ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಯೋಧ್ಯೆ ಅಕ್ಷತೆಗೆ ಭವ್ಯ ಸ್ವಾಗತ

ಜ.1 – 15ರ ವರಗೆ ಜಿಲ್ಲಾದ್ಯಂತ ಅಕ್ಷತಾ ವಿತರಣಾ ಅಭಿಯಾನ
Published 23 ಡಿಸೆಂಬರ್ 2023, 14:42 IST
Last Updated 23 ಡಿಸೆಂಬರ್ 2023, 14:42 IST
ಅಕ್ಷರ ಗಾತ್ರ

ಬೀದರ್: ಶನಿವಾರ ನಗರಕ್ಕೆ ಬಂದ ಅಯೋಧ್ಯೆಯ ರಾಮ ಮಂದಿರದಲ್ಲಿ ಅಕ್ಕಿಗೆ ಅರಿಶಿಣ ಹಾಗೂ ದೇಸಿ ಹಸುವಿನ ತುಪ್ಪ ಬೆರೆಸಿ ವಿಶೇಷ ಪೂಜೆ ಮಾಡಿದ ಹಿತ್ತಾಳೆ ಕಳಶವನ್ನು ಭಕ್ತರು ಪೂಜೆ ಮಾಡಿ ಸ್ವಾಗತಿಸಿದರು.

ನಗರದ ಸರಸ್ವತಿ ಶಾಲೆಯ ಆವರಣದಲ್ಲಿ ಶ್ರೀ ರಾಮ ಜನ್ಮಭೂಮಿ ತಿರ್ಥಕ್ಷೇತ್ರ ಟ್ರಸ್ಟ್ ಹಾಗೂ ವಿಶ್ವ ಹಿಂದೂ ಪರಿಷತ್ ವತಿಯಿಂದ ಕಳಶಕ್ಕೆ ಪೂಜೆ ಸಲ್ಲಿಸಲಾಯಿತು.

ಈ ವೇಳೆ ಮಾತನಾಡಿದ ಅಕ್ಷತಾ ವಿತರಣಾ ಸಮಿತಿಯ ಕಲಬುರಗಿ ವಿಭಾಗ ಸಂಯೋಜಕ ಪ್ರವಿಣ ಕುಲಕರ್ಣಿ ‘ಜನವರಿ 1 ರಿಂದ 15 ವರಗೆ ಜಿಲ್ಲಾದ್ಯಂತ ಅಕ್ಷತಾ ವಿತರಣಾ ಅಭಿಯಾನ ನಡೆಯಲಿದೆ. ಈ ವೇಳೆ ಶ್ರೀರಾಮನ ಭಾವಚಿತ್ರ ಹಾಗೂ ಕರಪತ್ರ ವಿತರಿಸಿ ರಾಮ ಮಂದಿರ ಸ್ಥಾಪನೆಯ ವಿಷಯ ಮುಟ್ಟಿಸುವುದು. ಜ.22 ರಂದು ಬೆಳಿಗ್ಗೆ 11 ರಿಂದ ಮದ್ಯಾಹ್ನ 2 ಗಂಟೆ ವರೆಗೆ ಪ್ರತಿ ಗ್ರಾಮದಲ್ಲಿ ರಾಮನ ವಿಶೇಷ ಪೂಜೆ, ಭಜನೆ ಮಾಡುವುದು. ಜೊತೆಗೆ ಅಯೋಧ್ಯೆಯಲ್ಲಿನ ಕಾರ್ಯಕ್ರಮದ ನೇರಪ್ರಸಾರ ವೀಕ್ಷಿಸುವುದು. ಆ ದಿನ ಸಂಜೆ ಪ್ರತಿ ಮನೆಯ ಮುಂದೆ ಐದು ಮಣ್ಣಿನ ಹಣತೆಯ ದೀಪ ಹಚ್ಚವಂತೆ ಅಭಿಯಾನದ ವೇಳೆ ತಿಳಿಸಲಾಗುವುದು’ ಎಂದು ಹೇಳಿದರು.

ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿಭಾಗ ಸಹ ಸಂಘ ಸಂಚಾಲಕ ಹಣಮಂತರಾವ ಪಾಟೀಲ, ವಿಭಾಗ ಪ್ರಚಾರಕ ವಿಜಯ ಮಹಾಂತೇಶ, ವಿಶ್ವ ಹಿಂದು ಪರಿಷತ್ ರಾಜ್ಯ ಕಾರ್ಯಕಾರಿಣಿ ಸದಸ್ಯ ರಾಮಕೃಷ್ಣ ಸಾಳೆ, ಜಿಲ್ಲಾದ್ಯಕ್ಷ ಸತೀಶ್ ನೌಬಾದೆ, ಪ್ರಮುಖರಾದ ಸತೀಶ್ ಮುದಾಳೆ, ಅಂಬರೀಶ್ ಸುಲೆಗಾಂವೆ, ಉಮಕಾಂತ ಮೇತ್ರೆ, ಜೈಭೀಮ ಸೋಲಾಪುರೆ, ಗುರುನಾಥ ರಾಜಗೀರಾ, ಭೀಮಣ್ಣ ಸೋರಳ್ಳಿ, ವಿಶಾಲ ಅತಿವಾಳೆ, ಸಂದೀಪ ತೆಲಗಾಂವಕರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT