ಲಿ ಮಂಗಳವಾರ ಸಡಗರ, ಸಂಭ್ರಮದಿಂದ ಜರುಗಿತು.

ಅಲಂಕೃತ ಪಲ್ಲಕ್ಕಿಯಲ್ಲಿ ರಾಘವೇಂದ್ರ ಸ್ವಾಮಿಗಳ ಮೂರ್ತಿಯ ಮೆರವಣಿಗೆ ನಗರದ ಪ್ರಮುಖ ಮಾರ್ಗಗಳಲ್ಲಿ ಶ್ರದ್ಧಾ, ಭಕ್ತಿಯಿಂದ ನಡೆಯಿತು.

ನಗರದ ಕೆಇಬಿ ರಾಘವೇಂದ್ರ ಮಂದಿರದಿಂದ ಆರಂಭಗೊಂಡ ಮೆರವಣಿಗೆ ಶಹಾಗಂಜ್‌, ಚೌಬಾರ, ನಯಾಕಮಾನ್‌, ಬಸವೇಶ್ವರ ವೃತ್ತದ ಮೂಲಕ ಹಾದು ಪುನಃ ರಾಘವೇಂದ್ರ ಮಂದಿರದಲ್ಲಿ ಕೊನೆಗೊಂಡಿತು.

ಆನಂತರ ಮಂದಿರದಲ್ಲಿ ರಥೋತ್ಸವ, ಚಕ್ರಿ ಭಜನೆ ಕಾರ್ಯಕ್ರಮ ನಡೆಯಿತು. ರಾಘವೇಂದ್ರ ಸ್ವಾಮಿ ದೇವಸ್ಥಾನದ ಅಧ್ಯಕ್ಷ ಸುಧಾಕರರಾವ್‌, ಸಂಸ್ಥಾನ ಸಾಧುಘಾಟ್‌ದ ಪಾಂಡುರಂಗ ಮಹಾರಾಜ, ಪ್ರಭಾಕರರಾವ್‌, ಕಲ್ಯಾಣರಾವ್‌, ರಮೇಶ ಜೋಶಿ, ಸುಧಾಕರ್‌ ರಾವ್‌ ಮತ್ತಿತರರು ಹಾಜರಿದ್ದರು.

ಬುಧವಾರ (ಆ.21) ಮಧ್ಯಾರಾಧನೆ, ಗುರುವಾರ (ಆ.22) ಉತ್ತರಾಧನೆ ಅಂಗವಾಗಿ ರಥೋತ್ಸವ, ಸಂಗೀತ ಕಾರ್ಯಕ್ರಮಗಳು ನಡೆಯಲಿವೆ ಎಂದು ಪಾಂಡುರಂಗ ಮಹಾರಾಜ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT