ಸೋಮವಾರ, ಮೇ 17, 2021
27 °C

ಬೀದರ್ | ಜೆಸಿಬಿ ಬಳಸಿ ಬ್ಯಾಂಕ್‌ ಕಳವಿಗೆ ಯತ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಮಲನಗರ (ಬೀದರ್‌ ಜಿಲ್ಲೆ): ತಾಲ್ಲೂಕಿನ ಸಂತಪುರ ಗ್ರಾಮದಲ್ಲಿರುವ ಎಸ್‌ಬಿಐ ಶಾಖೆಯಿಂದ ಸೋಮವಾರ ರಾತ್ರಿ ಕಳ್ಳರು ಜೆಸಿಬಿ ಯಂತ್ರ ಬಳಸಿ ಬಂಗಾರ ಹಾಗೂ ಹಣ ಕಳವು ಮಾಡಲು ಯತ್ನಿಸಿದ್ದಾರೆ.

ಕಳ್ಳರು ಜೆಸಿಬಿ ಯಂತ್ರದಿಂದ ಕಿಟಕಿ ಒಡೆದು ಒಳ ನುಗ್ಗಿದ್ದಾರೆ. ತಿಜೋರಿ ಒಡೆಯಲು ಹೋದಾಗ ಬ್ಯಾಂಕ್‍ನ ಆಪತ್ಕಾಲಿನ ಸೈರನ್ ಮೊಳಗಿದ್ದು, ಅದನ್ನು ಕೇಳಿಸಿಕೊಂಡ ಸುತ್ತಮುತ್ತಲಿನ ಜನ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. 

ಸಂತಪುರ ಪೊಲೀಸ್ ಠಾಣೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು. ಪೊಲೀಸರು ಬರುವುದನ್ನು ಕಂಡು ಕಳ್ಳರು, ಜೆಸಿಬಿ ಯಂತ್ರವನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ. ಬ್ಯಾಂಕ್‍ನಲ್ಲಿ ಯಾವುದೇ ವಸ್ತು ಕಳವು ಆಗಿಲ್ಲ ಎಂದು ಮೂಲಗಳು ತಿಳಿಸಿವೆ.

ಸ್ಥಳಕ್ಕೆ ಭಾಲ್ಕಿ ಡಿವೈಎಸ್‍ಪಿ ಡಾ.ದೇವರಾಜ, ಔರಾದ್ ಸಿಪಿಐ ಶ್ರೀಕಾಂತ ಅಲ್ಲಾಪುರೆ, ಕಮಲನಗರ ಸಿಪಿಐ ಪಾಲಕ್ಷಯ್ಯ ಹಿರೇಮಠ, ಬೆರಳಚ್ಚು ತಜ್ಞರು ಪರಿಶೀಲನೆ ನಡೆಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು